2023-06-27 11:06:30 by jayusudindra
This page has been fully proofread once and needs a second look.
ಹೊಂದಿಕೊಳ್ಳದ ಶ್ರುತಿ, ಶ್ರುತಿಗೆ ಹೊಂದಿಕೊಳ್ಳದ ಸ್ವರ.
ಅಪಸ್ಮರ
ಇದು ಸುಸ್ವರಕ್ಕೆ ವಿರುದ್ಧವಾದ ಅಪಶ್ರುತಿಯ ಸ್ವರ.
ಸಂಗೀತದಲ್ಲಿ ಒಳ್ಳೆಯ ಅಭಿರುಚಿಯಿರುವ ಶೋತೃಗಳಿಗೆ ಅಪಸ್ವರವನ್ನು ಕೇಳಿದರೆ
ಆಘಾತವಾಗುತ್ತದೆ. ಇದನ್ನು ಕೆಟ್ಟ ಕೂಗು ಎಂದು ಸಾಮಾನ್ಯವಾಗಿ ಹೇಳುವುದುಂಟು.
ಆಪಸ್ವರಿತ
ಭರತನಾಟ್ಯದ ಕಟೀರೇಚಕಗಳಲ್ಲಿ ಮೂರು ವಿಧವಾದ
ಕ್ರಿಯೆಗಳಿವೆ. ಅವುಗಳಲ್ಲಿ ಹಿಂದೆಳೆವ ಸೊಂಟದ ಕ್ರಿಯೆಯು ಅವಸ್ವರಿತ,
ಅಪಲಾ
ಭರತನಾಟ್ಯದ ವಾಚಿಕಾಭಿನಯದ ೧೨ ವಿಧಗಳಲ್ಲಿ ಇದೊಂದು
ಬಗೆ. ಮೊದಲು ಹೇಳಿದ ಮಾತನ್ನು ಮತ್ತೊಂದು ರೀತಿಯಲ್ಲಿ ಬದಲಾಯಿಸಿ
೨೨
ಬಗೆ.
ಮೊದಲು
ಕೊಳ್ಳುವುದೇ ಅಪಲಾಪ
ಅಪ್ಪರ್ (೭ನೇ ಶ)
ಇವರು ತಮಿಳುನಾಡಿನ ಒಬ್ಬ ಪ್ರಸಿದ್ಧ
ಶೈವನಾಯನಾರರು. ತೇವಾರಂ ಗೀತೆಗಳನ್ನು ರಚಿಸಿ ಹಾಡಿದ ಮೂವರು ಸಂತರಲ್ಲಿ
ಒಬ್ಬರು. ಇವರಿಗೆ ತಿರುನಾವಕ್ಕರಸು ಮತ್ತು ವಾಗೀಶ ಎಂಬ ಹೆಸರುಗಳಿವೆ.
ಇವರು ವೆಳ್ಳಾಳ ಕುಲದಲ್ಲಿ ಜನಿಸಿದರು. ಜೈನಮತಾವಲಂಬಿಯಾಗಿ ತನ್ನ ಅಪಾರ
ಪಾಂಡಿತ್ಯ ಮತ್ತು ಜ್ಞಾನದಿಂದ ಧರ್ಮಸೇನ ಎಂಬ ಹೆಸರಿನಿಂದ ಜೈನಗುರುವಾದರು.
ಅಣ್ಣನು ಹಿಂದೂಧರ್ಮಕ್ಕೆ ಹಿಂತಿರುಗುವಂತೆ ಬುದ್ಧಿಯನ್ನು ಕರುಣಿಸಬೇಕೆಂದು
ಇವರ ತಂಗಿ ಶಿವನನ್ನು ಪ್ರಾರ್ಧಿಸಿದಳು. ಅದರಂತೆ ಸ್ವಲ್ಪ ಕಾಲಾನಂತರ ಅಪ್ಪರ್
ಹಿಂದೂಧರ್ಮವನ್ನು ಪುನಃ ಅವಲಂಬಿಸಿದನು. ಇವರು ತಿರುಜ್ಞಾನ ಸಂಬಂಧರ
ಹಿರಿಯ ಸಮಕಾಲೀನರು. ಇವರ ರಚನೆಗಳನ್ನು ತಮಿಳುನಾಡಿನ ಶೈವದೇವಾಲಯ
ಗಳಲ್ಲಿ ಇಂದಿಗೂ ಹಾಡುವ ಪದ್ಧತಿ ರೂಢಿಯಲ್ಲಿದೆ.
ಅಪವೇಷ್ಟಿತ
ನಂದಿಕೇಶ್ವರನ ಸೂತ್ರದಂತೆ ಇದು ಭರತನಾಟ್ಯದ ಹಸ್ತ
ಪ್ರಾಣಗಳಲ್ಲಿ ಒಂದು ವಿಧ ಬೆರಳುಗಳನ್ನು ಕೆಳಕ್ಕೆ ಚಾಚುವುದಕ್ಕೆ ಅಪವೇಷ್ಟಿತ
ಅಫ್ಘಾಬ್-ಎ.ಮೌಸಿಕ್
ಇದರ ಅರ್ಧ ( ಸಂಗೀತ ಮಾರ್ತಾಂಡ .
ಉತ್ತರ ಭಾರತದ ಪ್ರಸಿದ್ಧ ಗಾಯಕ ಉಸ್ತಾದ್ ಫಯಾಜ್ ಖಾನರಿಗೆ ಮೈಸೂರಿನ
ನಾಲ್ವಡಿ ಕೃಷ್ಣರಾಜ ಒಡೆಯರು ಈ ಬಿರುದನ್ನು ಗೌರವಿಸಿದರು
ಅಪ್ರಮೇಯ
ಈ ರಾಗವು ೬೫ನೆಯ ಮೇಳಕರ್ತ ಮೇಚಕಲ್ಯಾಣಿಯ
ಒಂದು ಜನ್ಯರಾಗ
ಆ : ಸ ರಿ ಮ ಸ ದ ಸ
ಅ : ಸ ನಿ ದ ಮ ಗ ಮ ರಿ ಸ
ಅಪ್ರತಿಮಧ್ಯಮ
ಮೇಳಾಧಿಕಾರಲಕ್ಷಣವೆಂಬ ಗ್ರಂಧದಲ್ಲಿ ಶುದ್ಧ ಮಧ್ಯಮ
ಮತ್ತು ಪ್ರತಿಮಧ್ಯಮ ಶ್ರುತಿಗಳ ಮಧ್ಯೆ ಬರುವ ಶ್ರುತಿಗೆ ಕೊಟ್ಟಿರುವ ಹೆಸರು. ಇದು
ಬೇಗಡೆ ಮಧ್ಯಮದಂತೆ.
--