2023-06-27 11:09:28 by jayusudindra
This page has been fully proofread once and needs a second look.
ಹೇಳಿರುವಂತೆ
ನಂದಿಕೇಶ್ವರನ ಅಭಿನಯ ದರ್ಪಣವೆಂಬ ಗ್ರಂಥದಲ್ಲಿ
ಹೂಗಣ್ಣಿನವಳು, ಕೂದಲಿಲ್ಲದವಳು, ದಪ್ಪತುಟಿಯವಳು,
ಅತಿ
ಬೆನ್ನಿನವಳು, ಮಧುರವಾದ ಸ್ವರವಿಲ್ಲದವಳು ನಾಟ್ಯಕ್ಕೆ ಇವರು ಯೋಗ್ಯರಲ್ಲ.
ಅಪ್ಪಾ ಸ್ವಾಮಿ ಅಯ್ಯರ್
ಇವರು ಮಹಾವೈದ್ಯನಾಥ ಅಯ್ಯರವರ
ಕಿರಿಯ ಸಹೋದರ ಮತ್ತು ಸಂಗೀತ ವಿದ್ವಾಂಸರು.
ಆಪ್ಪು ಕುಟ್ಟಿ ನಟುವನ್
ಇವರು ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ
ಶ್ಯಾಮಾಶಾಸ್ತ್ರಿಗಳ (೧೭೬೨-೧೮೨೭) ಸಮಕಾಲೀನರಾಗಿದ್ದ ಒಬ್ಬ ಖ್ಯಾತ ಸಂಗೀತ
ವಿದ್ವಾಂಸರು ಇವರಿಗೆ ತನ್ನ ವಾಂಡಿತ್ಯದಲ್ಲಿ ಅಪಾರ ಹೆಮ್ಮೆ ಇದ್ದಿತು ಆದ್ದರಿಂದ
ಸಂಗೀತ ವಿದ್ವಾಂಸರಿಗೆ ಸವಾಲು ಹಾಕುವುದು ಇವರ ಹವ್ಯಾಸವಾಗಿತ್ತು. ಇದರಿಂದ
ಅನೇಕ ವಿದ್ವಾಂಸರು ಮನನೊಂದು ಶಾಸ್ತ್ರಿಗಳಿಗೆ ದೂರಿತ್ತು ತಮ್ಮನ್ನು ಕಾಪಾಡ
ಬೇಕೆಂದು ಬೇಡಿಕೊಂಡರು. ನಟುವನ್‌ಗೆ ಸವಾಲು ಹಾಕಲು ಶಾಸ್ತ್ರಿಗಳು
ನಾಗಪಟ್ಟಣಕ್ಕೆ ಹೋದರು. ಅವರನ್ನು ನೋಡಿದೊಡನೆ ನಟುವನ್ನರಿಗೆ ಸವಾಲನ್ನು
ಸ್ವೀಕರಿಸಲು ಭಯವಾಯಿತು. « ನಾನು ನಿಮಗೆ ಸಮಾನನಲ್ಲ ನಿಮ್ಮ
ಸವಾಲನ್ನು ಸ್ವೀಕರಿಸಲಾರೆ. ನನ್ನಿಂದಾಗಿ ತಾವು ಇಲ್ಲಿಯವರೆಗೆ ಬಂದಿರುವುದೇ
ತಾವು ಒಂದು ದೊಡ್ಡ ಸಿಂಹ. ನಾನಾದರೋ ತಮ್ಮ ಮುಂದೆ
ಒಂದು ಇಲಿಯಂತೆ. ತಮ್ಮ ಸವಾಲನ್ನು ಸ್ವೀಕರಿಸದಿದ್ದರೆ ನನ್ನ ಘನತೆಗೆ ಯಾವ
ವಿಧವಾದ ಕುಂದೂ ಉಂಟಾಗುವುದಿಲ್ಲ ಎಂದು ಶಾಸ್ತ್ರಿಗಳಿಗೆ ಹೇಳಿದ ನಟುವನ್
ಸ್ವಲ್ಪ ಕಾಲಾನಂತರ ನಾಗಪಟ್ಟಣವನ್ನು ಬಿಟ್ಟು ಮೈಸೂರಿಗೆ ಬಂದು ಮಹಾರಾಜ
ಮುಮ್ಮಡಿ ಕೃಷ್ಣರಾಜ .ಒಡೆಯರ ಗೌರವಕ್ಕೆ ಪಾತ್ರರಾದರು. ಶ್ಯಾಮಾಶಾಸ್ತ್ರಿಗಳ
ಹಿರಿಮೆಯನ್ನು ತಿಳಿದು ಮಹಾರಾಜರು ಶಾಸ್ತ್ರಿಗಳನ್ನು ಮೈಸೂರಿಗೆ ಆಹ್ವಾನಿಸಲು
ನಟುವನ್‌ರನ್ನು ಕಳುಹಿಸಿದರು. ನಟುವನ್ ತಂಜಾವೂರಿಗೆ ಹೋಗಿ ಮಹಾರಾಜರ
ಆಶಯವನ್ನು ಶಾಸ್ತ್ರಿಗಳಿಗೆ ತಿಳಿಸಿದರು. ಆದರೆ ಶಾಸ್ತ್ರಿಗಳು ಮಹಾರಾಜರ
ಆಹ್ವಾನವನ್ನು ವಿನಯದಿಂದ ನಿರಾಕರಿಸಿದರು.
ನನಗೆ ಸಾಕು.
೨೩
ಒಂದೆರಡು
ಅಪೂರ್ಣ
ಅಸಂಪೂರ್ಣವಾದುದು. ಸಂಪೂರ್ಣ ಆರೋಹಣ ಅವರೋಹಣ
ಗಳಿಲ್ಲದ ಔಡವ ಮತ್ತು ಹಾಡವರಾಗಗಳು ಅಪೂರ್ಣ ರಾಗಗಳು.
ಅಪೂರ್ಣಲಕ್ಷಣ ರಾಗಮಾಲಿಕಾ
ರಾಗಮಾಲಿಕೆಯ
ಲಕ್ಷಣಗಳಿಲ್ಲದಿರುವ ರಾಗಮಾಲಿಕೆ ಸ್ವಾತಿತಿರುನಾಳ್ ಮಹಾರಾಜರ ಆ ಪನ್ನಗೇಂದ್ರ
ಶಯನ ' ಎಂಬುದು ಒಂದು ಅಪೂರ್ಣ ರಾಗಮಾಲಿಕೆಯಾಗಿದೆ ಇದರಲ್ಲಿ ರಾಗ
ಮುದ್ರೆಯಿಲ್ಲ. * ನಿತ್ಯ ಕಲ್ಯಾಣಿ " ಎಂಬ ರಾಗಮಾಲಿಕೆಯಲ್ಲಿ ರಾಗಮುದ್ರೆ,
ಚಿಟ್ಟೆಸ್ವರ, ವಿಲೋಮ ಕ್ರಮ ಚಿಟ್ಟೆ ಸ್ವರ ಮುಂತಾದ ಲಕ್ಷಣಗಳೆಲ್ಲವೂ ಇರುವುದರಿಂದ
ಅದು ಪೂರ್ಣಲಕ್ಷಣ ರಾಗಮಾಲಿಕೆಯಾಗಿದೆ.
C