2023-07-03 14:35:16 by jayusudindra
This page has been fully proofread once and needs a second look.
ಈ ರಾಗವು ೩೩ನೆ ಮೇಳಕರ್ತ ಗಾಂಗೇಯ
ಭೂಷಣಿಯ ಒಂದು ಜನ್ಯರಾಗ
ಆ . ಸ ಗ ಮ ಪ ನಿ ಸ
ಸ ನಿ ಪ ಮ ರಿ ಸ
೨೮೧
ಗ್ರಾಮಗಾನಕಾಲ
ಸಂಗೀತದ ಇತಿಹಾಸದಲ್ಲಿ ರಾಗಪದ್ಧತಿಯು ವಿಕಾಸ
ವಾಗುವುದಕ್ಕೆ ಹಿಂದೆ ಗ್ರಾಮ ಮೂರ್ಛನ ಪದ್ಧತಿಯು ರೂಢಿಯಲ್ಲಿದ್ದ ಕಾಲ
ಗ್ರಾಮತ್ರಯ-
ಗ್ರಾಮತ್ರಯ
ಮತಂಗನ ಹೇಳಿಕೆಯಂತೆ ಯಾವುದಾದರೊಂದು ಆಧಾರ
ಸ್ವರದಿಂದ ಸ್ವರಸಪ್ತಕವನ್ನು ಪೂರೈಸಿದರೆ ಅದು ಗ್ರಾಮವೆನಿಸುತ್ತದೆ. ಪುರಾತನ
ಸಂಗೀತದ ಷಡ್ಡ, ಮಧ್ಯಮ ಮತ್ತು ಗಾಂಧಾರಗ್ರಾಮಗಳು ಗ್ರಾಮತ್ರಯಗಳು.
ಅತಿ ಪ್ರಾಚೀನವೆಂದರೆ ಭರತನಾಟ್ಯ ಶಾಸ್ತ್ರದ ಕಾಲಕ್ಕೂ ಹಿಂದೆ ಗಾಂಧಾರ ಗ್ರಾಮವು
ಬಳಕೆಯಲ್ಲಿತ್ತು. ಕಾಲಕ್ರಮದಲ್ಲಿ ಷಡ್ಡಗ್ರಾಮವು ಮಾತ್ರ ಬಳಕೆಯಲ್ಲಿದ್ದು
ಮಿಕ್ಕ ರಾಗಗಳೆಲ್ಲವೂ ಷಡ್ಡರಾಗದ ಮೂರ್ಛನಗಳೆಂದೂ, ಅದರ ಸ್ವರಗಳ ಗ್ರಹ ಭೇದ
ದಿಂದ ಹುಟ್ಟಿದುವೆಂಬ ಅಭಿಪ್ರಾಯ ಸ್ಥಿರಪಟ್ಟಿತು. ಇದು ಇಂದಿಗೂ ಖರಹರಪ್ರಿಯ
ಮೇಳದಲ್ಲಿ ಕಂಡು ಬರುತ್ತದೆ. ಮಧ್ಯಮ ಮತ್ತು ಗಾಂಧಾರ ಗ್ರಾಮಗಳ ತಗ್ಗು
ಶ್ರುತಿಯ ಪಂಚಮಗಳು ಕಾಲಾಂತರದಲ್ಲಿ ಪ್ರತಿಮಧ್ಯಮದ ರಾಗೋತ್ಪತ್ತಿಗೆ ಕಾರಣ
ಗ್ರಾಮ್ಯನಾಟಕ
ಜಾನಪದ ಸಂಗೀತವುಳ್ಳ ನಾಟಕ. ಇದಕ್ಕೆ ಗ್ರಾಮಿಕ
ನಟನವೆಂದೂ ಹೆಸರು.
ಗ್ರಾಮರಾಗ-
ಗ್ರಾಮರಾಗ
ಇದು ಮಾರ್ಗಿರಾಗಗಳ ವರ್ಗಕ್ಕೆ ಸೇರಿದ ಒಂದು ರಾಗ
ಸಂಗೀತರತ್ನಾಕರ 'ವೆಂಬ ಗ್ರಂಥದಲ್ಲಿ ಇದು ಉಕ್ತವಾಗಿದೆ.
ಗ್ರಾಂಥಿಕ
ಭಾಗವತ ಮೇಳ ನಾಟಕಗಳಲ್ಲಿ ಅಥವಾ ನೃತ್ಯನಾಟಕಗಳಲ್ಲಿ
ಬರುವ ಗದ್ಯ ಭಾಗಗಳನ್ನು ಓದುವವನಿಗೆ ಗ್ರಾಂಧಿಕನೆಂದು ಹೆಸರು.
ಗ್ವಾಲಿಯ
ಇದು ಮಧ್ಯಭಾರತದಲ್ಲಿರುವ ಒಂದು ಪುರಾತನ ನಗರ.
ರಾಜಾಮಾನ್‌ಸಿಂಗನ ಕಾಲದಲ್ಲಿ (೧೪೮೬-೧೫೧೭) ಇದೊಂದು ಪ್ರಸಿದ್ಧ ಕಲಾ
ಕೇಂದ್ರವಾಗಿತ್ತು. ಇಲ್ಲಿಯ ಆಸ್ಥಾನದಲ್ಲಿ ಅನೇಕ ವಾಗ್ಗೇಯಕಾರರು ಮತ್ತು
ವಿದ್ವಾಂಸರು ಇದ್ದರು. ದ್ರುಪದ್ ಶೈಲಿಯ ಗಾಯನವು ಆರಂಭವಾದುದು ಇಲ್ಲಿಯೇ.
ಪ್ರಸಿದ್ಧ ಗಾಯಕ ತಾನ್‌ಸೇನನ ಸಮಾಧಿಯು ಇಲ್ಲಿದೆ. ಇಲ್ಲಿ ಪ್ರತಿವರ್ಷ
ತ್ಯಾಗರಾಜರ ಸಂಗೀತೋತ್ಸವದಂತೆ ತಾನಸೇನ್ ಸಂಗೀತೋತ್ಸವವು ಬಹಳ
ವಿಜೃಂಭಣೆಯಿಂದ ನಡೆಯುತ್ತದೆ, ಕೃಷ್ಣ ರಾವ್ ಶಂಕರ್ ಪಂಡಿತ್ ಗ್ವಾಲಿಯರ್
ಘರಾನಕ್ಕೆ ಸೇರಿದ ಪ್ರಸಿದ್ಧ ಹಿರಿಯ ಗಾಯಕರು.
ಗಿರಿಕರ್ಣಿಕ
ಈ ರಾಗವು ೩ನೆ ಮೇಳಕರ್ತ ಗಾನಮೂರ್ತಿಯ ಒಂದು
ಜನ್ಯರಾಗ,