2023-07-03 14:41:19 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಗೀತಮೂರ್ತಿ
ಈ ರಾಗವು ೩೩ನೆ ಮೇಳಕರ್ತ ಗಾಂಗೇಯಭೂಷಣಿಯ
ಒಂದು ಜನ್ಯರಾಗ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಗೀತಮೋಹಿನಿ
ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಆ
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಸ ರಿ ಗ ಮ ದ ನಿ ಸ
ಸ ನಿ ದ ಪ ಮ ಗ ರಿ ಸ
ಗೀತಗೋಪಾಲ
ಮೈಸೂರು ಸಂಸ್ಥಾನದ ದೊರೆಯಾಗಿದ್ದ ಚಿಕ್ಕದೇವರಾಜ
ಒಡೆಯರ ಕಾಲವು (೧೬೭೩-೧೭೦೪), ಸಾಹಿತ್ಯ, ಸಂಗೀತ ಮತ್ತು ಧಾರ್ಮಿಕ
ಚಟುವಟಿಕೆಗಳಿಂದ ಕೂಡಿದ ಒಂದು ಉತ್ತಮ ಕಾಲವಾಗಿತ್ತು. ಸ್ವತಃ ಒಡೆಯರೂ,
ವಿದ್ವಾಂಸರೂ, ಕಲಾಪ್ರೇಮಿಯೂ ಆಗಿದ್ದು ಸಾಹಿತ್ಯ, ಕಲೆ, ಸಂಗೀತಗಳ ಉದಾರ
ಪೋಷಕರಾಗಿದ್ದರು. ವಿಷ್ಣುವಿನ ಪರಮಭಕ್ತರಾಗಿದ್ದು ಜಯದೇವನ ಗೀತಗೋವಿಂದ
ಕಾವ್ಯದ ಮಾದರಿಯಲ್ಲಿ ಗೀತಗೋಪಾಲವೆಂಬ ಹಾಡಗಳ ಸಂಕಲನವನ್ನು
ರಚಿಸಿದ್ದಾರೆ. ವಿಶಿಷ್ಟಾದೈತ ತತ್ವಕ್ಕೆ ಅನುಗುಣವಾದ ಸಂಪೂರ್ಣ ಶರಣಾಗತಿ
ಭಕ್ತಿಯು • ಗೀತಗೋಪಾಲ 'ದ ಮೂಲಸಾಮಗ್ರಿ. ಮೋಕ್ಷವನ್ನು ಸಾಧಿಸಲು
ಪ್ರಪತ್ತಿ ಮಾರ್ಗವನ್ನು
ಧೈಯ. ಭಕ್ತರು ಮತ್ತು ಭಾಗವತದಲ್ಲಿ
ಪ್ರಚಾರ ಮಾಡುವುದು ಕವಿಯ
ಉಪದೇಶಿಸಿರುವ ತತ್ವಗಳನ್ನೂ,
ಭಗವದ್ಗೀತೆಯ ನ್ನೂ ಆಳವಾಗಿ ಅಭ್ಯಾಸಮಾಡಿ ಅವುಗಳ ಸಾರವತ್ತಾದ ಅಂಶಗಳನ್ನು
ಈ ಕೀರ್ತನೆಗಳಲ್ಲಿ ಬಹಳ ಸರಳವಾದ ರೀತಿಯಲ್ಲಿ ಬಹಳ ಸೊಗಸಾಗಿ ನಿರೂಪಿಸಲಾಗಿದೆ.
ಸಾಮಾನ್ಯ ಜನರಿಗೆ ಭಗವದ್ಗೀತೆಯ ತತ್ವವನ್ನು ತಿಳಿಸಿ, ಮೋಕ್ಷ ಮಾರ್ಗವನ್ನು
ಬೋಧಿಸುವುದು ದೊರೆಯ ಉದ್ದೇಶ. (ಈ ಲೋಗರೊಳ ಗೀತದ ಮೂಲದೊಳೇ
ಮುಕ್ತಿಗತಿಯ ಮೊಗದೋರಿಸಿದಂ).
ಗೀತಗೋಪಾಲವು ಎರಡು ಭಾಗಗಳನ್ನೊಳಗೊಂಡಿದೆ. ಪ್ರತಿ ಭಾಗದಲ್ಲಿ
ಸಪ್ತಪದಿಗಳಿವೆ. ಪೂರ್ವಭಾಗದಲ್ಲಿರುವ ಸಪ್ತಪದಿಗಳು ತ್ರಿಪದಿಗಳು, ಉತ್ತರ
ಭಾಗದಲ್ಲಿರುವ ಹಾಡುಗಳು ಪಂಚಪದಿ, ತ್ರಿಪದಿ ಮತ್ತು ಏಕಪದಿ ಛಂದಸ್ಸುಗಳಲ್ಲಿವೆ.
ಇವುಗಳ ಸಂಖ್ಯೆ ವಿವಿಧವಾಗಿದೆ ಕವಿಯು ತಾನು ಹೇಳಬೇಕಾದ ತತ್ವಗಳನ್ನು
ವಚನದಲ್ಲಿ ಹೇಳಿದ ನಂತರ ಅದಕ್ಕೆ ಅನುಗುಣವಾದ ಕೀರ್ತನೆಯನ್ನು ರಚಿಸಿದ್ದಾನೆ.
ಇವೆರಡೂ ಭಾಗಗಳೂ ಭಗವಂತನ ಅಪಾರ ಕಾರುಣ್ಯ ಮತ್ತು ಅನುಗ್ರಹದಲ್ಲಿ ದೃಢ
ವಾದ ನಂಬಿಕೆಯನ್ನು ಬೋಧಿಸುತ್ತವೆ (ಎರಡುಂ ಭಾಗದೊಳ್ ನಂಬುಗೆಯೆಂಬ
ತದುಪಾಯಮಂ ನಿರೂಪಿಸುವರ್)