This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ತಿಳಿಯಬಹುದು. ಶೃಂಗಾರಕ್ಕೆ ಭೂಪಾಳಿ, ಯಮನ್ ಕಲ್ಯಾಣ್, ಫರಜ್,

ಕಾಂಭೋಧಿ, ಖಮಾಚ್, ನವರೋಜ್, ಸುರಟ, ಕಾಪಿ, ಭೈರವಿ, ಶಂಕರಾಭರಣ ;

ವೀರರನಕ್ಕೆ ಬಿಲಹರಿ, ಅಠಾಣ, ಕೇದಾರಗೌಳ, ಸೌರಾಷ್ಟ್ರ,

ಪಂತುವರಾಳಿ ;

ಕರುಣರಸಕ್ಕೆ ಆಹಿರಿ, ಗೌಳೀಪಂತು, ಶಹಾನ, ದೇವಗಾಂಧಾರಿ ; ಭಯಾನಕಕ್ಕೆ

ಮಾಳವ, ಪಂತುವರಾಳಿ, ಭೈರವಿ, ರೇಗುತ್ತಿ ; ಅದ್ಭುತಕ್ಕೆ ಬೇಹಾಗ್, ಭೀಭತ್ಸಕ್ಕೆ

ವರಾಳಿ, ಶಾಂತಕ್ಕೆ ಸಾಮ, ಆನಂದಕ್ಕೆ ಬಿಲಹರಿ, ಮೋಹನ, ಭಕ್ತಿಗೆ ಕೇದಾರಗೌಳ,

ತೋಡಿ, ಭೈರವಿ, ವಾತ್ಸಲ್ಯಕ್ಕೆ ನೀಲಾಂಬರಿ, ಕಾಂಬೋಧಿ, ವ್ಯಥೆಗೆ ಯದುಕುಲ

ಕಾಂಬೋಧಿ, ಅಹಂಕಾರಕ್ಕೆ ದೇವಗಾಂಧಾರಿ, ಜಂಬಕ್ಕೆ ಸುರಟ, ಬೇಡಿಕೆ ಮತ್ತು

ದೈನ್ಯಕ್ಕೆ ರೀತಿಗೌಳ, ಪೂರ್ವಿಕಲ್ಯಾಣಿ, ಅಸೂಯೆಗೆ ಕಲ್ಯಾಣಿ ಇತ್ಯಾದಿ. ಇದಲ್ಲದೆ

ಯಾವ ರಾಗಕ್ಕೆ ಯಾವ ರಾಗವು ಸೂಕ್ತ, ರಸಕ್ಕೆ ಅನುಗುಣವಾದ ವೃತ್ತವನ್ನು ಕೂಡ

ಶಾಸ್ತ್ರಜ್ಞರು ಹೇಳಿದ್ದಾರೆ.
 
೨೬೮
 
ಗಮಕಿಯು ಗಮನಿಸಬೇಕಾದ ಮತ್ತೊಂದು ಅಂಶವಿದೆ. ಪ್ರತಿಯೊಬ್ಬ

ಕವಿಯೂ ತನಗೆ ಕರಗತವಾದ ನಡೆಯಲ್ಲಿ ಕಾವ್ಯವನ್ನು ರಚಿಸಿದ್ದಾನೆ. ಒಂದೊಂದು

ಕಾವ್ಯವು ಒಂದೊಂದು ಬಗೆಯ ನಡೆಯಲ್ಲಿ ಓಡುತ್ತದೆ. ಕಾವ್ಯವನ್ನು ವಾಚಿಸುವಾಗ

ಅದು ಯಾವ ಗತಿಯಲ್ಲಿ ನಡೆದಿದೆ, ಅದರ ಸ್ವರಲಾಸ್ಯವೇನು ಎಂಬುದನ್ನು ಗಮನಿಸಿ

ಅದನ್ನು ಮೆರಸಬೇಕು. ಏಕೆಂದರೆ ಗಮಕಕಲೆಯು ಕಾವ್ಯರಸ, ಗಾನರಸ ಮತ್ತು

ಲಯಬದ್ಧವಾದ

ನಡೆಯ ಮಧುರಸಂಗಮ. ವಾಚನವು ಹೇಗಿರಬೇಕೆಂಬುದು

ಈ ಪದ್ಯವು ನಿರೂಪಿಸುತ್ತದೆ.
 
ಎಡರದೆ ತಡೆಯದೆ ತಲೆಯಂ
 

ಕೊಡಹದೆ ರಸಮಂ ।
 
ಕೆಡಿಸದೆ ಸರ್ವರ ಚಿತ್ರ
 

ಕಾವ್ಯಾನಂದದ
 
ಕೊಡಬಡಲೋದುವನೆ ಗಮಕಿ ಕನ್ನಡ ಜಾಣಾ ॥ (ನೀತಿಸಾರ)

ಕಲ್ಪನಾವಿಲಾಸ,

ಕಲ್ಪನಾವಿಲಾಸ, ಮಾತಿನ ಪಲುಕು
 

ಕುಲುಕುಗಳು,
 

ಏರಿಳಿತಗಳು, ಶಬ್ದಗಳ ನಿನಾದ, ಸಂಗೀತದ ನಾದ, ನಡೆ, ಗತಿ ಎಲ್ಲವೂ ಸರಿಸಮನಾಗಿ

ಸೇರಿದ ಗಮಕಕಲೆಯು ಕಾಂತಿಯುತವಾಗಿ
 

ಹೊಳೆದು ಚಿತ್ತಾಕರ್ಷಕವಾದ
 

ಕಾವ್ಯರಾಶಿ ಉಳಿಯುತ್ತದೆ.
 

ಚೆಲುವಿರೆ ಬರೆವರ ಕೈಯೋಳ್
 

ಇಂಪಿಗೆ ಒರೆವರ ಬಾಯೊಳ್
 

ಸವಿಯಿರೆ ಕೇಳ್ವರ ಕಿವಿಯೋಳ್
 

ಬಾಳ್ವುದು ಭಾಷೆಯು ನಾಡೋಳ್ (ಕೆ.ಟಿ.ಆರ್. ಅಯ್ಯಂಗಾರ್)
 

 
ಗಮಕಕ್ರಿಯ
ಇದು
ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೫೩ನೆಯ
 

ಮೇಳದ ಹೆಸರು. ಇದು ೫೩ನೆ ಮೇಳಕರ್ತ ಗಮನ ಶ್ರಮದ ಒಂದು ಜನ್ಯರಾಗ,
 
ಗಮಕಕ್ರಿಯ-ಇದು