This page has not been fully proofread.

೨೮೬
 
ಸಂಗೀತ ಪಾರಿಭಾಷಿಕ ಕೋಶ
 
• ಗೀತಗೋಪಾಲ 'ವು • ಗೀತಗೋವಿಂದ 'ದ ಮಾದರಿಯಲ್ಲಿದ್ದರೂ ಅದರ
ಅಂಧಾನುಕರಣೆಯಲ್ಲ. ಇದರಲ್ಲಿ ಗೋಪಿಯರ ಅದೈಹಿಕ ದಿವ್ಯತೆಯಿಂದ ಕೂಡಿದ
ವಿರಹ ಮತ್ತು ಹಾಡುಗಳ ರಚನಾತಂತ್ರವನ್ನು ಕಾಣಬಹುದು ಮಹತ್ವದ
ಸಂಗತಿಗಳನ್ನು ಸುಲಭವಾದ ಭಾಷೆಯಲ್ಲಿ ಹಾಗೂ ಲಯಬದ್ಧವಾದ ಸಂಗೀತದ
ಭಾಷೆಯಲ್ಲಿ ಹೇಳಿರುವುದು ಈ ರಾಜಕವಿಯ ಹಿರಿಮೆಯಾಗಿದೆ.
ಒಡೆಯರಿಗೆ ರಸಿಕಜನ ಕರ್ಣರಸಾಯನೀಕೃತ ಸಂಗೀತ ವಿಸ್ತರಂ
ಸಾರ್ಥಕವಾದ ಬಿರುದು ಇತ್ತು.
 
ಚಿಕ್ಕದೇವರಾಜ
 
6
 
ఎంబ
 
ಗೀತಗಂಗಾಧರ-ಮೈಸೂರಿನ ಇತಿಹಾಸದಲ್ಲಿ ಪ್ರಖ್ಯಾತನಾಗಿರುವ ಕರಾಚೂರಿ
ನಂಜರಾಜಯ್ಯ ಅಥವಾ ಕಳಲೆಯ ನಂಜರಾಜನು ಕವಿಗಳಿಗೂ, ಕಲಾವಿದರಿಗೂ
ಆಶ್ರಯದಾತನಾಗಿದ್ದನು. ಇವನ ಆಶ್ರಯ ಪೋಷಣೆಯಲ್ಲಿ ಸಂಸ್ಕೃತ, ಕನ್ನಡ ಮತ್ತು
ತೆಲುಗು ಭಾಷೆಗಳಲ್ಲಿ ಹಲವು ಕಾವ್ಯಗಳ ರಚನೆಯಾಯಿತು.
 
ಗೀತಗಂಗಾಧರ ಎಂಬ
 
ಕಾವ್ಯವನ್ನು ನಂಜರಾಜನು ತನ್ನ ಆರಾಧ್ಯದೈವವಾದ ಗರಳಪುರಿ ನಂಜನಗೂಡಿನ
ಶ್ರೀಕಂಠೇಶ್ವರನಿಗೆ ಕಾಣಿಕೆಯಾಗಿ ಅರ್ಪಿಸಿದ್ದಾನೆ. ಇದು ಪ್ರಸಿದ್ಧವಾಗಿರುವ
ಜಯದೇವ ಕವಿಯ ಗೀತಗೋವಿಂದ ಕಾವ್ಯದ ಮಾದರಿಯಲ್ಲಿ ರಚಿಸಲಾಗಿರುವ
ಗೇಯಕಾವ್ಯ ಈ ಕಾವ್ಯದಲ್ಲಿ ೨೪ ಅಷ್ಟ ಪದಿಗಳು ಮತ್ತು ೭೨ ಶ್ಲೋಕಗಳಿವೆ.
ಶಿವಪಾರ್ವತಿಯರ ಪ್ರಣಯ ಪ್ರಸಂಗಗಳು ಇದರ ವಸ್ತು. ಇದನ್ನು ಸಂಗೀತಕ್ಕೆ
ಅಳವಡಿಸಿ ವಿದ್ವಾನ್ ಆನೂರು ರಾಮಕೃಷ್ಣ ಮತ್ತು ವೃಂದದವರು ನಿರೂಪಣೆ
ಮಾಡಿದ್ದಾರೆ
 
ಗೀತಗೋವಿಂದ-ಗೀತಗೋವಿಂದವು ಜಯದೇವ ಕವಿಯ ಅಮರಕಾವ್ಯ.
ಜಯದೇವನು ಕ್ರಿಸ್ತಶಕ ೧೨ನೆ ಶತಮಾನದ ಅಂತ್ಯ ಭಾಗದಲ್ಲಿ ಹುಟ್ಟಿ ೧೨೧೦ರಲ್ಲಿ
ಕಾಲವಾದನೆಂದು ಹೇಳುತ್ತಾರೆ. ಬಂಗಾಳದಲ್ಲಿ ಪುಷ್ಯಮಾಸದ ಶುಕ್ಲ ಸಪ್ತಮಿಯಂದು
ಅವನ ಪುಣ್ಯತಿಥಿಯನ್ನು ಆಚರಿಸುತ್ತಾರೆ. ಜಯದೇವನು ಬಂಗಾಳದ ಸೇನವಂಶದ
ಬಲ್ಲಾಳ ಲಕ್ಷಣ ಸೇನನ (೧೧೭೦-೧೨೦೦) ಆಸ್ಥಾನ ಕವಿಯಾಗಿದ್ದನು
ಈ ರಾಜನ ಆಸ್ಥಾನದಲ್ಲಿ ಜಯದೇವನಲ್ಲದೆ ಗೋವರ್ಧನಾಚಾರ್ಯ, ಶರಣ,
ಉಮಾಪತಿಧರ, ಕವಿರಾಜ ಧೋಯಿ ಇದ್ದರೆಂದು ಒಂದು ಶ್ಲೋಕವು ಹೇಳುತ್ತದೆ.
ಕೃಷ್ಣ ಕರ್ಣಾಮೃತವೆಂಬ ಪ್ರಸಿದ್ಧ ಕೃತಿಯ ಕವಿಯಾದ ಲೀಲಾಶುಕನೇ ಕಾಲಾಂತರದಲ್ಲಿ
ಜಯದೇವನಾಗಿ ಜನ್ಮವೆತ್ತಿ ಬಂದನೆಂದು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ
ದೃಢವಾದ ನಂಬಿಕೆಯಿದೆ
 
ಗೀತಗೋವಿಂದವು ಜಯದೇವನ ಹೆಸರನ್ನು ಸಂಸ್ಕೃತ ಸಾಹಿತ್ಯದಲ್ಲೂ ವೈಷ್ಣವ
ಸಂಸ್ಕೃತಿಯಲ್ಲಿ ಅಮರವಾಗಿಸಿರುವ ಗ್ರಂಥ. ಇದಕ್ಕೆ ಹಲವಾರು ಉತ್ತಮ
ವ್ಯಾಖ್ಯಾನಗಳಿವೆ.
ಇವುಗಳಲ್ಲಿ ೧೪ನೆ ಶತಮಾನದ ಮೇವಾಡದ ರಾಣಾ ಕುಂಭನ
 
6
 
?
 
* ರಸಿಕಪ್ರಿಯಾ ' ಎಂಬ ವ್ಯಾಖ್ಯಾನವು ಬಹು ಪ್ರಸಿದ್ಧವಾದುದು. ಇವನಿಗೆ