2023-07-03 10:22:51 by jayusudindra
This page has been fully proofread once and needs a second look.
ಸಂಗೀತದಲ್ಲಿ ಈ ಗಮಕದ ಪ್ರಯೋಗವು ಹೆಚ್ಚಾಗಿ ಕಂಡುಬರುತ್ತದೆ.
ಜಾರುವುದು ಮತ್ತು ದಿಗುಜಾರು ಎಂದರೆ ಕೆಳಕ್ಕೆ ಜಾರುವುದು ಎಂಬ ಎರಡು
ವಿಧಗಳುಂಟು (ಏರುವ ಜಾರು, ಇಳಿಯುವ ಜಾರು). ಆರೋಹಣದಲ್ಲಾದರೆ
ಏರುವ ಜಾರು, ಅವರೋಹಣದಲ್ಲಾದರೆ ಇಳಿಯುವ ಜಾರು. ಒಂದು ಸ್ವರಸ್ಥಾನದಿಂದ
ಮತ್ತೊಂದು ಸ್ವರಸ್ಥಾನಕ್ಕೆ ಮಧ್ಯೆ ಇರುವ ಸ್ವರಗಳಿಗೆ ಪ್ರಾಮುಖ್ಯತೆ ಕೊಡದೆ
ಜಾರುವುದು ಉಲ್ಲಸಿತ. ದಾಟು ಸ್ವರ ಪ್ರಯೋಗಗಳಲ್ಲಿ ಅಂದರೆ ಗಾಂಧಾರದಿಂದ
ಧೈವತ ಅಥವಾ ಮಧ್ಯಮದಿಂದ ನಿಷಾದ ಸ್ವರಗಳನ್ನು ಹಾಡಬೇಕಾದರೆ ಮಧ್ಯೆಯಿರುವ
ಸ್ವರಗಳ ಛಾಯೆಯು ಗೋಚರಿಸುತ್ತದೆ. ಉದಾ : ಪ ಸಾ ಎಂದೆನ್ನುವಾಗ ಮಧ್ಯೆ
ಇರುವ ಧೈವತ ನಿಷಾದಗಳ ಛಾಯೆಯು ಬರುವಂತೆ ಪದನಿಸಾ ಎನ್ನುವಂತೆ
ಕಂಪಿಸುವುದು.
(೧೧) ಸ್ಮಾನಿತ
ಪ್ಲುತ ಪ್ರಮಾಣೇನ ಕಂಪಿತಃ । (ಸಂ.ರ)
ಇದೊಂದು ಬಗೆಯ ಕಂಪಿತ ಗಮಕ, ಒಂದು ಸ್ವರವನ್ನು ೧೨ ಅಕ್ಷರಕಾಲ ಅಥವಾ
ಮೂರು ಮಾತ್ರಾಕಾಲ ಅದರ ಮೇಲಿನ ಸ್ವರದ ಛಾಯೆ ಬರುವಂತೆ ಕಂಪಿಸುವುದು.
ತಕಾಲ ಪ್ರಮಾಣದಷ್ಟು ಕಂಪಿಸುವುದು ಪ್ಲಾವಿತ ಗಮಕ,
(೧೨) ಗುಂಫಿತ
೨೫೯
ಹುಮಿತಿ ವರ್ಣೋಗರ್ಭೇ ಅಂತರಿಯಸ್ಯ ! (ಸಂ.ರ)
ಈ ಗಮಕವನ್ನು ಹುಂಪಿತವೆಂದು ಗೋವಿಂದ ದೀಕ್ಷಿತರು ಹೆಸರಿಸಿದ್ದಾರೆ. ಹುಂಕಾರ
ವನ್ನು ಒಳಗೇ ಆರೋಹಣ ಮತ್ತು ಅವರೋಹಣ ಕ್ರಮದಲ್ಲಿ ಕಂಪಿಸುವ ಹಾಡು
ಗಾರಿಕೆಯ ಗಮಕವು ಹುಂಪಿತ. ಇದಕ್ಕೆ ದ್ವಿಪರಿಮಾಣಗಮಕವೆಂದು ಹೆಸರು.
ಇದು ವೀಣೆಯಲ್ಲಿ ಕೆಳಗಿನ ಷಡ್ಡದಿಂದ ಮೇಲಿನ ಷಡ್ಡದವರೆಗೆ ಒಂದೇ ಹುಂಕಾರ ನಾದ
ಹುಟ್ಟುವಂತೆ ನುಡಿಸಲ್ಪಡುವ ಒಂದು ಬಗೆಯ ಜಾರು ಗಮಕ,
(೧೩) ಮುದ್ರಿತ –
-
ಯಲ್ಲಿ ಕೆಲವು ವೇಳೆ ಅಂ ಕಾರಗಳ ಪ್ರಯೋಗವಿದ್ದಲ್ಲಿ ಈ ಗಮಕವನ್ನು ಬಳಸಲಾಗು
ವುದು.
ವುದು.
(೧೪) ನಾಮಿತ-
ಸ್ವರಾಣಾಂ ನಮನಂ ಮಂದ್ರಸ್ಥಾನೇ ಉಚ್ಚಾರಣಂ ಆರೋಹಣಂ ವಾ ॥