This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನದಗಳಿಗೆ
 
ಶೋಕದಲ್ಲಿ ಹಲವು ವಿಧಗಳಿವೆ ತೋರಿಕೆಯ ಶೋಕ, ಸಾಧಾರಣ ಶೋಕ, ಹೃದಯ

ವಿದ್ರಾವಕವಾದ ಶೋಕ ಇತ್ಯಾದಿ. ನಾಯಕನ ದೀರ್ಘ ಕಾಲದ ಅಗಲಿಕೆಯಿಂದ

ಬೇಸರ ಹೊಂದಿದ ನಾಯಕಿ ತನ್ನ ಬೇಸರವನ್ನು ಚಿತ್ರಿಸುವ ಪದಗಳು, ಅಸೂಯೆ,

ನಿಸ್ಸಹಾಯಕತೆ, ನಿರಾಶೆ ಮುಂತಾದುವುಗಳ ನಿರೂಪಣೆಯಿರುವ

ಬಳಸಿರುವ ರಾಗಗಳು ಆಯಾ ಸನ್ನಿವೇಶದ ಉತ್ತಮವ್ಯಾಖ್ಯಾನಗಳಂತಿವೆ. ಶೋಕ

ತಪ್ತಳಾದ ನಾಯಕಿಯು ತನ್ನ ದುಃಖವನ್ನು ಸಖಿಯೊಂದಿಗೆ ತೋಡಿಕೊಳ್ಳುವುದು,

ನಿರಾಶೆಯಿಂದ ನಾಯಕಿಯು ನಾಯಕನ ಪ್ರೇಮದ ಅಭಾವದ ಬಗ್ಗೆ ಚಚ್ಚು ಮಾತಿನಿಂದ

ದೂಷಿಸುವುದು, ದುಃಖಾರ್ತಳಾದ ನಾಯಕಿಯು ತಾನು ಹಿಂದೆ ನಾಯಕನೊಂದಿಗೆ

ಕಳೆದ ಸಂತೋಷದ ಸನ್ನಿವೇಶಗಳನ್ನು ಸ್ಮರಿಸಿಕೊಂಡು ಸಮಾಧಾನ ಪಟ್ಟು

ಕೊಳ್ಳುವುದು, ಬಹುಕಾಲದ ನಂತರ ನಾಯಕನನ್ನು ಸಂಧಿಸುವ ಸಂತೋಷ

ಇತ್ಯಾದಿಗಳನ್ನು ನಿರೂಪಿಸುವ ಪದಗಳು ರಾಗ ಮತ್ತು ರಸಗಳ ಅಧ್ಯಯನಕ್ಕೆ

ಆಧಾರವಾದ ಲಕ್ಷಗಳಾಗಿವೆ. ಇವು ಸಂಗೀತ ಚಿತ್ರಗಳು. ಇವನ್ನು ಕೇಳುವವರಿಗೆ

ನಾಯಕಿ, ನಾಯಕ ಅಥವಾ ಸಖಿಯೋ ನಿಜವಾಗಿ ನಮ್ಮ ಮುಂದೆ ನಿಂತು
 
೨೪೬
 
ಹಾಡುತ್ತಿರುವಂತೆ ಅನುಭವವಾಗುತ್ತದೆ ಕ್ಷೇತ್ರಯ್ಯನವರು ಕಾಂಭೋಜಿ,

ಆನಂದಭೈರವಿ, ದೇವಗಾಂಧಾರಿ, ಹುಸೇನಿ, ನಾದನಾಮಕ್ರಿಯ, ಭೈರವಿ ಮುಂತಾದ

ರಕ್ತಿರಾಗಗಳನ್ನೇ ಹೆಚ್ಚಾಗಿ ಬಳಸಿದ್ದಾರೆ. ರಾಗರಸವನ್ನು ಮಾತ್ರ ಸೃಷ್ಟಿಸುವುದು

ಅವರ ಗುರಿಯಾಗಿರಲಿಲ್ಲ ಒಂದೇ ರಸವಿರುವ ಪುನ್ನಾಗವರಾಳಿ ಮುಂತಾದ

ರಾಗಗಳನ್ನು ಮತ್ತು ಹಲವು ರಸಗಳಿರುವ ಕಾಂಭೋಜಿರಾಗ ಮುಂತಾದುವನ್ನು

ಬಳಸಿರುವುದು ಗಮನಾರ್ಹವಾದ ಅಂಶ. ಇವರ ಪದಗಳು ಹೆಚ್ಚಾಗಿ ತ್ರಿಪುಟ

ತಾಳದಲ್ಲಿವೆ. ಈ ತಾಳದ ೩+೪ ಲೆಕ್ಕವು ನಾಟ್ಯಕ್ಕೆ ಬಹುಸೂಕ್ತವಾದುದು.

ಪದಗಳ ವಿಳಂಬಕಾಲವು ಗಾಯಕನಿಗೆ ತನ್ನ ಬುದ್ಧಿಶಕ್ತಿಯನ್ನು ತೋರಿಸಲು

ಬಹುವಾಗಿ ಸ್ವಾತಂತ್ರ ನೀಡಿದೆ. ಹಾಗೆಯೇ ನಾಟ್ಯ ಕಲಾವಿದನು ಇವುಗಳಲ್ಲಿ

ಅಡಕವಾಗಿರುವ ಭಾವಗಳನ್ನು ಸ್ವಾಭಾವಿಕವಾಗಿ, ಸರಿಯಾಗಿ, ಕಲಾತ್ಮಕವಾಗಿ

ನಿರೂಪಿಸಲು ಅವಕಾಶವಿದೆ.
 

 
ಕ್ಷೇತ್ರರಾಜ-
ಇವನು ಪುರಾತನ ಕಾಲದ ಒಬ್ಬ ಸಂಗೀತ ಶಾಸ್ತ್ರಜ್ಞ.

 
ಕ್ಷೇಪಿಣಿ-
ಈ ರಾಗವು ೧೨ನೆ ಮೇಳಕರ್ತ ರೂಪವತಿಯ ಒಂದು ಜನ್ಯರಾಗ,

ಸ ಗ ಮ ಪ ದ ಸ
 

ಸ ದ ಪ ಮ ಗ ಸ
 

 
ಕ್ಷೇಮಕರಿ-
ಈ ರಾಗವು ೫೮ನೆ ಮೇಳಕರ್ತ ಹೇಮವತಿಯ ಒಂದು
 

ಜನ್ಯರಾಗ,
ಅ :
 
ಜನ್ಯರಾಗ,
 
ಸ ರಿ ಮ ದ ನಿ ಸ
ಆ.
 
ಸ ರಿ ಮ ದ ನಿ ಸ
 
ಸ ನಿ ದ ಮ ರಿ ಸ
 
ಸ ನಿ ದ ಮ ರಿ ಸ