2023-07-03 10:32:52 by jayusudindra
This page has been fully proofread once and needs a second look.
ಈ ವಾಚನತಂತ್ರವನ್ನು ರೂಢಿಸಿಕೊಂಡಿರುವವನು ಗಮಕಿ,
ಕರ್ಣಾಟಕದಲ್ಲಿ
ಕವಿಚಕ್ರವರ್ತಿಗಳಾಗಿದ್ದ ಪಂವ, ರನ್ನ, ಲಕ್ಷ್ಮೀಶ, ಹರಿಹರ, ಕುಮಾರವ್ಯಾನ, ಪೊನ್ನ,
ನರಹರಿ ಮುಂತಾದವರು ಮಹಾಕಾವ್ಯಗಳ ಅಮೂಲ್ಯ ಆಸ್ತಿಯನ್ನು ಬಿಟ್ಟು
ಹೋಗಿದ್ದಾರೆ.
೨೬೬
ಗಮಕಿಯು ಕಾವ್ಯ ಮತ್ತು ಸಹೃದಯರ ಮಧ್ಯವರ್ತಿ, ಹಿಂದಿನ ಕವಿ
ಶ್ರೇಷ್ಠರು ರಚಿಸಿದ ಕಾವ್ಯ ಸಂಪತ್ತಿನ ಪ್ರತಿನಿಧಿ ; ಅವರ ಕಾವ್ಯಸುಧೆಯನ್ನು ನಮಗೆ
ಕಾವ್ಯಗಳಲ್ಲಿರುವ ರಸ, ಅಲಂಕಾರ, ಅರ್ಥಸಂಪತ್ತು
ಮತ್ತು ಗುಣ ವಿಶೇಷಗಳನ್ನೆಲ್ಲಾ ಮೊದಲು ತಾನು ಗ್ರಹಿಸಿ, ಅನುಭವಿಸಿ, ತರುವಾಯ
ಅದರ ರಸಪಾಕಮಾಡಿ ರಸಿಕರಿಗೆ ಹಂಚುತ್ತಾನೆ. ಕಾವ್ಯ ರಾಶಿಗೂ ಅದರ ಮುಖ್ಯ ರಸ
ಸಂಪತ್ತಿಗೂ ಸೇತುವೆಯಂತಿದ್ದು ಅದರ ಅರಿವಿನತ್ತ ನಮ್ಮನ್ನು ಕೊಂಡೊಯ್ಯುತ್ತಾನೆ.
ಕಾವ್ಯಭಾಗವನ್ನು ತೆಗೆದುಕೊಂಡು ಶೋತೃಗಳಿಗೆ ಸುಲಭವಾಗಿ
ಅರ್ಥವಾಗುವಂತೆ, ತಾನೂ ಆನಂದಿಸಿ, ಅನುಭವಿಸಿ, ರಾಗ ಮತ್ತು ರಸಬದ್ಧವಾಗಿ
ವಾಚಿಸುತ್ತಾನೆ. ಕವಿಯ ಕಾವ್ಯದ ಸೊಬಗು, ಅರ್ಧದ ಸೊಬಗು, ಪದಲಾಲಿತ್ಯದ
ವೈಖರಿ, ಭಾವವೈಭವ ನಮ್ಮ ಹೃದಯವನ್ನು ಮುಟ್ಟಲು ಗಮಕಿಯ ಶ್ರಮವೇ ಮುಖ್ಯ.
ಅವನ ವಾಚನ ಕಲೆಯೇ ರಸಪುಷ್ಟಿ, ಅವನ ವಾಚನವು ಕೇಳುವವರ ಕಿವಿಗಳಿಗೆ
ಇಂಪು, ಮನಸ್ಸಿಗೆ ಸೊಂಪು, ಹೃದಯಕ್ಕೆ ತಂಪು ಉಂಟಾಗುವಂತಿರಬೇಕು.
ಗಮಕವು ಹೇಗಿರಬೇಕು ಎಂಬುದನ್ನು ವಾಲ್ಮೀಕಿ ರಾಮಾಯಣದಲ್ಲಿ ಲವಕುಶರ ಗಮಕ
ಕೌಶಲದಿಂದ ತಿಳಿಯಬಹುದು-
ದಿ
ದಕುಶೀಲವೌತು ಧರ್ಮಜ್ಞಾ ರಾಜಪುತ್ರಾಯಶಸ್ವಿನ್ ।
ಭ್ರಾತರೌ ಸ್ವರಸಂಪನ್ನ ದದರ್ಶಯಾ ಶ್ರಮವಾಸಿನ್ ॥
ಪಾಠಗೆಯೇ ಚ ಮಧುರಂ ಪ್ರಮಾಭಿರನ್ವಿತಂ ।
ಜಾತಿಭಿಃ ಸಪ್ತಭಿರ್ಯುಕ್ತಂ ತಂಲಯ ಸಮನ್ವಿತಂ ॥
ರಸ್ತೆಶೃಂಗಾರ ಕರುಣಾಹಾಸ್ಯ ರೌದ್ರಭಯಾನಕೈಃ ।
ವೀರಾದಿಭಿಃ ರಸ್ತೆರ್ಯುಕ್ತಂ ಕಾವ್ಯಮೇತದಗಾಯತಾಂ ॥
ಗಾಯಕನಿಗೂ ಗಮಕಿಗೂ ಹೆಚ್ಚು ವ್ಯತ್ಯಾಸವಿಲ್ಲ. ಗಾಯಕನ ಲಕ್ಷಣವನ್ನು
ಕುಮಾರವ್ಯಾಸನು ಇಂತು ವರ್ಣಿಸಿದ್ದಾನೆ
ಗ್ರಾಮ ಮೂರರ ಸಂಚರಣೆಗಳ
ಸೀಮೆಯಲಿ ಸರಿಗಮ ಪದನಿಗಳ
ನೇಮತಪ್ಪದೆ ಹರಣ ಭರಣದ ಹೆಂಪುತಿರುಪುಗಳ
ಕೋಮಲಿತ ಶಾರೀರ ಹೃದಯದ