2023-07-03 10:19:52 by jayusudindra
This page has been fully proofread once and needs a second look.
ಬೇರೊಂದು ಸ್ವರದಲ್ಲಿ ಮಿಳಿತವಾಗುವಂತೆ ಮಾಡುವುದು ಲೀನ ಈ ಗಮಕದ ಕಾಲ
ಪ್ರಮಾಣವು ಈ ಮಾತ್ರಾ ಕಾಲ ಅಥವಾ ೩ ಅಕ್ಷರಕಾಲ, ಇದು ಮಧ್ಯಮದಿಂದ
ಪಂಚಮಕ್ಕೂ, ನಿಷಾದದಿಂದ ಷಡ್ಡಕ್ಕೂ ಅಡಿಗಡಿಗೆ ಬರುವ ಗಮಕ.
ಹಾಡುವುದು ಆಂದೋಲಿತ
(೫) ಆಂದೋಲಿತ (ಆಂದೋಳನ)-ಉಯ್ಯಾಲೆಯ ತೂಗಾಟದಂತೆ
ಒಂದು ಸ್ವರವನ್ನು ೪ ಅಥವಾ ೫ ಅಕ್ಷರಕಾಲ ಎಳೆದು
ಅದರ ಮೇಲಿನ ಸ್ವರದ ಛಾಯೆಯು ಬರುವಂತೆ ಮಾಡುವುದು ವೀಣೆಯ ಒಂದು
ಸ್ವರಸ್ಥಾನದಲ್ಲಿ ಒಂದು ಸ್ವರವನ್ನು ನುಡಿಸಿ ಅದೇ ಸ್ಥಾನದಿಂದ ತಂತಿಯನ್ನು ಜಗ್ಗಿಸಿ
ಎರಡು ಮೂರು ಸ್ವರಗಳು ತೋರುವಂತೆ ಮಾಡುವುದು
೨೫೮
ಅನೇಕವಿಧ ವಕ್ರತ್ವಯುಕ್ತ ವೇಗವತಾಂ ಸ್ವರಾಣಾಂ ಕಂಪಃ ॥ (ಸಂ.ರ)
ಅನೇಕ ಬಗೆಯ ವಕ್ರತ್ವದಿಂದ ಕೂಡಿದ ವೇಗವುಳ್ಳ ಸ್ವರಗಳ ಕಂಪನವು ವಲಿ.
ಒಂದೇ ಸ್ವರಸ್ಥಾನದಲ್ಲಿ ೨-೩ ಸ್ವರಗಳ ಛಾಯೆಯನ್ನು ಉಂಟುಮಾಡಿ
ತಂತಿಯನ್ನು ವರ್ತುಲಾಕಾರದಲ್ಲಿ ಸ್ವರಕಂಪನಗಳುಂಟಾಗುವಂತೆ ಜಗ್ಗಿಸುವುದು,
ಒಂದು ಸ್ವರವನ್ನು ವಕ್ರವಾಗಿ ಕಂಪಿಸಿ, ಅದರ ಮೇಲಿನ ಸ್ವರಗಳ ಛಾಯೆಯು
ಬರುವಂತೆ ಮಾಡುವುದು, ಇರುವೆಯ ಸಾಲು ಹರಿಯುವಂತೆ ಒಂದು ಸ್ವರಕ್ಕೂ
ಮತ್ತೊಂದು ಸ್ವರಕ್ಕೂ ಅಂತರವಿಲ್ಲದಂತೆ ಸ್ವರಕೂಡಿಸಿ ನುಡಿಸುವುದು ವಲಿ ಗಮಕ,
ಇದು ವೇಗದಿಂದ ಕೂಡಿದ ಕಂಪನ ಮತ್ತು ವೀಣೆಯಲ್ಲಿ ನುಡಿಸುವ ಗಮಕ,
(೭) ಭಿನ್ನ-
ಸ್ಥಾನ ಯೇಪಿ ಅವಿಶ್ರಾನಾಃ ನಿಬಿಡಾಸ್ವರಾಃರ್ಯ ॥ (ಸಂ. ರ)
ವೀಣೆಯಸಾರಣಿ, ಪಂಚಮ ಮತ್ತು ಮಂದ್ರ ಎಂಬ ಮೂರು ತಂತಿಗಳ ಮೇಲೆ
ಬೆರಳೂರಿ ಏಕ ಕಾಲದಲ್ಲಿ ಅಥವಾ ಒಂದಾದ ನಂತರ ಒಂದನ್ನು ಮಾಡಿದರೆ ಉಂಟಾಗುವ
ಸಂಗತ ಧ್ವನಿಗೆ ಭಿನ್ನವೆಂದು ಹೆಸರು
ಒಂದು ಸ್ವರಸ್ಥಾನದಿಂದ ಬೇರೊಂದು ಸ್ಥಾನದ ಸ್ವರವು
ಬರುವಂತೆ ನುಡಿಸುವುದು ಕುರುಳ, ಅವರೋಹಣ ಸ್ವರದಲ್ಲಿ ಕೆಳಗಿನ ಸ್ಥಾಯಿ
ಯಲ್ಲಿರುವಾಗ ಒಂದೊಂದು ಸ್ವರವನ್ನು ಎಳೆದು ಮೇಲಿನ ಸ್ವರಚ್ಛಾಯೆ ಬರುವಂತೆ
ಮಾಡುವ ಈ ಗಮಕವು ವಲಿಯನ್ನು ಹೋಲುತ್ತದೆ.
(೯) ಆಹತ (ಹೊಡೆತ)
ಇದು ವೀಣೆಯ ಗಮಕ, ಒಂದು ಸ್ವರವನ್ನು
ನುಡಿಸಿ ಮಾತಿಲ್ಲದೆ ಬೇರೊಂದು ಸ್ವರವನ್ನು ನುಡಿಸುವುದು ಆಹತ. ಗ ರಿ ಎಂದು
ಆರಂಭಿಸಿದರೆ ಮತ್ತೊಂದು ಗಾಂಧಾರ ಸ್ವರ ಛಾಯೆಯು ಬರುವಂತೆ ಗ ಗ ರಿ ಎಂದು
ನುಡಿಸಿದ ಹಾಗೆ ತೋರುವಂತೆ ಕಂಪಿಸುವುದು, ಪ ಮು ಎಂದು ಅವರೋಹಣ
ಮಾಡುವಾಗ ಪ ಪ ಮ ಎಂದು ತೋರುವಂತೆ ಕಂಪಿಸುವುದು.
ಗಮಕ