This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ರಮ್ಯವಾಗಿ, ರಸವತ್ತಾಗಿ ನಡೆಸಿಕೊಂಡು ಹೋಗುವ ಕಲೆಯೇ ಗಮಕಕಲೆ.
ಪದ್ಯಮಾತ್ರವೇ ಅಲ್ಲ, ಗದ್ಯವನ್ನು ಓದುವುದೂ ಗಮಕಕಲೆಯ ಸೀಮೆಗೆ
 
ಸೇರಿಕೊಂಡಿದೆ.
 
೨೬೪
 
ಕಾಲಕ್ಕೆ
ಪಠಿಸಿ,
 
ಗಮಕದ ಪ್ರಾಚೀನತೆಯನ್ನು ವಾಲ್ಮೀಕಿ ರಾಮಾಯಣದ
ಕೊಂಡೊಯ್ಯಬಹುದು. ಲವಕುಶರು ವಾಲ್ಮೀಕಿ ರಾಮಾಯಣವನ್ನು
ರಾಮನನ್ನೂ, ಜನರನ್ನೂ ಮೆಚ್ಚಿಸಿದರು ಎಂಬ ವಿಷಯ ಸರ್ವವೇದ್ಯ. ಕಾವ್ಯವು
ಎಂದು ಹುಟ್ಟಿತೋ ಅಂದು ಗಮಕಿಗೆ ಸ್ಥಾನ ಉಂಟಾಯ್ತು. ಗಮಕಕಲೆಯ
ಪ್ರಾಚೀನತೆಯನ್ನು ಸಮರ್ಧಿಸಲು ರಾ. ನರಸಿಂಹಾಚಾರ್ಯರು ಹೀಗೆ ಹೇಳಿದ್ದಾರೆ
ಕ್ರಿ. ಪೂ. ಒಂದನೇ ಶತಮಾನದ ಗ್ರಂಥವಾದ " ಲಲಿತವಿಸ್ತರ "ದಲ್ಲಿ ಬುದ್ಧನು ೬೪
ವಿದ್ಯೆಗಳನ್ನು ಕಲಿತಿದ್ದ ನೆಂದೂ ಹೇಳಿದೆ. ಆ ಅರವತ್ತು ನಾಲ್ಕು ಕಲೆಗಳ ಎಣಿಕೆ ಮಾಡಿ
ಹೇಳುವಾಗ ಈ ಗಮಕಕಲೆಯನ್ನು ೩೮ನೆ ಕಲೆಯನ್ನಾಗಿ ಮಾಡಿದ್ದಾರೆ. ಕ್ರಿ.ಶ.
ಒಂದನೇ ಶತಮಾನದಲ್ಲಿದ್ದ ವಾತ್ಸಾಯನನು ರಚಿಸಿದ ಗೀತಪರಿತಂ
ಗ್ರಂಥದಲ್ಲಿ ಗಮಕಕಲೆಯನ್ನು "ಪುಸ್ತಕವಾಚನಂ" ಎಂದು ಕರೆದಿದೆ
ಪ್ರಾಚೀನ ಗ್ರಂಥಗಳಲ್ಲಿ ಈ ಕಲೆಯ ಬಗ್ಗೆ ನೃಪತುಂಗನ ಕವಿರಾಜ
ಮಾರ್ಗದಲ್ಲಿರುವ ಉಲ್ಲೇಖವನ್ನು ಗಮನಿಸಬಹುದು.
 
ಎಂಬ
 
ಎಂದು
 
ತಿಳಿಸಿರುವರು.
 
