This page has not been fully proofread.

seses
 
ಯೋಗದ ಮೂನೆಯಲ್ಲಿ ಪುಟಕೊಡಲು ಮಾಡಿದ
 
ಫಲ ".
 
ಸಂಗೀತ ಪಾರಿಭಾಷಿಕ ಕೋಶ
 
ಪ್ರಯತ್ನದ ಶ್ರೇಷ್ಠತಮ
 
ಈ ಕಾವ್ಯದಲ್ಲಿ ಅತಿ ಸುಂದರವಾದ ಪ್ರಣಯ ಪ್ರಪಂಚವೊಂದು ಕಣ್ಣಿಗೆ
ಕಟ್ಟುವಂತೆ ಚಿತ್ರಿತವಾಗಿದೆ. ಹೊರನೋಟಕ್ಕೆ ಶೃಂಗಾರರಸ ನೊರೆಗಟ್ಟಿ ಹರಿಯುವಂತೆ
ಕಾಣುತ್ತಿದ್ದರೂ, ಇಲ್ಲಿ ಕಂಡುಬರುವುದು ನವ ವಿಧ ಭಕ್ತಿಗಳಲ್ಲಿ ಒಂದಾದ ಮಧುರ
ಭಕ್ತಿ. ಪಿತಾಪುತ್ರ, ಯಜಮಾನ ಸೇವಕ ಈ ಸಂಬಂಧವನ್ನು ಕಲ್ಪಿಸಿದರೆ
ಭಕ್ತಿ ಮಾರ್ಗವನ್ನು ಹರಡಲು ಆಗುವುದಿಲ್ಲವೆಂದು ಭಾವಿಸಿ ನಾಯಕ-ನಾಯಕೀ
ಭಾವವನ್ನು ಬಳಸಿದ್ದಾನೆ. ಶ್ರೀಕೃಷ್ಣನು ನಾಯಕ, ನಯನ ಮನೋಹರಳಾದ
ರಾಧೆ ನಾಯಕಿ, ಗೋಪಿಯರು ಸಖಿಯರು. ಗೋಪಿಯರೆಲ್ಲರೂ ಶ್ರೀಕೃಷ್ಣನನ್ನು
ಕಂಡು ಪರವಶರಾಗುತ್ತಾರೆ. ಶ್ರೀಕೃಷ್ಣನು ಸೌಂದರ್ಯ ನಿಧಿಯಾದ ರಾಧೆಯನ್ನು
ಕಂಡು ಮುಗ್ಧನಾಗುತ್ತಾನೆ. ಇವುಗಳೆಲ್ಲರ ವಿವರಣೆಯಲ್ಲಿ ಜಯದೇವನು ತನ್ನ
ಅದ್ಭುತ ಕವಿತಾಶಕ್ತಿಯನ್ನು ತೋರ್ಪಡಿಸಿದ್ದಾನೆ. ಸಂಸ್ಕೃತವನ್ನು ಅರಿಯದವರಿಗೂ
ಗೀತಗೋವಿಂದವು ಆದರಣೀಯವಾಗಬಲ್ಲುದು. ಇಲ್ಲಿಯ ಮಾತುಗಳ ಜೋಡಣೆ
ಅಂತಹುದು. ಅಪೂರ್ವವಾದ ಸಂಗೀತ ಮಾಧುರ್ಯವು ಇಲ್ಲಿಯ ಮಾತುಗಳಲ್ಲಿ
ಅರ್ಥಕ್ಕೆ ತಕ್ಕ ಮಾತುಗಳು ಬರುವುದರಿಂದ ಗೀತೆಯನ್ನು
ಹಾಡುತ್ತಿರುವಂತೆಯೇ ಭಾಷೆ ಬರದವನೂ ಭಾವಪರವಶನಾಗಬಲ್ಲ. ಇಂತಹ
ಕಾವ್ಯ ಮತ್ತೊಂದಿಲ್ಲ. ಜಯದೇವನು - ನಾದಲೋಲ , ಪೂಜಾ ಕಾಲದಲ್ಲಿ ತನ್ನ
ಗಾನಕ್ಕೆ ಮೇಳೆಸುವಂತೆ ತನ್ನ ಪತ್ನಿಯಾದ ಪದ್ಮಾವತಿಯನ್ನು ನಾಟ್ಯವಾಡಿಸುತ್ತಿದ್ದ
ನಲ್ಲದೆ ಮಧುರ ಕೋಮಲಕಾಂತಿ ಪದಾವಳಿಯ ' ಪ್ರಯೋಗದಿಂದ ತನ್ನ ಕಾವ್ಯದಲ್ಲಿ
ಸಾಕ್ಷಾತ್ ಸರಸ್ವತಿಯನ್ನೇ ಕುಣಿಸಿ ಬಿಟ್ಟಿದ್ದಾನೆ. ಕುಲಶೇಖರ ಆಳ್ವಾರರ
ಮುಕುಂದ ಮಾಲಾ ಸ್ತೋತ್ರದಂತೆಯೇ ಇದೂ ಸಹ ಗಾನಕುಶಲರ ಮೆಚ್ಚುಗೆಗೆ
ಪಾತ್ರವಾಗಿದೆ.
 
ಅಡಗಿದೆ.
 
6
 
ತತ್ವದೃಷ್ಟಿಯಿಂದ ಈ ಜಗತ್ತು ಒಂದು ಬೃಂದಾವನ, ಅದರಲ್ಲಿ ಕಾಮಗಂಧ
ವಿಹೀನವಾದ ಪ್ರೇಮಿಕ ಪುರುಷನಾದ ಶ್ರೀಕೃಷ್ಣನು ರಾಧೆಯೊಡನೆ ಕ್ರೀಡಿಸುತ್ತಾನೆ.
ಇವನೇ ಪರಮ ಪುರುಷ, ಪರಮಾತ್ಮ ಅಥವಾ ಪರಬ್ರಹ್ಮ, ರಾಧೆಯೇ ಜೀವಾತ್ಮ
ಜೀವಾತ್ಮನು ಪರಮಾತ್ಮನೊಡನೆ ಬಯಸುವ ಸಂಶ್ಲೇಷೆಯೇ ರಾಧಾಕೃಷ್ಣರ ಪ್ರೇಮ
ವಿಹಾರ. ಮುಕುಂದನ ಸುತ್ತಲೂ ಚಕ್ರಾಕಾರದಲ್ಲಿ ನರ್ತಿಸುವ ಗೋಪಿಯರು
ಭೂಲೋಕದ ಜೀವಿಗಳ ಪ್ರತಿನಿಧಿಗಳು. ಈ ಲಲನಾ ಚಕ್ರದ ನೇಮಿಯಾದ
ಮುರಳೀಧರನು ಜಗನ್ನಾಟಕ ಸೂತ್ರಧಾರ. ಈ ಜಗಜೀವನವೇ ಅವನು ಅಭಿನಯಿ
ಸುತ್ತಿರುವ ಮಹಾರಾಸಲೀಲೆ, ರಾಗ ಭೋಗಗಳ ಬಣ್ಣ ಬಣ್ಣದ ಜ್ವಾಲೆಯಿಂದ
ಆಕರ್ಷಿತರಾಗಿ ಅದರಲ್ಲಿ ಪತಂಗಗಳಂತೆ ಮುನ್ನುಗ್ಗುತ್ತಿರುವ ಮಾನವರನ್ನು ಮೋಹಕ
ವಾದ ವೇಣುಗಾನದಿಂದ ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದಾನೆ.