This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಗಾನವಿದ್ಯಾ ಪ್ರಕಾಶಿನಿ-ಪೆರುಂಗುಲಂ ಶ್ರೀನಿವಾಸಅಯ್ಯಂಗಾರ್ ಎಂಬುವರು
ಪ್ರಕಟಿಸುತ್ತಿದ್ದ ತಮಿಳಿನ ಒಂದು ಸಂಗೀತಪತ್ರಿಕೆ.
 
ಗಾನವಿದ್ಯಾವಿನೋದಿನಿ-ವೀಣಾ ಬಸವಪ್ಪ (೧೯೧೫) ವಿರಚಿತ ಕನ್ನಡದ
ಒಂದು ಸಂಗೀತ ಶಾಸ್ತ್ರಗ್ರಂಧ
 
ಗಾನವಿದ್ಯಾಸಂಜೀವಿನಿ-ಸಿ, ತಿರುಮಲಯ್ಯನಾಯ್ತು ಎಂಬುವರು ರಚಿಸಿದ
ತೆಲುಗಿನ ಒಂದು ಸಂಗೀತ ಗ್ರಂಧ.
 
ಗಾನಸಾಮವರಾಳಿ ಈ ರಾಗವು ಅಸಂಪೂರ್ಣ ಮೇಳಪದ್ಧತಿಯಲ್ಲಿ ೩ನೆ
 
ಮೇಳ ಇದು ಸಾಮವರಾಳಿರಾಗ,
 
ಸ ರಿ ಮ ಪ ದ ನಿ ಸಾ
ಸ ನಿ ದ ಸ ಮ ಗ ರಿ ಸ
 
೨೭೭
 
ಆಧುನಿಕ ಪದ್ಧತಿ ತಿಯಂತೆ ೩ನೆ ಮೇಳಕರ್ತ ಗಾನಮೂರ್ತಿ ರಾಗದ ಉಪಾಂಗ
ಜನ್ಯರಾಗ, ಸಾರ್ವಕಾಲಿಕರಾಗ, ಬೃಹದೀಶ್ವರೋ ರಕ್ಷತು ಎಂಬ ಮುತ್ತುಸ್ವಾಮಿ
ದೀಕ್ಷಿತರ ಕೃತಿಯು ಈ ರಾಗದ ಪ್ರಸಿದ್ಧ ಕೃತಿ.
 
ಗಾನಸ್ವಭಾವ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
 
ಸ ರಿ ಮ ದ ನಿ ಸ ಸ
ಸ ದ ನಿ ದ ಪ ಮ ಗ ರಿ ಸ
 
ಗಾನಸ್ತಂಭ-ಸಂಗೀತದ ಸ್ತಂಭಗಳಲ್ಲಿ ಶ್ರುತಿಸ್ತಂಭ, ತಾಳಸ್ತಂಭ, ದ್ವಿಗುಣ
ಮತ್ತು ಅನುರಣನ ಮುಂತಾದುವನ್ನು ತೋರಿಸುವ ಪ್ರದರ್ಶನ ಸ್ತಂಭಗಳಿವೆ.
 
ಗಾನಶಾಸ್ತ್ರ ಪ್ರಶ್ನೆ ತ್ರರಾವಳಿ-ಅರಿಸಿರಾಲ ಸತ್ಯನಾರಾಯಣ ಮೂರ್ತಿ
ವಿರಚಿತವಾದ ಒಂದು ತೆಲುಗು ಸಂಗೀತ ಶಾಸ್ತ್ರಗ್ರಂಥ. ಪ್ರಶ್ನೆಗಳು ಮತ್ತು ಉತ್ತರ
ರೂಪದಲ್ಲಿ ಸಂಗೀತಶಾಸ್ತ್ರವನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ.
 
ಗಾನಸಿಂಧು ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
 
ಒಂದು ಜನ್ಯರಾಗ
 
ಸ ಮ ಗ ಮ ಪ ದ ನಿ ದ ಸ
 
ಸ ನಿ ದ ಪ ಮ ಗ ರಿ ಸ
 
ಗಾನೆಂದುಶೇಖರಂ
 
ತಚೂರು ಶಿಂಗರಾಚಾರ್ಯುಲು ಸಹೋದರರು
ಬರೆದಿರುವ ತೆಲುಗಿನ ಒಂದು ಸಂಗೀತ ಶಾಸ್ತ್ರಗ್ರಂಥ. ಇದರಲ್ಲಿ ಲಕ್ಷಣ ಗೀತಗಳು,
ಕೆಲವು ಕೃತಿಗಳು ಮತ್ತು ಪಲ್ಲವಿಗಳಿವೆ
 
ಗಾಯಕಪಾರಿಜಾತಂ ತಚೂರು ಶಿಂಗರಾಚಾರ್ಯುಲು ವಿರಚಿತವಾದ
ತೆಲುಗು ಸಂಗೀತ ಪಠ್ಯ ಪುಸ್ತಕಗಳಲ್ಲಿ ಎರಡನೆಯದು (೧೮೭೬). ಇದರಲ್ಲಿ
 
ತಾನವರ್ಣಗಳಿವೆ.