This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ರಮಣೀಯಕ ರಚನೆಯಲ್ಲಿ ಸ
 

ನಾಮನೆನಿಸುವನೆ ಗಾಯಕನರಸಕೇಳೆಂದ
 

ಇವೆಲ್ಲಾ ಗಮಕಿಗೂ ಸಲ್ಲತಕ್ಕದ್ದೇ,
 

ನಿಜಗುಣ ಶಿವಯೋಗಿಯು (೧೫ ನೆ ಶ.) ಸ್ಪಷ್ಟವಾಗಿ ಗಮಕಿಯ ಲಕ್ಷಣವನ್ನು
 
ಇಂತು ನಿರೂಪಿಸಿದ್ದಾ ನೆ.
 
G
 
೨೬೭
 

ಗಾನತಾನಮಾನಂಗಳಂತೋರಿ ಯತಿಚರಣಾರ್ಥೋಲ್ಲೇಖಾದಿ
 

ಸಾಂದರ್ಭಿಕ ಮಿಶ್ರವರಿತು ಪದಸಂವ್ಯಕ್ತಿಗೈದು ಕೇಳರಿಗಿಂಪು

ಗೊಳಿಸಿ ಮೃದುಮಧುರ ವ್ಯಕ್ತವರ್ಣೋಚ್ಚಾರಣದಿಂ

ಭಾವಸೂಚಕರಾದ ಗಮಕಿಗಳಿಂ ತುರೀತರಾಗಿ
 

ಷಡಕ್ಷರಿಯು (೧೬೫೩) ಗಮಕದ ರೂಪರೇಖೆಗಳನ್ನು ವರ್ಣಿಸಿರುವ
 

ರೀತಿಯಿದು :
 
>>
 
ಕವಿ ವಿಬುಧರ ಕಿವಿಯೋ೪ ಸೂಸುವ
 

ನವರಸ ಮಿಳಿದು ತೀವಿ ತನುವಂ ಮನಮಂ

ಕವಿದು ಪೊರಸೂಸಿತೆನೆ ಪೊ
 

ಣುವ ಸುಖಬಾಷ್ಪಂ ತುಳುಂಕೆ ಪೇಳ್ವುದು ಕೃತಿಯಂ ।.

ಕವಿ ಲಕ್ಷ್ಮೀಶನು (೧೭೦೦) ಪ್ರಬಂಧದ ಲಕ್ಷಣವನ್ನು ಈ ರೀತಿ ವಿವರಿಸಿ ಕಾವ್ಯವನ್ನು

ಓದುವಾಗ ಈ ವಿಷಯಗಳನ್ನು ಗಮನಿಸಬೇಕೆಂದು ಸೂಚನೆಯಿತ್ತಿದ್ದಾನೆ.

* ಚತುರ ಪದಗತಿಯ ಸರಸಧ್ವನಿಯ ವರ್ಣ ಶೋ

ಭಿತದಲಂಕಾರದ ಸುಲಕ್ಷಣದ ಲಾಲಿತ
 

ಶೃತಿರಂಜನದ ವಿಶೇಷಾರ್ಥ ಸಂಚಿತದ ವಿಸ್ತಾರದಿಂ ಪೊಸತೆನಿಸುವ

ನುತ ಸತ್ಕವಿ ಪ್ರೌಢತರ ಸುಪ್ರಬಂಧದಂತೆ "
 

ಹೀಗೆ ಗಮಕದ ರೂಪರೇಖೆಗಳು ಕ್ರಮೇಣ ಬೆಳೆದು ಬಂದಿವೆ.
 

ಗಮಕ ಮತ್ತು ಸಂಗೀತ-ಕಾವ್ಯವಾಚನವು ಮೋಹನದ ತನಿರಸವಾಗಿ,

ಕರ್ಣಾಮೃತವಾಗಿ, ತನುವನ್ನು ಹೊಕ್ಕು ಮನಸ್ಸನ್ನು ಹಿಂಡಬೇಕಾದರೆ ಅದಕ್ಕೆ

ಸಂಗೀತದ ಹಿನ್ನೆಲೆ ಬೇಕು. ಸಂಗೀತದ ಲಕ್ಷಣವೆಂದರೆ ಮೂರು ಸ್ಥಾಯಿಗಳಲ್ಲಿ

ಸಂಚಾರ ಮಾಡುವ ಶಾರೀರ, ರಮಣೀಯಕ ರಾಗಭಾವಗಳುಳ್ಳ ಕಂಪಿತ, ಮೂರ್ಛನೆ

ಇತ್ಯಾದಿ. ಯಾವ ರಸಕ್ಕೆ ಯಾವ ರಾಗ ಅಥವಾ ರಾಗಗಳು ಉಚಿತ ಎಂಬುದನ್ನು

ತಿಳಿದು ಸಾಹಿತ್ಯದ ರಸವನ್ನೂ ರಾಗರಸವನ್ನೂ ಒಂದುಗೂಡಿಸಿ, ಸಾಹಿತ್ಯದ ಸೊಬಗನ್ನು

ತೋರಿಸಿಕೊಡಬೇಕು. ರಸಕ್ಕೆ ಹೊಂದದ ಯಾವುದೋ ರಾಗದಿಂದ ವಾಚಿಸಬಾರದು.

ಗಮಕದಲ್ಲಿ ಸಂಗೀತವು ಪ್ರಧಾನವಲ್ಲದಿದ್ದರೂ ಸಾಹಿತ್ಯರಸ ಭಾವಾರ್ಥಗಳ ಪ್ರಕಾಶಕ್ಕೆ

ರಾಗಗಳಾದರೂ ಚೆನ್ನಾಗಿ ಪರಿಚಯ

ವಿರಬೇಕು. ಯಾವ ರಾಗಕ್ಕೆ ಯಾವ ರಸ ಎಂಬುದನ್ನು ಸಂಗೀತಶಾಸ್ತ್ರ ಗ್ರಂಥಗಳಿಂದ
 
ಸಹಾಯಕವಾಗಿದೆ.
 

ಗಮಕಿಗೆ ೨೦-೩೦