This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಖದ್ಯೋತಪ್ರಿಯ-ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ
 
ಸ ರಿ ಮ ದ ನಿ ಸ
ಸ ನಿ ಮ ದ ರಿ ಸ
 
ಖರಜ-ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ಇದು ಷಡ್ಡದ ಹೆಸರು,
ಖರಂಜನಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 
ಜನ್ಯರಾಗ,
 
ಸ ರಿ ಗ ಮ ಪ ಸ ನಿ ಸ
 
ಸ ನಿ ದ ಪ ಮ ಗ ಸ ದ ನಿ ದ ನಿ ಸ
 
ಖರಹರಪ್ರಿಯ-ಈ ರಾಗವು ೨೨ನೆ ಮೇಳಕರ್ತರಾಗ, ಖರ ಎಂಬ ಎರಡು
ಕಟಪಯಾದಿ ಸಂಖ್ಯೆಗೆ ಅನುಗುಣವಾಗಿ ಸೇರಿಸಿ ೨೨ನೇ ಸಂಖ್ಯೆ
 
ಅಕ್ಷರಗಳನ್ನು
`ಬರುವಂತೆ ಕಲ್ಪಿಸಲಾಗಿದೆ.
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಸಾಧಾರಣ ಗಾಂಧಾರ,
 
ಷಷ್ಟ, ಪಂಚಮಗಳಲ್ಲದೆ ಚತುಶ್ರುತಿ ರಿಷಭ ಮತ್ತು ಚತುಶ್ರುತಿ ಧೈವತ,
ಶುದ್ಧ ಮಧ್ಯಮ, ಕೈಶಿಕಿನಿಷಾದಗಳು ಈ ರಾಗದ
ಸ್ವರಸ್ಥಾನಗಳು,
ಪೂರ್ವಾಂಗದ ನಾಲ್ಕು ಸ್ವರಗಳೂ, ಉತ್ತರಾಂಗದ ನಾಲ್ಕು
ಸ್ವರಗಳೂ ಪರಸ್ಪರ ವಾದಿಸಂವಾದಿಗಳು. ಸರ್ವಸ್ವರ ಗಮಕ ವರಿಕರಕ್ತಿರಾಗ,
ರಿ, ಗ, ಧ, ನಿ ರಾಗ ಛಾಯೆ ಮತ್ತು ನ್ಯಾಸ ಸ್ವರಗಳು. ರಿ ಮತ್ತು ಪ ಅಂಶಸ್ವರಗಳು.
ನೀದಪಮಗಾರಿ, ನೀದ ಪದ ನಿಸ ನೀದ ಪಾಮಗಾರಿ ಎಂಬುವ
ಪ್ರಯೋಗಗಳು, ಸಾರ್ವಕಾಲಿಕ ರಾಗ, ಸ, ರಿ, ಪ, ನಿ ಎಂಬ ಸ್ವರಗಳಿಂದ ಈ
ರಾಗದ ರಚನೆಗಳು ಆರಂಭವಾಗುತ್ತವೆ. ಈ ರಾಗವು ತ್ಯಾಗರಾಜರಿಂದ ಪ್ರಾಮುಖ್ಯತೆಗೆ
ಬಂದಿತು. ಇದು ಪುರಾತನ ಸಂಗೀತದ ಷಡ್ಡ ಗ್ರಾಮವನ್ನು ಹೋಲುತ್ತದೆ.
 
ರಂಜಕ
 
ರಿ, ಗ, ಮ, ಪ, ದ, ನಿ ಗಳನ್ನು ಶ್ರುತಿಭೇದಮಾಡಿ ಪ್ರತ್ಯೇಕ ಆಧಾರ ಷಡ್ಡ
ಮಾಡಿದರೆ ತೋಡಿ, ಕಲ್ಯಾಣಿ, ಹರಿಕಾಂಭೋಜಿ, ನಠಭೈರವೀ, ಶುದ್ಧ ತೋಡಿ ಮತ್ತು
ಶಂಕರಾಭರಣ ರಾಗಗಳು ಕ್ರಮವಾಗಿ ಬರುತ್ತವೆ. ಇದು ಅನ್ಯರಾಗ ಮೂರ್ಛನ
ಕಾರಕರಾಗ. ಈ ರಾಗದ ಕೆಲವು ಪ್ರಸಿದ್ಧ ರಚನೆಗಳು
ಭಾರತಿದೇವಿಯ
 
ಚಕ್ಕನಿರಾಜ
ರಾಮನೀ ಸಮಾನ
ಪಕ್ಕಲನಿಲಬಡಿ
ಕೋರಿಸೇವಿಂಪರಾರೇ
 
-
 
ಆದಿ
 
ರೂಪಕ
 
ತ್ರಿಪುಟ
 
ఆది
 
-
 
ಪುರಂದರದಾಸರು
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