This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಗಾಂಧಾರ ಪಂಚಮಿ-ಇದು ಪುರಾತನ ಭಾರತೀಯ ಸಂಗೀತ ಪದ್ಧತಿಯ
ಒಂದು ವಿಕೃತ ಜಾತಿ, ಈ ರಾಗವು ಮತಂಗನ " ಬೃಹದ್ದೇಶಿ'ಯಲ್ಲ
ಶಾರ್ಙ್ಗದೇವನ - ಸಂಗೀತ ರತ್ನಾಕರ 'ದಲ್ಲೂ ಟಕ್ಕ ಭಾಷಾ ಎಂದು ಉಕ್ತವಾಗಿದೆ.
ಗಾಂಧಾರವಲ್ಲಿ ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
 
6
 
ಒಂದು ರಾಗ.
 
೨೮೦
 
ಗಾಂಧಾರಿ-(೧) ಪುರಾತನ ಸಂಗೀತದ ಮಧ್ಯಮಗ್ರಾಮದ ಮೂರು ಜಾತಿ
ಗಳಲ್ಲಿ ಒಂದು ಜಾತಿ,
(೨) ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವಂತೆ ಇದು ಸೌವೀರಿಯ
ಒಂದು ಭಾಷಾ
ಪಿ.
೧೯೧೧ರಲ್ಲಿ ಎಸ್. ರಾಮುಲುಚೆಟ್ಟ
ಎಂಬುವರು ಪ್ರಕಟಿಸಿದ ತೆಲುಗು ಗ್ರಂಧ. ಇದರಲ್ಲಿ ಕೃತಿಗಳನ್ನು ಸ್ವರಲಿಪಿ ಸಹಿತ
 
ಗಾಂಧರ್ವಕಲ್ಪವಲ್ಲಿ
 
ಕೊಡಲಾಗಿದೆ.
 
ಗಾಂಧಾರೋದೀಚ-(೧) ಮತಂಗನ - ಬೃಹದ್ದೇಶೀ ' ಎಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ,
 
(೨) ಶಾರ್ಙ್ಗದೇವನ ಸಂಗೀತರತ್ನಾಕರ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಪುರಾತನ ಭಾರತೀಯ ಸಂಗೀತ ಪದ್ಧತಿಯ ಒಂದು ವಿಕೃತಜಾತಿ,
 
ಗಾಂಧರ್ವವೇದ ಸಂಗೀತ ಶಾಸ್ತ್ರಕ್ಕೆ ಗಾಂಧರ್ವ ವೇದವೆಂದು ಹೆಸರು.
ಆಯುರ್ವೇದ, ಧನುರ್ವೇದ, ಅರ್ಥಶಾಸ್ತ್ರ ಮತ್ತು ಗಾಂಧರ್ವವೇದ ಇವು ನಾಲ್ಕೂ
 
ಉಪವೇದಗಳು.
 
-
 
-
 
6
 
ಗಾಂಧರ್ವವೇದ ಎಂಬ ಹೆಸರಿನ ಒಂದು ಸಂಗೀತದ ಗ್ರಂಧವನ್ನು ತಾಂತ್ರಿಕ
ವಿದ್ಯೆಯ ಗ್ರಂಥವೊಂದರಲ್ಲಿ ಹೆಸರಿಸಿದೆ ಇದು ೩೬೦೦೦ ಅನುಷ್ಟುಪ್ ಶ್ಲೋಕಗಳಿರುವ
ಸಂಗೀತ ಶಾಸ್ತ್ರಗ್ರಂಥವೆಂದು ಹೇಳಿದೆ. ಸಂಗೀತ ಶಾಸ್ತ್ರಕ್ಕೆ ಗಾಂಧರ್ವತತ್ವ ಎಂಬ
 
ಹೆಸರೂ ಇದೆ.
 
ಗಾಂಧರ್ವವೇದವಿಶಾರದ ಸಂಗೀತ ಶಾಸ್ತ್ರದಲ್ಲಿ ಉದ್ದಾಮ ಪಂಡಿತರಾಗಿದ್ದ
ಪ್ರೊಫೆಸರ್, ಪಿ. ಸಾಂಬಮೂರ್ತಿಯವರಿಗೆ ಮದ್ರಾಸಿನ ಹಿಂದೂಧರ್ಮ ಮಹಾ
ಮಂಡಲವು ೧೯೪೩ರಲ್ಲಿ ಈ ಬಿರುದನ್ನಿತ್ತು ಗೌರವಿಸಿತು.
 
ಗಾಂಧರ್ವಿ-ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವಂತೆ ಗಾಂಧಾರದ
ಆರು ರಾಗಿಣಿಗಳಲ್ಲಿ ಇದು ಒಂದು ರಾಗಿಣಿಯ ಹೆಸರು.
 
ಗಾಂಭೀರ್ಯ ಘೋಷಣೆ-ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ
ಒಂದು ಜನ್ಯರಾಗ.
 
ಸ ಗ ರಿ ಸ ಮ ದ ನಿ ಸ
ಸ ನಿ ದ ಪ ಮ ಗ ರಿ ಗ ಸ