This page has been fully proofread once and needs a second look.

ಗಾನಾಮೃತವುಮು
ಟಿ. ಎಂ. ವೆಂಕಟೇಶಶಾಸ್ತ್ರಿ ವಿರಚಿತವಾದ (೧೯೯೩)
ತೆಲುಗಿನ ಒಂದು ಸಂಗೀತ ಶಾಸ್ತ್ರಗ್ರಂಥ.
 
ಗಾನಮಂಜೂಷ
ವೀಣೆ ಅನಂತಕೃಷ್ಣಯ್ಯರ್‌ ವಿರಚಿತವಾದ (೧೯೩೪)
ತಮಿಳಿನ ಒಂದು ಸಂಗೀತ ಶಾಸ್ತ್ರಗ್ರಂಥ.
 
ಗಾನನಾಟಕ
ಗೇಯನಾಟಕ ಅಧವಾ ಸಂಗೀತರೂಪಕ.
 
ಗಾನಾಂಗಿ
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ,
ಸ ರಿ ಮ ಗ ಮ ಪ ದ ನಿ ಸ
ಸ ದ ನಿ ದ ಮ ಪ ಮ ಗ ರಿ ಸ
 
ಗಾನಯೋಗ-ಸಂಗೀತದ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆಯುವುದು ಗಾನಯೋಗ, ತ್ಯಾಗರಾಜರು ಗಾನಯೋಗಿ,
 
ಗಾನರಸ ಮತ್ತು ನವರಸ-ಭಾರತೀಯ ಸೌಂದರ್ಯತತ್ವದಲ್ಲಿ ರಸ
ಸಿದ್ಧಾಂತವು ವಿಶಿಷ್ಟವಾದುದು ಇದನ್ನು ಕುರಿತು ಭರತ ಮತ್ತು ಇತರ ಹಲವುವಿದ್ವಾಂಸರು ವಿವೇಚಿಸಿದ್ದಾರೆಎಂದರ್ಧ
ರಸವೆಂದರೆ ಸಾಮಾನ್ಯ ಅರ್ಧದಲ್ಲಿ ಸಾರ, ರುಚಿ
ವಿಭಾವಾನುಭಾವ ವ್ಯಭಿಚಾರಿ ಸಂಯೋಗಾತ್ ರಸನಿಷ್ಪತ್ತಿ:
ವಿಭಾವಗಳು, ಅನುಭಾವಗಳು, ಸಂಚಾರಿ ಭಾವಗಳು ಇವುಗಳ ಸಂಯೋಗದಿಂದ ರಸಕವಿಯ ಟಂಕ
ನಿಷ್ಪತ್ತಿಯಾಗುವುದು. ಇದು ಭರತನ ಪ್ರಸಿದ್ಧವಾದ ಸೂತ್ರ
ಸಾಲೆಯಲ್ಲಿ ನಿರ್ಮಾಣವಾದ ಪದಗಳು ಮತ್ತು ಮಾತುಗಳಿಂದ ಸಾಹಿತ್ಯದಲ್ಲಿ ರಸ
ಉಂಟಾಗುತ್ತದೆ. ಇಲ್ಲಿ ಶಬ್ದ ಮತ್ತು ಅರ್ಥ ಇವುಗಳ ಸಂಯೋಗ ವಿಶೇಷದಿಂದ
ನಮ್ಮಲ್ಲಿ ವಿಶೇಷವಾದ ಭಾವಪ್ರಚೋದನೆಯಾಗಿ ಅನುಭವ ಉಂಟಾಗುತ್ತದೆ. ನಾಟಕ
ಮತ್ತು ನಾಟ್ಯದಲ್ಲಿ ಸಂಗೀತ, ಮಾತು ಮತ್ತು ಅಭಿನಯದಿಂದ ರಸೋತ್ಪತ್ತಿಯಾಗು
ತದೆ. ಮನಸ್ಸು, ಕಣ್ಣು ಮತ್ತು ಕಿವಿ ಈ ಮೂರರ ಪ್ರತಿಕ್ರಿಯೆಯಿಂದ ರಸಾನುಭವ
ಒದಗುತ್ತದೆ. ನೃತ್ಯನಾಟಕದಲ್ಲಿ ಮಾತು, ನಟನೆ, ಸಂಗೀತ ಮತ್ತು ನಾಟ್ಯಗಳಿಂದ
ರಸಾನುಭವವಾಗುತ್ತದೆ. ಕೇವಲ ಸಂಗೀತ ಮಾತ್ರದಿಂದಲೇ ರಸಾನುಭವವುಂಟಾಗು
ವುದು ಈ ಕಲೆಯ ವೈಶಿಷ್ಟ ಸ್ವರಗಳನ್ನು ಜೋಡಿಸಿ ಅವುಗಳ ಸ್ಥಾನಕ್ಕೆ ತಕ್ಕಂತೆ
ಹಾಡಿದರೆ ರಾಗ ಹುಟ್ಟಿಕೊಳ್ಳುತ್ತದೆ.
ಅದನ್ನು ಮನಸ್ಸಿನಲ್ಲಿ ನಿರ್ಣಯಿಸಿ,
ಗಾಯಕನು ರಾಗದ ಭಾವವೇನೆಂದು ತಿಳಿದು
ಹೃದಯದಲ್ಲಿ ಅನುಭವಿಸಿ, ಗಂಟಲಲ್ಲಿ ಹೊರ
ಹೊಮ್ಮಿಸಿದಾಗ ಅದಕ್ಕೆ ಒಂದು ವ್ಯಕ್ತಿ ವೈಶಿಷ್ಟದ ವಿಶೇಷವು ಸೇರಿಕೊಂಡು ರಾಗವೇ
ಮೂರ್ತಿವತ್ತಾಗಿ ಒಂದು ಸ್ವರೂಪವನ್ನು ಹೊಂದಿ ಮೆರೆಯುತ್ತದೆ. ಆಗ ಅಲ್ಲೊಂದು
ರಸವು ತಲೆದೋರುತ್ತದೆ. ಅದರ ಸೌಖ್ಯವು ಕಿವಿಯನ್ನು ಆವರಿಸಿ ಮನಸ್ಸಿಗೆ ಆನಂದ
ವನ್ನು ಉಂಟುಮಾಡುತ್ತದೆ. ಹೀಗೆ ಹಲವು ಬಗೆಯ ರಸಗಳ ಅನುಭವಕ್ಕೆ ದಾರಿ
ಯಾಗುತ್ತದೆ