This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸ್ವರಗಳನ್ನು ತಗ್ಗಿಸಿ ಮಂದ್ರಸ್ಥಾಯಿಯಲ್ಲಿ ಸಂಚುಮಾಡಿ ಹಾಡಿ ಕಂಪಿಸುವುದು
ನಾಮಿತ. ಕೃತಿ ಮುಂತಾದುವನ್ನು ವೀಣೆಯಲ್ಲಿ ನುಡಿಸುವಾಗ ಅಕ್ಷರಗಳಿಗೆ ಮಾಟು
ಕೊಟ್ಟು ರಸವು ಉತ್ಪತ್ತಿಯಾಗುವಂತೆ ಮಾಡುವ ಗಮಕ,
 
೨೬೦
 
(೧೫) ಮಿಶ್ರಿತ-ಇದು ಹಲವು ಗಮಕಗಳ ಮಿಶ್ರಣ, ಸ್ವರಗುಚ್ಛಗಳಲ್ಲಿ
ಅಥವಾ ರಚನೆಗಳಲ್ಲಿ ಸ್ವರಗಳ ಸಂವಾದಿ ಭಾವಕ್ಕನುಗುಣವಾಗಿ ಅನೇಕ ಬಗೆಯ
ಗಮಕಗಳು ಮಿಶ್ರಣಗೊಂಡು ಪ್ರಯೋಗಿಸಲ್ಪಡುತ್ತವೆ
 
ಪಂಚದಶ ಗಮಕಗಳಲ್ಲಿ ಲೀನ, ಆಂದೋಳಿತ, ಪ್ಲಾವಿತ ಗಮಕಗಳು ಕಂಪನದ
ವಿವಿಧ ರೂಪಗಳು, ಪಂಚದಶ ಗಮಕಗಳಲ್ಲಿ ಹೆಚ್ಚು ಗಮಕಗಳು ವೀಣೆಯಲ್ಲಿ ಪ್ರಯೋಗ
ವಾಗುವುದರಿಂದ ಹಾಡುಗಾರಿಕೆ ಹಾಗೂ ವಾದ್ಯ ಸಂಗೀತಗಳಿಗೂ ಸಮಂಜಸವಾದ ದಶ
ವಿಧ ಗಮಕಗಳು ಈಗ ರೂಢಿಯಲ್ಲಿದ್ದು ಕರ್ಣಾಟಕ ಸಂಗೀತದಲ್ಲಿ ಪ್ರಾಮುಖ್ಯತೆಯನ್ನು
 
ಪಡೆದಿವೆ.
 
ಅತಿ ಪ್ರಾಚೀನವಾದ ಕೆಲವು ಅಲಂಕಾರಗಳೂ ದಶವಿಧ ಗಮಕಗಳಲ್ಲಿ ಸೇರಿವೆ,
ಕೊಹಲನ ಮತದಂತೆ ಅವುಗಳ ಹೆಸರನ್ನು ಈ ಶ್ಲೋಕದಲ್ಲಿ ಹೇಳಿದೆ :
 
ಆರೋಹಣಮವರೋಹಂ ಚ ಢಾಲು ಸ್ಪುರಿತ ಕಂಪಿತಃ ।
ಆಹತ ಪ್ರತ್ಯಾಹತಶ್ಚ ತ್ರಿಪುಚ್ಛಾಂದೋಳ ಮೂರ್ಛನಾಃ ॥
 
(೧) ಆರೋಹಣ ಒಂದು ಸ್ವರದಿಂದ ಆರೋಹಣ ಅಥವಾ ಏರಿಕೆಯ ಕ್ರಮ
ದಲ್ಲಿ ಸ್ವರಸಮೂಹಗಳಿದ್ದರೆ ಆ ಗುಂಪನ್ನು ಆರೋಹಣ ಗಮಕವೆನ್ನುತ್ತಾರೆ.
ಸ ರಿ ಗ ಮ ಪ ದ ನಿ
ರಿ ಗ ಮ ಪ ದ ನಿ ಸ
 
ಉದಾ :
 
ಗ ಮ ಪ ದ ನಿ ಸ ರಿ
 
ಅನೇಕ ಗಮಕಗಳು ಪ್ರಾಯೋಗಿಕ ವಿವರಣೆಯಲ್ಲಿ ಹೆಚ್ಚಿನ ಭಿನ್ನತೆ ಪಡೆಯದಿದ್ದರೂ
ಅವುಗಳ ಕಂಪನಾವರ್ತನಗಳು ಕಾಲಪ್ರಮಾಣ, ವೇಗ, ಉತ್ಪಾದನೆ ಮತ್ತು ಬೃಹತ್ವ
ಗಳಿಂದ ಪ್ರಮುಖ ವ್ಯತ್ಯಾಸಗಳು ಕಾಣುತ್ತವೆ. ಗಮಕಗಳನ್ನು ಎರಡು ವಿಧವಾಗಿ
 
ವಿಂಗಡಿಸಬಹುದು.
 
(೧) ರವೆ ಗಮಕಗಳು, (೨) ಜಾರು ಗಮಕಗಳು,
ಇವನ್ನು ಸ್ವರಸ್ರವಣ ಗಮಕಗಳೆಂದು ಕರೆಯಲಾಗಿದೆ. ಒಂದು ಶ್ರುತಿಯಿಂದ
ಮತ್ತೊಂದು ಶ್ರುತಿಗೆ ಅವಿಚ್ಛಿನ್ನವಾಗಿ ಸೇರುವುದು ಈ ಗಮಕಗಳ ವಿಶೇಷ ಗುಣ,
ಕಂಪಿತ, ಲೀನ, ಆಂದೋಳಿತ, ವಲಿ, ಉಲ್ಲಸಿತ ಮತ್ತು ಗುಂಫಿತಗಳು ಜಾರು ಗಮಕ
 
ಗಳು.
 
ಮುದ್ರಿತ, ನಾಮಿತ ಮತ್ತು ಮಿಶ್ರಿತ ಗಮಕಗಳು ಮೇಲಿನ ಎರಡು ಕ್ರಮ
ಅನ್ವಯವಾಗುತ್ತವೆ. ದಶವಿಧ ಗಮಕಗಳೆಲ್ಲವೂ ಸ್ಕೂಲವಾಗಿ ಆದಿ ಅಪ್ಪಯ್ಯ
ನವರ ಅಟತಾಳದ ವೀರಿಬೋಣಿ ಎಂಬ ಭೈರವಿ ವರ್ಣದಲ್ಲಿ ಪ್ರಯೋಗಿಸಲ್ಪಟ್ಟಿವೆ.
 
ಗಳಿಗೂ