2023-07-03 10:18:57 by jayusudindra
This page has been fully proofread once and needs a second look.
ತಸ್ಯ ಭೇದಾನ್ನು ತಿರಿಪಃ ಸ್ಪುರಿತಃ ಕಂಪಿತಸ್ತಧಾ ।
ಲೀನ ಆಂದೋಲಿತವಲೀ ಭಿನ್ನ ಕುರುಲಾಹತಾಃ ॥
ಉಲ್ಲಾಸಿತಃ ಪ್ಲಾವಿತಶ್ಚ ಗುಂಫಿತೋ ಮುದ್ರಿತಸ್ತಥಾ ।
ನಾಮಿತೋ ಮಿಶ್ರಿತಃ ಪಂಚದಶೀತಿ ಪರಿಕೀರ್ತಿತಃ ॥
(೧) ತಿರಿಪ (ತೀಟಕಂಪನ)
ಅಲ್ಪ ಸ ಡಮರೋರ್ಧ್ವಾನೇಯಃ ಕಂಪನಾ ತದ್ವದ್ರಮಣೀಯಃ ।
ದ್ರುತಸ್ಯ ಚತುರ್ಧಾಂಶ ವೇಗೇನಯಃ ಸ್ವರಸ್ಯಕಂಪಃ ॥
ತಿರಿಪ ಎಂಬುದನ್ನು ಹಿಲ್ಲೋಲ ಎಂದೂ ಕರೆಯಲಾಗಿದೆ. ದ್ರುತಕಾಲ
ಪ್ರಮಾಣದ ಈ ಭಾಗದ ಸ್ವರಕಂಪನಕ್ಕೆ ತಿರಿಪ ಎಂದು ಹೆಸರು. ಒಂದು ಸ್ವರವನ್ನು
ಅರ್ಧಾಕ್ಷರಕಾಲ ನಿಲ್ಲಿಸಿ, ಅದನ್ನು ಎಳೆದು ಮುಂದಿರುವ ಸ್ವರದ ಛಾಯೆಯು
ಬರುವಂತೆ ಮಾಡುವುದು. ಇದು ಸಣ್ಣ ಡಮರುವಿನ ಧ್ವನಿಯ ಕಂಪನದಂತೆ
ರಮಣೀಯದಾಗಿರುತ್ತದೆ.
ಅ
(೨) ಸ್ಟುತ (ಮಿಳಿತ)
೨೭
ಮೃತಸ್ಯ ತೃತೀಯ ಭಾಗ ಸಮ್ಮಿತೋಯದಿವೇಗಃ
ಸ್ವರವೇಗಃ ಸ್ವರಕಂಪೋ ಭವತಿ !
ಈ ಗಮಕವನ್ನು ಗಿಕ್ಕಿರಿ ಎಂದೂ ಹೇಳುವುದುಂಟು. ದ್ರುತದ : ಭಾಗದಷ್ಟು
ಮಾತ್ರಾಕಾಲದಲ್ಲಿ ಸ್ವರವನ್ನು ಕಂಪಿಸುವುದು ಸ್ಪುರಿತ. ಜಂಟಿ ಸ್ವರ ಪ್ರಯೋಗಗಳಲ್ಲಿ
ಸ್ವರಗಳ ಮಧ್ಯೆ ಇರುವ ಇತರ ಸ್ವರಗಳು ಸೂಕ್ಷ್ಮವಾಗಿ ಕೇಳಲ್ಪಡುತ್ತವೆ. ಸ್ವರ
ಜೋಡಾವಣೆಯಲ್ಲಿ ದ್ವಿತೀಯ ಸ್ವರವು ಒತ್ತಲ್ಪಟ್ಟು ನುಡಿಯುತ್ತದೆ. ಸ ಸ, ರಿ ರಿ
ಆರೋಹಣ ಅವರೋಹಣ ಜಂಟಿ ಸ್ವರಗಳನ್ನು ಹಿಂದಿನ
ಸ್ವರಗಳೊಂದಿಗೆ ಕಂಪಿಸಿ ಮೇಲಿನ ಸ್ವರಗಳ ಛಾಯೆಯು ಬರುವಂತೆ ಮಾಡುವುದು.
(೩) ಕಂಪಿತ (ಕಂಪನ)-ಇದು ದೀರ್ಘಕಂಪನ. ಇದಕ್ಕೆ ಖಟಕವೆಂದೂ
ಹೆಸರು. ದ್ರುತದ ' ಭಾಗದಷ್ಟು ವೇಗದಿಂದ ಸ್ವರವನ್ನು ಕಂಪಿಸುವುದು ಕಂಪಿತ.
ಒಂದು ಸ್ವರವನ್ನು ಒಂದಕ್ಷರಕಾಲ ಕಂಪಿಸಿ ಅದರ ಮೇಲಿನ ಸ್ವರದ ಛಾಯೆ
ಬರುವಂತೆ ಮಾಡುವುದು.
(೪) ಲೀನ (ಮಿಳಿತ)-
ದ್ರುತಮಾನೇನ ಸ್ವರಾಣಾಂ ಕಂಪಃ ।
ಒಂದು ಸ್ವರದಲ್ಲಿ ಎರಡು ಅಕ್ಷರಕಾಲ ನಿಂತು ಕಂಪಿಸಿ, ಅದನ್ನು ಮೇಲಿನ ಸ್ವರಗಳ ಛಾಯೆ
ಬರುವಂತೆ ಮಾಡಿ ಅವುಗಳ ನಾದದಲ್ಲಿ ಲಯವಾಗುವಂತೆ ಮಾಡುವುದು ಲೀನ.
ಒಂದು ದ್ರುತಪ್ರಮಾಣ ವೇಗದಿಂದ ಕಂಪಿಸುವುದಕ್ಕೆ ಲೀನವೆಂದು ಶಾರ್ಙ್ಗದೇವನ