This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಪೂರ್ವಭಾಗದ ವಿಷಯ ಶ್ರೀಕೃಷ್ಣನ ಬಾಲ್ಯ ಮತ್ತು ಬಾಲಲೀಲೆಗಳ

ಹೃದಯಂಗಮವಾದ ಚಿತ್ರ. ಕೃಷ್ಣನನ್ನು ಎಬ್ಬಿಸುವ ಮತ್ತು ಅವನ ಲೀಲೆಗಳನ್ನು

ಚಿತ್ರಿಸುವ ಗೀತೆಗಳು ಸೊಗಸಾಗಿವೆ. * ಮಡು ಬೆಳಗಾಯಿತೆಚ್ಚರು ಮುದ್ದು

ಗೋಪಾಲ, ಆಡುವ

ನಿನ್ನ ನರಸುತ್ತ ಬಂದಿವೆ ನೋಡು "

ತಾಯಿ ಕೃಷ್ಣನನ್ನು ಎಬ್ಬಿಸುತ್ತಾಳೆ. ( ತನ್ನ ನೆನೆವುದು ಜೀವ ' ಎಂಬ ಗೀತೆ

ಲೌಕಿಕ ಮತ್ತು ಅಲೌಕಿಕ ವಿಷಯಗಳ ತುಯಾಡುವ ಭಕ್ತನ ಪ್ರಾಮಾಣಿಕ

ಮಾನಸಿಕ ತಲ್ಲಣವನ್ನು ಸುಂದರವಾಗಿ ಚಿತ್ರಿಸುತ್ತದೆ.
 
ಮಕ್ಕಳು
 
ಎಂದು
 
(C
 

ತನ್ನ ನೆನೆವುದು ಜೀವ ತಲ್ಲಣಿಪುದು ಕೂಡೆ ನಿನ್ನ

ನೆನೆವುದೊಯ್ಯನೆ ನೆಲೆಗೆ ನಿಲ್ಲುವುದು ॥ ಪ ।

ಮರಳಿ ಮರಳಿತಾನು ಮಾಡುವ ಪಾಪಂಗಳ

ಬಿರುಬ ನೆನೆದುಮಿಗೆ ಬೆದರುವುದು
 

ನರಪತಿ ಯದುಕುಲನಾಥ ತೇರೇರಿ ನೀ
 

ನೊರೆದೊಂದು ನುಡಿಯರಿತುರ್ಬಿ ಕೊರ್ಬುವುದು
 
-

ಚೆಲ್ಲವಾಡದಿರೆನ್ನ ಸಲಹೆ ಪಶ್ಚಿಮರಂಗ " ಎಂಬ ಮತ್ತೊಂದು ಗೀತೆಯಲ್ಲಿ

ಭಗವಂತನಲ್ಲಿ ಮಾಡಿಕೊಂಡ ಪ್ರಪತ್ತಿ ಮತ್ತು ಆರ್ತ ಮೊರೆಯು ಹೃದಯಂಗಮವಾಗಿ

ಚಿತ್ರಿಸಲ್ಪಟ್ಟಿದೆ.
 

ಗೀತಗಳಲ್ಲಿ ಪಲ್ಲವಿಯ ನಿಲುವನ್ನು ಸಾಧಿಸುವ ಹೋಲಿಕೆಗಳಿಂದ ಕೂಡಿದ ಅನೇಕ

ಚರಣಗಳಿವೆ. ಇದಲ್ಲದೆ ಈ ರಚನೆಗಳಲ್ಲಿ ವಿವಿಧ ಭಾವಗಳು ವ್ಯಕ್ತವಾಗಿವೆ.

"ಒಲಿದು ಲಾಲಿಸಿದೊಡಮೊಲ್ಲದಿರ್ದೊಡವೊಂದೆ

ನೆಲೆಯೊಳು ನಲ್ಲನನೆರೆ ನಂಬಿ ಬಾಳುವ

ಕುಲದೊಳು ಪುಟ್ಟದ ಕುವರಿಯಂದದೊಳು ನೀ

ನೆಲವ ಕೂರ್ತಿರುವ ನಾನುಳಿದುದ ನರಿಯೆನು

ಎಂಬುದರಲ್ಲಿ ಮಧುರ ಭಾವ ವ್ಯಕ್ತವಾಗಿದೆ.
 
*

ತಡೆಯಲಾರದ ಕೋಪದಟ್ಟುಳಿಯಿಂದೊಮ್ಮೆ

ಬಡಿದು ನೂಕಿದತಾಯ ಬಳಿಯಿಂದ ತೊಲಿಗದೆ

ಎಡೆವಿಡದಳುತವಳೆರಕವನೆಳಸುವ
 

ಕಡುಗೂಸಿನಂದವ ಕೈವಿಡಿದೆರ್ಪೆನು
 

ಎಂಬುದರಲ್ಲಿ ವಾತ್ಸಲ್ಯಭಾವವು ತುಂಬಿದೆ.
 
೨೮೫
 
"
 
""
 

ಶ್ರೀಕೃಷ್ಣನ ದಿವ್ಯ ಚರಿತ್ರೆಯನ್ನು ಗೋಪಿಯರ ದೃಷ್ಟಿಯಿಂದ ಚಿತ್ರಿಸುವಲ್ಲಿ

ಒಂದು ಬಗೆಯ ಸರಳ ಮುಗ್ಧತೆ ಮತ್ತು ಮಾಯಕತೆಯು ವ್ಯಾಪಿಸಿ ವಿಶಿಷ್ಟವಾದ

ಒಂದು ನಿಲುವು ಉಂಟಾಗಿರುವುದನ್ನು ಗಮಿನಿಸಬಹುದು.