This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಈ ಉತ್ತರವೇ ಅವರು ಪೂರ್ತಿಗೊಳಿಸದೆ ಬಿಟ್ಟಿದ್ದ ಪದದ ಚರಣವಾಯಿತು. ಇದು
ಆ ಪದದ ಪೂರ್ವಾರ್ಧದ ಸಾಹಿತ್ಯಕ್ಕೆ ಛಂದೋಬದ್ಧವಾಗಿ ಹೊಂದಿಕೊಳ್ಳುವುದಲ್ಲದೆ
ಹಿಂದೆ ವ್ಯಕ್ತಗೊಳಿಸಿರುವ ಭಾವವನ್ನು ಪೂರ್ಣಗೊಳಿಸುತ್ತದೆ. ಆಸ್ಥಾನ ವಿದ್ವಾಂಸರು
ಇವರ ಪ್ರತಿಭೆಯನ್ನು ಮೆಚ್ಚಿ ದೊರೆಗೆ ತಿಳಿಸಿದರು. ಮೂರನೆ ಚರಣದ ಮೊದಲ
 
ಭಾಗವು ಈ ರೀತಿಯಿದೆ.
 
ಭಾಮರೋ ! ಶಕುನ ಮುಲಡಿಗಿತಿ
ಮೂವ್ವಗೋಪಾಲುಡು ವಚ್ಚು ನನ
 
ಕಾಮಿಂಚಿ ನಾಥುಲಗಲಯು ಚೇಲುಲಜೂಚಿ ಕರಗಿ ಚಿಂತನನೊಂದಿತಿ.
 
ಕ್ಷೇತ್ರಯ್ಯನವರ ಪದಗಳ ಹಸ್ತಪ್ರತಿಗಳಲ್ಲಿ ಪ್ರತಿಯೊಂದು ಪದಕ್ಕೆ ಸಂಬಂಧಿಸಿ
ದಂತೆ ಅದನ್ನು ಯಾವ ಸನ್ನಿವೇಶದಲ್ಲಿ ಹಾಡಬೇಕು, ಅದರಲ್ಲಿ ಬರುವ ನಾಯಕ
ನಾಯಕಿ ಎಂತಹವರು, ಯಾರನ್ನು ಸಂಬೋಧಿಸಿ ಹಾಡಲಾಗಿದೆ ಇತ್ಯಾದಿ
ವಿಷಯಗಳನ್ನು ಕುರಿತು ಟಿಪ್ಪಣಿ ಕೊಡಲಾಗಿದೆ. ಕೆಲವು ಪದಗಳಲ್ಲಿ ಗೋಪಾಲ
(ವದ್ದಂತೆನೆ-ಪಂತುವರಾಳಿ-ಆನಂದ ಭೈರವಿ, ಮಂಚಿದಿನ
 
ఎంబ ಅಂಕಿತವಿದೆ.
 
ಮುನೇಡೆ-ಆನಂದಭೈರವಿ).
 
ಕ್ಷೇತ್ರಜ್ಞರ ಪದಗಳು ಶೃಂಗಾರಪದಗಳು. ಇವು ಶೃಂಗಾರರಸ ಪ್ರಧಾನ
ವಾಗಿದ್ದರೂ ಪ್ರೇಮದ ಶುದ್ಧ ಸ್ವರೂಪವಾದ ಭಕ್ತಿಯಿಂದ ಕೂಡಿದ್ದು ಸಂಗೀತ ಶಾಸ್ತ್ರದ
ನಿಯಮಗಳಿಗೆ ಅನುಸಾರವಾಗಿ ರಚಿಸಲ್ಪಟ್ಟಿವೆ. ಇವುಗಳಲ್ಲಿ ಸುಂದರವಾದ ಪದಗರ್ಭ
ಗಳಿವೆ. ಜೀವಾತ್ಮನು ಪರಮಾತ್ಮನನ್ನು ಪಡೆಯಲು ಹಂಬಲಿಸುತ್ತಿರುವುದನ್ನು
ಚಿತ್ರಿಸುವುದು ಈ ಪದಗಳ ಮುಖ್ಯ ಗುರಿ.
ಪ್ರತಿಯೊಂದರಲ್ಲೂ ಮೂರು ಚರಣಗಳಿವೆ.
ಕ್ಷೇತ್ರಯ್ಯನವರ ಸ್ಥಾನವು ಹಿರಿದಾದುದು. ಸಂಗೀತದ ತ್ರಿರತ್ನರಾದ ತ್ಯಾಗರಾಜರು,
ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿ ಮತ್ತು ಇತರರು ಈ ಪದಗಳನ್ನು ಬಹುವಾಗಿ
ಮೆಚ್ಚಿಕೊಂಡಿದ್ದರು. ಈ ಪದಗಳನ್ನು ಭರತನಾಟ್ಯ ಪ್ರದರ್ಶನಗಳಲ್ಲಿ ಮಾತ್ರವಲ್ಲದೆ
ಸಂಗೀತ ಕಚೇರಿಗಳಲ್ಲಿ ಹಾಡುತ್ತಿರುವುದು ಅವುಗಳ ಶ್ರೇಷ್ಠತೆಯ ನಿದರ್ಶನ.
ಆಕರ್ಷಣೀಯವಾದ ನಾಯಕನಾಯಕೀ ಭಾವವಿರುವ ಕೃತಿಗಳನ್ನು ಅನೇಕ
ವಾಗ್ಗೇಯಕಾರರು ರಚಿಸಿದ್ದಾರೆ. ಆದರೆ ಇವರೆಲ್ಲರಿಗಿಂತ ಕ್ಷೇತ್ರಯ್ಯನವರ ಸ್ಥಾನ
 
ಹಿರಿದಾದುದು.
 
ಪಲ್ಲವಿ ಮತ್ತು ಅನುಪಲ್ಲವಿಗಳಲ್ಲದೆ
 
ಭಾರತೀಯ ವಾಗ್ಗೇಯಕಾರರಲ್ಲಿ
 
ಧಾತು ಮತ್ತು ಮಾತುಗಳನ್ನು ಅತ್ಯುತ್ತಮವಾಗಿ ಮೇಲೈಸಿ ವಿವಿಧ ರಸಗಳನ್ನು
ನಿರೂಪಿಸುವುದರಲ್ಲಿ. ಪ್ರತಿಯೊಂದು ಚಿಕ್ಕ ಸನ್ನಿವೇಶವನ್ನು ಬಣ್ಣ ಬಣ್ಣವಾಗಿ
ಚಿತ್ರಿಸುವುದರಲ್ಲಿ ರಾಗಗಳ ರಸವನ್ನು ಎತ್ತಿ ತೋರಿಸುವುದರಲ್ಲಿ, ಯಾವ ಭಾವನೆಗೆ
ಯಾವ ರಾಗವು ಸಮರ್ಪಕವಾದುದು ಎಂಬುದನ್ನು ಆರಿಸಿರುವುದರಲ್ಲಿ, ಒಂದು
ಭಾವನೆಯ ಹಲವು ಮುಖಗಳನ್ನು ತೋರಿಸುವುದರಲ್ಲಿ ಅವರು ಅದ್ವಿತೀಯರು.