This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಶಶಿನಾ ರಹಿತೇವನಿಶಾ ವಿಜಲೇವ ನದೀಲತಾ ವಿಪುಷ್ಪವ ।
ಅವಿಭೂಷಿತೇವ ಕಾಂತಾ ಗೀತಿರಲಂಕಾರ ಹೀನಾಸ್ಯಾತ್ ॥
ಗಮಕವಿಲ್ಲದ ಸಂಗೀತವು ಚಂದ್ರನಿಲ್ಲದ ರಾತ್ರಿಯಂತೆ, ನೀರಿಲ್ಲದ ನದಿಯಂತೆ,
ಪುಷ್ಪಗಳಿಲ್ಲದ ಲತೆಯಂತೆ ಮತ್ತು ಆಭರಣಗಳಿಲ್ಲದ ಸ್ತ್ರೀಯಂತೆ, ಪ್ರಾಚೀನ ಕಾಲದಲ್ಲಿ
ಗಮಕಗಳಿಗೆ ಬದಲಾಗಿ ಸ್ವರಗಳ ವೈವಿಧ್ಯಪೂರ್ಣವಾದ
ಅಲಂಕಾರಗಳನ್ನು
ಬಳಸುತ್ತಿದ್ದರು. ಈಚೆಗೆ ಗಮಕವು ಪ್ರತ್ಯೇಕವಾಗಿ ರಾಗದ ಮಾಧುರ್ಯವನ್ನು
ಹೆಚ್ಚಿಸುವ ಸೂಕ್ಷ್ಮಧ್ವನಿ ವಿಶೇಷಗಳಾಗಿ ಸಂಗೀತದ ಬೆನ್ನೆಲಬಾಗಿವೆ.
ಮೇಳದಲ್ಲಿ ಜನ್ಯವಾದ ಒಂದೇ ಸಮನಾದ ಆರೋಹಣಾವರೋಹಣವಿರುವ ಎರಡು
ರಾಗಗಳು ಗಮಕಗಳ ವೈವಿಧ್ಯತೆಯ ಪರಿಣಾಮವಾಗಿ ಪ್ರತ್ಯೇಕ ಸ್ವರೂಪದಿಂದ
ಪ್ರಕಾಶಿಸುತ್ತವೆ. ಒಂದೇ ತೆರನಾದ ಗಮಕಗಳು ಬೇರೆ ಬೇರೆ ರಾಗಗಳಲ್ಲಿ ವಿವಿಧ
ತೀವ್ರತೆಯಿಂದ, ಅಂತರಗಳಿಂದ ಮತ್ತು ವಿವಿಧವಾದ ಆವರಣಗಳಿಂದ ಕಂಡು
ಬರಬಹುದು.
 
ಒಂದೇ
 
೨೬೫
 
ಸ್ವರಸ್ಯ ಕಂಪೋಗಮಕ ಶೋತ್ಸ ಚಿತ್ತ ಸುಖಾವಹಃ ।
ಸ್ವರಗಳ ಕಂಪನಕ್ಕೆ ಗಮಕವೆಂದು ಹೆಸರು. ಅಷ್ಟರಿಂದಲೇ ಗಮಕವಾಗದು. ಕೇಳು
ವವರ ಮನಸ್ಸಿಗೆ ಹಿತವಾಗುವಂತೆ ಸುಖವಾಗುವಂತೆ ಅವುಗಳನ್ನು ಕಂಪಿಸುವುದೇ
ಗಮಕ, ಅವನ್ನು ಕಂಪಿಸುವಾಗ ಕೆಳಗಿನ ಮತ್ತು ಮೇಲಿನ ಸ್ವರಗಳ ಛಾಯೆಯು
ಬರುವಂತಾಗಬೇಕು. ಬರಿಯ ಕಂಪನದಿಂದಲೇ ಸಂಗೀತವು ಪರಿಣಾಮಕರವಾದ
ಮಾಧುರ್ಯವನ್ನು ಪಡೆಯುವುದಿಲ್ಲ. ಆದ್ದರಿಂದ ಯಾವ ಸ್ವರವೇ ಆಗಲಿ ರಂಜಕ
ವಾಗಬೇಕಾದರೆ ಸೂಕ್ತವಾದ ಗಮಕಗಳ ಪ್ರಯೋಗ ಅತ್ಯಗತ್ಯ. ಸ್ವರಗಳು ತಮ್ಮ
ಸಹಜ ಪ್ರಕೃತಿಯಲ್ಲದ ರೀತಿಯಲ್ಲಿ ಕೆಲವು ಶ್ರುತಿ ವಿಶೇಷವನ್ನು ಹೊಂದಿದ್ದರೆ ಆ ಶ್ರುತಿ
ವಿಶೇಷವು ಗಮಕವಾಗುತ್ತದೆ ಎಂದು ಪಾರ್ಶ್ವದೇವನು - ಸಂಗೀತ ಸಮಯಸಾರವೆಂಬ
ಗ್ರಂಥದಲ್ಲಿ ಹೇಳಿದ್ದಾನೆ. ಅಂದರೆ ಒಂದು ಸಹಜ ರೀತಿಯನ್ನು ರಂಜಕವಾಗುವಂತೆ
ಬದಲಾಯಿಸಿದರೆ ಅದು ಗಮಕವಾಗುತ್ತದೆ.
 
ರಾಗಗಳ ರಸ, ಭಾವ, ಗುಣಾಲಂಕಾರ ಸದ್ಭಾವಗಳು ಗಮಕ ಪ್ರಯೋಗದಿಂದ
ಉಂಟಾಗುತ್ತವೆ. ಕರ್ಣಾಟಕ ಸಂಗೀತ ಪದ್ಧತಿಯಲ್ಲಿ ಒಂದೇ ಮೂರ್ಛನೆಯಲ್ಲಿ
ಅನೇಕ ರೀತಿಯ ಗಮಕಗಳು ಪಾತ್ರವಹಿಸಿ ವಿಚಿತ್ರರಸ ರೂಪಗಳನ್ನು ತಾಳುತ್ತವೆ.
ಗಮಕವು ಗಾನಕಲೆಯ ವ್ಯಂಜನ ಶಕ್ತಿ, ಭಾವದ ಅವಯವ ರಸದ ಸೂತ್ರ.
ಯಾವುದಾದರೊಂದು ಸ್ವರೋಚ್ಚಾರಣೆ ಮಾಡುತ್ತಾ ಆಯಾ ರಾಗಗತವಾದ ಮೇಲಿನ
ಸ್ವರವನ್ನೋ ಅಥವಾ ಕೆಳಗಿನ ಸ್ವರವನ್ನೂ ಅವಿಚ್ಛಿನ್ನನಾದದ ಮೂಲಕ ಆಡುತ್ತಾ
ಇದ್ದು ಸ್ವಸ್ಥಾನಕ್ಕೆ ಬರುವುದು ಗಮಕ ಕ್ರಿಯೆಯಿಂದ ತಿಳಿಯಬೇಕು.
ಕ್ರಿಯೆಯ
ರೀತಿಗಳು ಅನೇಕ ವಿಧವಾಗಿರುತ್ತವೆ. ವಿವಿಧ ವಾದ್ಯಗಳು ಅದರದರ ವಿಶಿಷ್ಟ ಪೂರಿತ
ವಾದ ಅನೇಕ ಗಮಕಗಳನ್ನು ಹೊಂದಿರುತ್ತವೆ. ವಾದ್ಯಗಳಲ್ಲಿ ಗಮಕಗಳನ್ನು