9
 
66
 
"7
 
* ವೀರರಸಂ ಸ್ಟುಟೋಕ್ತಿಯನುದಾರತಮಂ ಕರುಣಾರಸಂ ಮೃದೋಚ್ಚಾರಣೆಯಿಂದ
ಮದ್ಭುತರಸಮಂ ನಿಬಿಡೋಕ್ತಿಗಳಿಂದ ಮತ್ತೆ ಶೃಂಗಾರರಸಂ ಸಮಂತು ಸುಕುಮಾರ
ತರೋಕ್ತಿಗಳಿಂದ ಪ್ರಸನ್ನ ಗಂಭೀರತರೋಕ್ತಿಯಿಂ ಪ್ರಕಟಮಕ್ಕೆ ರಸಂ ಸತತಂ
ಪ್ರಶಾಂತದಿಂ". ರಸೋತ್ಪತ್ತಿಯನ್ನುಂಟು ಮಾಡುವ ರೀತಿಯೆಂದು ಗಮಕದ
ಇವುಗಳಿಂದ ಗಮಕವು ಬಹು ಪ್ರಾಚೀನವಾದು
 
ಲಕ್ಷಣಗಳನ್ನು ಕೊಟ್ಟಿದ್ದಾನೆ.
ದೆಂಬುದನ್ನು ಸಮರ್ಥಿಸಬಹುದು.
 
ಕವಿ, ಗಮಕಿ, ವಾದಿ, ವಾಗಿ ಎಂಬ ನಾಲ್ಕು ಪದಗಳನ್ನು ಸಾಹಿತ್ಯದಲ್ಲಿ ಬಹಳ
ಹಿಂದಿನಿಂದಲೂ ಉಪಯೋಗಿಸುತ್ತಿದ್ದಾರೆ. ಇವು ಒಂದು ಚತುಷ್ಟಯ. ಕಾವ್ಯವನ್ನು
ರಚಿಸತಕ್ಕವನು ಕವಿ
ಅದನ್ನು ಅರ್ಧ ರಸ ಭಾವಗರ್ಭಿತವಾಗಿ ಓದುವವನು ಗಮಕಿ,
ಮನಸ್ಸಿನ ಮೇಲೆ ಪರಿಣಾಮವುಂಟಾಗುವಂತೆ ಭಾಷಣ
ಮಾಡುವವನು ವಾಗಿ
ಸ್ವಪಂಥವನ್ನು ಪ್ರತಿಪಾದಿಸುವ ನೈಪುಣ್ಯವನ್ನು ಪಡೆದಿರುವವನು ವಾದಿ ಕವಿಗೂ
ಗಮಕಿಗೂ ಬಹು ನಿಕಟ ಬಾಂಧವ್ಯವಿರುವುದು ಸ್ವತಃ ಸಿದ್ಧ ಹಾಗೂ ಹಿಂದೆ ರಾಜರ
ಆಸ್ಥಾನಗಳಲ್ಲಿ ಕವಿ ಗಮಕಿಗಳಿಗೆ ಸ್ಥಾನವಿತ್ತು. - ವಿವೇಕ ಚಿಂತಾಮಣಿ'ಯಲ್ಲಿ
ಉಕ್ತವಾಗಿರುವಂತೆ ಸಭೆಯ ಸಪ್ತಾಂಗಗಳಲ್ಲಿ ಪೌರಾಣಿಕರು ಒಂದು ಅಂಗವಾಗಿದ್ದರು.
ಗೋವಿಂದವೈದ್ಯನ * ಕಂಠೀರವನರಸರಾಜವಿಜಯ 'ದಲ್ಲಿ
ಮೈಸೂರು ಅರಸರ
ಆಸ್ಥಾನದಲ್ಲಿ ಭಾರತಿಗಳು ಅಥವಾ ಗಮಕಿಗಳಿದ್ದರೆಂದು ಹೇಳಿದೆ. ತನ್ನ ಕಾವ್ಯವನ್ನು
* ಭಾರತೀನಂಜನೊಲಿದು " ಅವನ ಮುಖದಿಂದ ವಾಚಿಸಿ ರಾಜಾಸ್ಥಾನದಲ್ಲಿ ವಿಸ್ತಾರ