This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
೨೭೩
 
ಗರುಡವರಾಳಿ - ಈ ರಾಗವು ೫೯ನೆಯ ಮೇಳಕರ್ತ ಧರ್ಮವತಿಯ ಒಂದು
 
ಜನ್ಯರಾಗ,
 
ಸ ರಿ ಗ ಸ ನಿ ಸ
 
ಅ : ಸ ನಿ ಪ ಮ ಗ ರಿ ಸ
 
ಹಸ್ತಮುದ್ರೆ.
 
ಗರುಡಹಸ್ತ-ಇದು ಭರತನಾಟ್ಯದ ಸಂಯುತ ಹಸ್ತಗಳಲ್ಲಿ ಒಂದು ಬಗೆಯ
ಎರಡು ಅರ್ಧಚಂದ್ರ ಹಸ್ತಗಳನ್ನು ಒಳಮುಖವಾಗಿ ತಿರುಗಿಸಿ
ಹೆಬ್ಬೆರಳುಗಳನ್ನು ಸೇರಿಸಿ ಹಿಡಿಯುವುದು ಗರುಡ ಹಸ್ತವಾಗುತ್ತದೆ. ಗರುಡನನ್ನು
ಸೂಚಿಸುವ ಅರ್ಧದಲ್ಲಿ ಈ ಹಸ್ತವಿನಿಯೋಗವಾಗುವುದು
 
ಗವಾಂಭೋದಿ-ಇದು
 
೪೩ನೆ
 
ಮೇಳಕರ್ತರಾಗ
 
ರಾಗಾಂಗರಾಗ
 
ಷಡ್ಡ, ಶುದ್ಧ ರಿಷಭ ಸಾಧಾರಣ ಗಾಂಧಾರ, ಪ್ರತಿ ಮಧ್ಯಮ, ಪಂಚಮ, ಶುದ್ಧ ಧೈವತ
ಮತ್ತು ಶುದ್ಧ ನಿಷಾದಗಳು ಸ್ವರಸ್ಥಾನಗಳು ರಿಷಭ ಧೈವತಗಳು ಮತ್ತು ಗಾಂಧಾರ
ಧೈವತಗಳು ಪರಸ್ಪರ ವಾದಿಸಂವಾದಿಗಳು, ಗಾಂಧಾರ, ಮಧ್ಯಮ, ಧೈವತಗಳು ರಾಗದ
ಛಾಯಾ ಮತ್ತು ಜೀವಸ್ವರಗಳು. ಷಡ್ಡಸ್ವರವು ಗ್ರಹ, ಅಂಶ ಮತ್ತು ನ್ಯಾಸಸ್ವರ.
ಸಾರ್ವಕಾಲಿಕ ರಾಗ ಮತ್ತು ಶೋಕರಸ ಪ್ರಧಾನವಾದ ರಾಗ,
 
ಗಾಡಿಚಕ್ಕೆ - ವೀಣೆಯ ದಂಡಿಯ ಮೇಲ್ಬಾಗದಲ್ಲಿ ಉದ್ದಕ್ಕೂ ಅಳವಡಿಸಿರುವ
ಮರದ ಚಕ್ಕೆ, ಇವುಗಳ ಮೇಲೆ ಮೇಣವನ್ನು ಕೂರಿಸಿ ಮೆಟ್ಟಿಲುಗಳನ್ನು ನೆಡುತ್ತಾರೆ.
ಗಾತ್ರದಂಡಿ-ವೀಣೆಯಲ್ಲಿ ನುಡಿಸುವ ನಂ, ತೋಂ ಇತ್ಯಾದಿ ತಾನವನ್ನು
ಹಾಡುವುದಕ್ಕೆ ಗಾತ್ರದಂಡಿತಾನವೆಂದು ಹೆಸರು.
 
ಗಾತ್ರವೀಣಾ-ನಾರದಶಿಕ್ಷಾ ಎಂಬ ಗ್ರಂಧದಲ್ಲಿ ಹೇಳಿರುವಂತೆ ಮಾನವನ
ಕಂಠಶ್ರೀಗೆ ಗಾತ್ರವೀಣಾ ಎಂದು ಹೆಸರು
 
ಗಾಥ-ಗೀತದಂತೆ ಹಾಡಲ್ಪಡುವ ಒಂದು ಹಾಡು.
ಗಾಥಿಕ-ಇದು ವೇದದ ಸಂಗೀತಕ್ಕೆ ಸಂಬಂಧಿಸಿದೆ.
 
ಗಾನ-ಇದು ಗಾಯನ, ತಂತೀವಾದ್ಯ, ವೀಣೆ, ವೇಣು ಇವುಗಳ ಸಂಗೀತ.
ಗಾನಕಾಲ-ಗಾನ ಮಾಡಲು ಸೂಕ್ತವಾದ ವೇಳೆ. ಪ್ರತಿಯೊಂದು
ರಾಗಕ್ಕೂ ಗಾನಕಾಲವನ್ನು ಶಾಸ್ತ್ರಗ್ರಂಥಗಳಲ್ಲಿ ಹೇಳಿದೆ.
 
ಗಾನಕಾಲಚಂದ್ರಿಕ ಅರಿಪಿರಾಲ ಸತ್ಯನಾರಾಯಣಮೂರ್ತಿ ವಿರಚಿತವಾದ
(೧೯೩೩) ಒಂದು ಸಂಗೀತಶಾಸ್ತ್ರಗ್ರಂಥ.
 
-
 
ಗಾನಕಲಾಬೋಧಿನಿ -ಶ್ರೀಮತಿ ಮತ್ತು ಶ್ರೀ ಎನ್. ಸಿ. ಪಾರ್ಧಸಾರಥಿ
ವಿರಚಿತ(೧೯೫೧)ವಾದ ಒಂದು ತೆಲುಗಿನ ಸಂಗೀತ ಪಠ್ಯ ಪುಸ್ತಕ.
 
ಗಾನಕಥಾ-ಸಂಗೀತದ ಮೂಲಕ ನಿರೂಪಿಸಲ್ಪಡುವ ಕಥೆ,
 
ಗಾನಕ್ರಮ- ಇದು ಸಂಗೀತರಚನೆಯ ವಿವಿಧ ಭಾಗಗಳನ್ನು ಹಾಡುವ
ಪದ್ಧತಿ. ಪ್ರಾರಂಭದಿಂದ ಕೊನೆಯವರೆಗೆ ಪುನರುಕ್ತಿಯಿಲ್ಲದೆ ಗೀತವನ್ನು ಹಾಡು