2023-07-03 10:32:12 by jayusudindra
This page has been fully proofread once and needs a second look.
6
*
ಪಡಿಸಿದುದು" ಎಂದಿದ್ದಾನೆ ಅಲ್ಲಿ ಸ್ತ್ರೀಯರೂ ಸಹ ವಾಚನ ಮಾಡುತ್ತಿದ್ದರಂತೆ.
ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿ - ಗಮಕಿಶ್ರೇಣಿ '
ಓದುವಗಿರಿಯ (೧೫೨೫ ಕ್ರಿ ಶ ) ಪ್ರಸಿದ್ಧ ಗಮಕಿಯಾಗಿದ್ದನು ವಿಜಯನಗರದ
ಅಚ್ಚುತರಾಯನ ಕಾಲದಲ್ಲಿ ತಿರುಮಲಮ್ಮ ಮತ್ತು ನಾಗ ಎಂಬುವರು ಪ್ರಸಿದ್ಧ
ಗಮಕಿಗಳಾಗಿದ್ದರು. ಚಾಮರಾಜ ಒಡೆಯರ ಆಸ್ಥಾನದಲ್ಲಿ ಉದ್ಧಾಮ ಕವಿಯೂ,
ಅದ್ವಿತೀಯ ಗಮಕಿಯೂ ಆದ ಅಭಿನವ ಕಾಳಿದಾಸ ಬಸಪ್ಪ ಶಾಸ್ತ್ರಿಗಳಿದ್ದರು. ತಮ್ಮ
ಭಾರತವಾಚನದಿಂದ ಗೋವುಗಳನ್ನೂ ಮೇವು ಮರೆಯುವಂತೆ ಮಾಡುತ್ತಿದ್ದರಂತೆ !
ಇತ್ತೀಚಿನ ದಿನಗಳಲ್ಲಿ ಸಂ. ಗೋ. ಬಿಂದೂರಾಯರು, ಕಳಲೆ ಸಂಪತ್ತು ಮಾರಾಚಾರರು,
ಕೃಷ್ಣಗಿರಿ ಕೃಷ್ಣರಾಯರು, ಗಮಕಿ ರಾಮಕೃಷ್ಣಶಾಸ್ತ್ರಿ ಮುಂತಾದವರು ಪ್ರಸಿದ್ಧ
ಗಮಕಿಗಳಾಗಿದ್ದರು. ಈಗಿನ ಗಮಕಿಗಳಲ್ಲಿ ಗಮಕಕಲೆ ಗಮಕರಹಸ್ಯ, ಕಾವ್ಯಾನುಭವ
ಇತ್ಯಾದಿ ಗ್ರಂಥಗಳ ಕರ್ತೃ ಕೆ. ಟಿ. ರಾಮಸ್ವಾಮಿ ಅಯ್ಯಂಗಾರ್, ಹೆಚ್. ಕೆ ರಾಮ
ಸ್ವಾಮಿ, ಗಮಕಿ, ಎಂ.ರಾಘವೇಂದ್ರರಾವ್, ಬಿ. ಎಸ್. ಎಸ್ ಕೌಶಿಕ್, ಜೋಳದ
ರಾಶಿ ದೊಡ್ಡಣ್ಣ ಗೌಡ, ತಲಕಾಡು ಮಾಯಿಗೌಡ, ರಾಮಾರಾಧ್ಯ, ಮಂಡ್ಯದ
ಶೇಷಗಿರಿರಾವ್, ಆನಂದ ಪುರದ ವಿ. ಕೆ ಆನಂದಾಳ್ವಾರ್, ಗಿರಿಧರ್, ಶಕುಂತಳಾಬಾಯಿ
ಹೊಸಬಾಳೆ ಸೀತಾರಾಮಯ್ಯ, ಗೌರಮ್ಮ ನಾಗರಾಜ್
೨೬೫
ಹಿಂದಿನಿಂದ ಬೆಳೆದು ಬಂದ ಗಮಕ ಕಲೆಯು - ಮಲಿನವಸದೊಳು ಮುಸುಕಿದ
ಮಾಣಿಕ್ಯ 'ದಂತಿದ್ದು ಹರಿದಾಸರ ವೈವಿಧ್ಯಮಯವಾದ ಸಾಹಿತ್ಯ ಮತ್ತು ವಚನ
ಸಾಹಿತ್ಯಗಳಿಂದ ಮತ್ತಷ್ಟು ಪ್ರಚಲಿತವಾಯಿತು. ಉಗಾಭೋಗ, ಸೂಳಾದಿಗಳು,
ತ್ರಿಪದಿ, ರಗಳೆ, ಸಾಂಗತ್ಯ ಇತ್ಯಾದಿ ಜಾತಿಯ ಕಾವ್ಯಗಳನ್ನು ಭಾವ ಮತ್ತು ಅರ್ಥಗಳು
ಕೆಡದಂತೆ ಗಮಕಕಲೆಯಲ್ಲಿ ಬಳಸುವ ಪದ್ಧತಿ ಬೆಳೆಯಿತು. ಕುಮಾರವ್ಯಾಸನ
ಭಾರತ, ಲಕ್ಷ್ಮೀಶನ ಕಾವ್ಯ ಇತ್ಯಾದಿಗಳಿಂದ ಗಮಕ ಮತ್ತು ಗಮಕಿಗಳಿಗೆ ಬೃಹತ್
ಸ್ಥಾನವೇ ನಿರ್ಮಾಣವಾಯಿತು.
ಗಮಕವು ಹೇಗಿರಬೇಕು ?-ಕವಿಗಳು ಪ್ರತಿಭಾನ್ವಿತರು. ರವಿಕಾಣದುದನ್ನು
ಅವರು ಕಾಣುತ್ತಾರೆ. ಪದಗಳ ಸರಿಯಾದ ಅರ್ಥ, ಉಚಿತ ಪ್ರಯೋಗ, ಪದಭಂಡಾರ,
ಪ್ರತಿಭೆ ಇವೆಲ್ಲವೂ ಅವರ ಅಧೀನ. ಅವರು ತಮ್ಮ ಪದಸಂಪತ್ತಿನಿಂದ ಮನೋಹರ
ವರ್ಣನೆ. ಹೃದಯಂಗಮವಾದ ಮಾತುಗಳ ಬಳಕೆಯಿಂದ ಕಾವ್ಯಗಳನ್ನು ರಚಿಸಿರುವರು.
ಭಾಷೆ ಎಂಬುದು ಕವಿಗಳ ಸೊತ್ತು. ಅಭಿಪ್ರಾಯವೆಂಬ ಕನ್ನಿಕೆಗೆ ಭಾಷೆಯೆಂಬ
ಮೋಹದ ರೂಪದ ಉಡುಪನ್ನು ಉಡಿಸಿ, ಅಲಂಕಾರವೆಂಬ ಒಡವೆಗಳನ್ನು ತೊಡಿಸಿ,
ಆ ಕನ್ನಿಕೆಯ ಮೋಹನಾಸ್ತ್ರದಿಂದ ದಿಗ್ಗಾಂತರಾಗುವಂತೆ ಮಾಡುತ್ತಾರೆ " (ಗಮಕ
ರಹಸ್ಯ ಪು. ೧೮). ಹಿಂದೆ ಜನರು ( ಕುರಿತೋದದೆಯುಂ ಕಾವ್ಯ ಪ್ರಯೋಗ
ಪರಿಣತಮತಿ ಗಳಾಗಿದ್ದರು. ಅವರಿಗೆ ಗಮಕ ಪಠಣದಿಂದ ಭಾಷಾವಿವೇಚನಾಶಕ್ತಿ
65