2023-07-03 10:49:21 by jayusudindra
This page has been fully proofread once and needs a second look.
ಇದು ೫೩ನೆಯ ಮೇಳಕರ್ತರಾಗ, ೯ನೆಯ ಚಕ್ರವಾದ
ಬ್ರಹ್ಮಚಕ್ರದ ೫ನೆ ಮೇಳ, ರಾಗಾಂಗರಾಗ, ಸರ್ವಸ್ವರಗಮಕವರಿಕ ತ್ರಿಸ್ಥಾಯಿರಾಗ
ಮತ್ತು ಉಭಯ ಸಂಪೂರ್ಣರಾಗ, ಶುದ್ಧ ರಿಷಭ, ಅಂತರಗಾಂಧಾರ, ಪ್ರತಿಮದ್ಯಮ,
ಚತುಶ್ರುತಿಧೈವತ ಮತ್ತು ಕಾಕಲಿನಿಷಾದಗಳು ಈ ರಾಗದ ಸ್ವರಸ್ಥಾನಗಳು. ಷಡ್ಡ
ಸ್ವರವು ಗ್ರಹ, ಅಂಶ ಮತ್ತು ನ್ಯಾಸಸ್ವರ, ಗಾಂಧಾರ, ಧೈವತಗಳು, ಗಾಂಧಾರ,
ನಿಷಾದಗಳು, ಮಧ್ಯಮ, ನಿಷಾದಗಳು ಪರಸ್ಪರ ವಾದಿ ಸಂವಾದಿಗಳು. ಭಕ್ತಿರಸ
ಪ್ರಧಾನವಾದ ಸಾಯಂಕಾಲದ ರಾಗ, ಈ ರಾಗಕ್ಕೆ ಗಮನಾಶ್ರಯ ಎಂಬ ಮತ್ತೊಂದು
ಹೆಸರಿದೆ. ಬಿಡಾರಂ ಕೃಷ್ಣಪ್ಪನವರು : ಪಾರ್ವತೀ ಶಮಾಂಪಾಹಿ ಎಂಬ
೨೭೦
7
ಗಮನ ಲಲಿತ
ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ
ಗೌಳದ ಒಂದು ಜನ್ಯರಾಗ
ಸ ರಿ ಸ ಗ ಮ ಪ ದ ನಿ ದ ಸ
ಸ ದ ಮ ಗ ರಿ ಸ
ಅ
ಗತಿ ಭೇದಗಳು
ಭರತನಾಟ್ಯದ ಪಾದಭೇದಗಳಲ್ಲಿ ಹತ್ತು ವಿಧವಾದ
ಗತಿಭೇದಗಳಿವೆ. ಅವು ಹಂಸೀಗತಿ, ಮಯೂರೀ, ಮೃಗೀ, ಗಜಗತಿ, ತುರಂಗಿಣಿಗತಿ,
ಸಿಂಹೀ, ಭುಜಂಗೀ, ಮಂಡೂಕೀ, ವೀರ ಮತ್ತು ಮಾನವೀಗತಿ.
ಗತಿ-
ಗತಿ
ಗತಿ ಎಂದರೆ ಒಂದು ನಡೆ, ಒಂದು ಧಾಟಿ. ಇದನ್ನು ತಿಳಿಯಲು
ಒಂದು ಉದಾಹರಣೆ ಸಾಕು.
ತ ಅ ಅ ನಂ ತೋಂ
ತ ಅ ಅ ಅ ಅ ನಂ
ತೋಂ ತ ಅ ಆ ನಂ
ಒಂದು
ಎಂಬ ಅಕ್ಷರಗಳನ್ನು ತಾನದಲ್ಲಿ ಶ್ರುತಿ ಶುದ್ಧವಾಗಿ ಹಾಡುತ್ತಾರೆ. ಇದಕ್ಕೊಂದು
ಗತಿಯುಂಟು. ಗತಿ ಎಂದರೆ ಓಟ, ಕಾಲ ಎಂದು ಸಾಮಾನ್ಯ ಅರ್ಥ.
ಕೃತಿಯನ್ನು ದ್ರುತಗತಿಯಲ್ಲಿ ಅಥವಾ ಮಂದಗತಿಯಲ್ಲಿ ಹಾಡಿದರು ಎಂದು ಹೇಳುವುದು
ವಾಡಿಕೆ. ಸಂಗೀತವು ದ್ರುತಲಯ ಅಥವಾ ಚೌಕಲಯದಲ್ಲಿತ್ತು ಎಂದು ಹೇಳಿದರೆ
ಸಮರ್ಪಕವಾಗಿರುತ್ತದೆ.
ಗತಿ ಎಂದರೆ ತಾಳಾಕ್ಷರಗಳಲ್ಲಿ ಅಡಕವಾಗಿರುವ ಓಟವನ್ನು ಸೂಚಿಸುತ್ತದೆ.
ಸಂಗೀತ ರಚನೆಯ ಸಾಹಿತ್ಯವು ಅದರ ಗತಿಗೆ ಹೊಂದಿಕೊಂಡಿರುತ್ತದೆ. ತಾಳದಲ್ಲಿ
ಅದರ ಜಾತಿಗೆ ಅನುಸಾರವಾಗಿ ಅಕ್ಷರ ಕಾಲಗಳಿರುತ್ತವೆ. ಪ್ರತಿ ಅಕ್ಷರ ಕಾಲವು ಅದಕ್ಕೆ
ತಕ್ಕ ವಿಭಾಗಗಳನ್ನು ಹೊಂದಿರುತ್ತದೆ. ಪ್ರತಿ ಅಕ್ಷರ ಕಾಲದ ಅಂಗಗಳು ತಾಳದ
ಸ್ವರೂಪವನ್ನು ನಿರ್ಧರಿಸುತ್ತದೆ. ತಾಳದಲ್ಲಿ ತಿಶ್ನ (೩), ಚತುರಶ್ರ (೪), ಖಂಡ (೫),
ಮಿಶ್ರ (೭), ಸಂಕೀರ್ಣ (೯)-ಎಂಬ ಐದು ಬಗೆಯ ಗತಿಗಳಿವೆ ಉದಾಹರಣೆಗೆ