This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ರಿಂದ ವಿಶೇಷ ಪ್ರಚಾರ ಪಡೆದು ಜನಪ್ರಿಯವಾಯಿತೆಂದು ವಿದ್ವಾಂಸರ ಅಭಿಪ್ರಾಯ.

ಇವರು ಖಯಾಲ್ ಗಾಯನ ಶೈಲಿಗೆ ಬೇಕಾದ ನೂರಾರು ಚೀಸ್‌ಗಳನ್ನು ರಚಿಸಿ

ತಮ್ಮ ಶಿಷ್ಯರ ಮೂಲಕ ಈ ಶೈಲಿಯನ್ನು ಪ್ರಚಾರ ಮಾಡಿದರು.
 

ಖಯಾಲ್ ಗಾಯನದಲ್ಲಿ ಬಡಾಖ್ಯಾಲ್ ಮತ್ತು ಛೋಟಾಖ್ಯಾಲ್ ಎಂಬ

ಎರಡು ಭಾಗಗಳಿವೆ. ಬಡಾಖ್ಯಾಲ್‌ನ್ನು ವಿಲಂಬಿತ ಲಯದಲ್ಲಿ ಏಕತಾಳ್, ಧೀಮಾ

ತೀನ್‌ತಾಳ್, ಝಮರಾ, ಅಡಾಚಾತಾಳ್, ಸವಾರಿ, ತಿಲವಾಡ್, ರಪ್ತಾಕ್

ಮುಂತಾದ ತಾಳಗಳಲ್ಲಿ ಹಾಡುತ್ತಾರೆ. ಛೋಟಾಖಾಲ್‌ನ್ನು ದ್ರುತ್‌ಲಯದಲ್ಲಿ

ಜಲ್ಲೆ ತೀನ್‌ತಾಳ್, ಏಕತಾಳ್, ರಪ್ತಾಳಗಳಲ್ಲಿ ಹಾಡುತ್ತಾರೆ.
 

ವಿಲಂಬಿತ್
 
ಖ್ಯಾಲ್‌ಗೆ ವ್ಯತಿರಿಕ್ತವಾಗಿ ದ್ರು ಖ್ಯಾಲ್ ಪ್ರಕೃತಿಯಿಂದ ಚಪಲವಾಗಿದ್ದ ಜಲ್ಲ ತಾನ

ವಿತಾನಗಳ ಮಿಂಚಿನ ಮಾಲೆಗಳ ಮೂಲಕ ಖ್ಯಾಲ್ ಗಾಯನ ಶೈಲಿಯ ಪರಾಕಾಷ್ಠ

ದೆಸೆಯನ್ನು ಸೂಚಿಸುತ್ತದೆ. ಆಧುನಿಕ ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ

ಖ್ಯಾಲ್‌ಗಾಯನ ಶೈಲಿಯು ಬಹು ಮಹತ್ವದ ಸ್ಥಾನವನ್ನು ಗಳಿಸಿದೆ.
 

 
ಖಿಲಾವಳಿ
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 
೨೫೦
 

ಜನ್ಯರಾಗ,
 


 
ಸ ರಿ ಗ ಮ ಪ ಸ
 

ಸನಿ ಪ ಮ ಗ ರಿ ಸ
 

 
ಖೇಚರಾರಾಂಗಿ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ.
 

ಸರಿ ಸ ಗ ಮ ದ ನಿ ಸ

ಸ ದ ನಿ ಪ ಮ ಗ ರಿ ಸ
 

 
ಖಂಬಾವತಿ-
ಇದು ಹಿಂದೂಸಾ ನಿ ಸಂಗೀತದ ಖಮಾಚ್ ಥಾಟ್‌ನ ಒಂದು

ಜನ್ಯರಾಗ, ಅಹೋಬಲನ ಸಂಗೀತ ಪಾರಿಜಾತವೆಂಬ ಗ್ರಂಥದಲ್ಲಿ ಉಕ್ತವಾಗಿದೆ.

 
ಖಂಬಾತಿ-
ಇದು ಒಂದು ರಿಷಭ-ವರ್ಜ ಷಾಡವರಾಗ,
 

 
ಖಂಡ-
ಖಂಡವೆಂದರೆ ಒಂದು ಭಾಗವೆಂದರ್ಥ ರಾಗಾಂಗರಾಗ ಲಕ್ಷಣಗೀತೆ

ಯಲ್ಲಿ ಸೂತ್ರಖಂಡ, ಉಪಾಂಗಖಂಡ, ಭಾಷಾಂಗಖಂಡ ಎಂಬ ಭಾಗಗಳಿವೆ.

 
ಖಂಡಛಾಪು-
ಇದು ಛಾಪುತಾಳದ ಒಂದು ವಿಧ

ಇದರ ಲೆಕ್ಕದ

ಸ್ವರೂಪವು ೨+ ೩ ಮತ್ತು ಇದರ ಒಂದಾವರ್ತಕ್ಕೆ ಐದು ಅಕ್ಷರ ಕಾಲ.
 

 
ಖಂ
ತಿ -
ಇದು ತಾಳದ ಒಂದು ಬಗೆಯ ನಡೆ. ಇದರಲ್ಲಿ ಒಂದೊಂದು

ಅಕ್ಷರಕಾಲವು ಕಾಲದ ಐದು ವಿಭಾಗಗಳನ್ನು ಹೊಂದಿರುತ್ತದೆ. ಆದಿತಾಳದ ಖಂಡ

ಗತಿ ಎಂದರೆ ೮ x ೫೬ಳು ಕಾಲ ವಿಭಾಗವನ್ನು ಹೊಂದಿರುತ್ತದೆ. ಅದೇ ತಾಳವ

ತುರಶ್ರಗತಿ ಎಂದರೆ ೮• ೪೩೨ ಕಾಲ ವಿಭಾಗವನ್ನು ಹೊಂದಿರುತ್ತದೆ.