2023-06-25 23:29:49 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಹೆಸರು
೧೦೦೦
ಕ್ಷೇತ್ರಜ್ಞರ ನಿಜವಾದ ಹೆಸರು ವರದಯ್ಯ. ಇವರು ಅನೇಕ ಕ್ಷೇತ್ರಗಳನ್ನು
ಸಂದರ್ಶಿಸಿ ಕಾಲಯಾಪನೆ ಮಾಡುತ್ತಿದ್ದುದರಿಂದ ಕ್ಷೇತ್ರಯ್ಯ ಎಂಬ
ಬಂದಿತೆಂದು ಪ್ರತೀತಿ. ಇವರು ಹಲವು ಸಂಸ್ಥಾನಗಳಿಗೆ ಹೋಗಿ ತಮ್ಮ ರಚನೆಗಳನ್ನು
ಹಾಡುತ್ತಿದ್ದರು. ಮಧುರೆ ಮತ್ತು ತಂಜಾವೂರಿನ ಆಸ್ಥಾನ ವಿದ್ವಾಂಸರಾಗಿದ್ದರು.
ವೇಡುಕಾತೋ ನಡುಚುಕೊನ್ನ ವಿಟರಾಯುಡೇ ಎಂದು ಆದಿತಾಳದಲ್ಲಿರುವ ದೇವ
ಗಾಂಧಾರಿ ರಾಗದ ಪದದಿಂದ ಇವರು ಮಧುರೆಯ ತಿರುಮಲನಾಯಕನ ಆಸ್ಥಾನದಲ್ಲಿ
ಪದಗಳನ್ನೂ, ತಂಚಾವೂರು ಆಸ್ಥಾನದಲ್ಲಿ ೨೦೦೦
ಪದಗಳನ್ನೂ
ಗೋಂಡದ ದೊರೆಯ ಸಮ್ಮುಖದಲ್ಲಿ ೧೧೦೦ ಪದಗಳನ್ನೂ ಹಾಡಿದರೆಂದು
ತಿಳಿದುಬರುತ್ತದೆ. ಕಂಚಿವರದರಾಜಸ್ವಾಮಿಯನ್ನು ಕುರಿತು ಮುಂದಿಟವಲೆನಾಷ್ಟೆ,
ತಿರುವಳ್ಳೂರಿನ ವೀರರಾಘವಸ್ವಾಮಿಯನ್ನು ಕುರಿತು ಸಾಮಿಕಿ ಸರಿ ಎವ್ವರೇ,
ಚಿದಂಬರದ ಗೋವಿಂದರಾಜಸ್ವಾಮಿಯನ್ನು ಸ್ತುತಿಸಿ ಎಂದು ಬೂಚಿ ತಿರುಗೆನೆ,
ಶ್ರೀರಂಗದ ರಂಗನಾಥಸ್ವಾಮಿಯನ್ನು ಕುರಿತು ಪಚ್ಚಿಯೋದಲಿ ದೇವರಾ, ಆದಿವರಾಹ
ಸ್ವಾಮಿಯನ್ನು ಕುರಿತು ಅಂದಗಾದಾ, ಚೆವ್ವಂಡಿ ಲಿಂಗೇಶ್ವರನನ್ನು ಕುರಿತು ಅಕ್ಕರೆ
ಮಗವಾರಿ, ತೂಪಾಕುಲ ವೆಂಕಟಕೃಷ್ಣ ದೇವರನ್ನು ಕುರಿತು ಏಮನೇನೆ ವಂದಿ
ಸುದ್ದುಲು ಎಂಬ ಪದಗಳನ್ನೂ, ಸಿಂಹಳದ ಕದಿಗ್ರಾಮದ ದೇವಾಲಯದ ವೆಂಕಟೇಶ್ವರ
ಮತ್ತು ಸ್ಪಂದನನ್ನು ಕುರಿತು ಪದಗಳನ್ನು ಹಾಡಿದ್ದಾರೆ.
ಇವರು ತಂಜಾವೂರಿನಲ್ಲಿದ್ದಾಗ ದೊರೆ ವಿಜಯ ರಾಘವನಾಯಕನ ಪ್ರಾರ್ಥನೆಯ
ಮೇರೆ ರಾಜಾಂಕಿತದಲ್ಲಿ ಪ್ರಸಿದ್ಧವಾಗಿರುವ ವಿಜಯರಾಘವ ಪಂಚರತ್ನ ಎಂಬ ಐದು
ಪದಗಳ ಮಾಲಿಕೆಯನ್ನು ರಚಿಸಿದರು. ಇವುಗಳಲ್ಲಿ ಸುದಿನ ಮಾಯೆನೆ ಮತ್ತು
ದೊಂತರವಿಡೆಮುತೊ ಎಂಬುವು ಬಹು ಪ್ರಸಿದ್ಧವಾಗಿವೆ. ನಾಯಕನು ಕ್ಷೇತ್ರಜ್ಞರನ್ನು
ಸನ್ಮಾನಿಸಿದ್ದನ್ನು ಸಹಿಸದ ಕೆಲವು ಆಸ್ಥಾನ ವಿದ್ವಾಂಸರು ಪದಗಳಲ್ಲಿ ಬಳಸಿರುವ
ಸಾಹಿತ್ಯವನ್ನು ಕುರಿತು ಟೀಕೆ ಮಾಡಿದರು. ಇದನ್ನು ತಿಳಿದ ಕ್ಷೇತ್ರಯ್ಯ ಕೂಡಲೇ
ತ್ರಿಪುಟತಾಳ ಮತ್ತು ಕಾಂಭೋಜಿ ರಾಗದಲ್ಲಿ ವದರಕಪೋವೇ ಎಂಬ ಪದವನ್ನು
ಕೊನೆಯ ಚರಣವನ್ನು ಬಿಟ್ಟು ರಚಿಸಿ ದೊರೆಗೆ ಕೊಟ್ಟು ಅದನ್ನು ಆಸ್ಥಾನ
ವಿದ್ವಾಂಸರಿಂದ ಸಂಪೂರ್ಣಗೊಳಿಸಬೇಕೆಂದು ಸಲಹೆಮಾಡಿ ಸೇತು
ಯಾತ್ರೆಗೆ
ತೆರಳಿದರು. ಆ ವಿದ್ವಾಂಸರು ಅದನ್ನು ಪೂರ್ತಿಗೊಳಿಸಲು ವಿಫಲರಾಗಿ, ಅಹಂಕಾರ
ವರ್ಜಿತರಾಗಿ ಕ್ಷೇತ್ರಯ್ಯನವರು ಹಿಂತಿರುಗುವುದನ್ನು ಎದುರು ನೋಡುತ್ತಿದ್ದು ಅವರು
ಬಂದನಂತರ ಒಟ್ಟಿಗೆ ಅವರನ್ನು ಭೇಟಿಮಾಡಿ ಕ್ಷಮೆ ಬೇಡಿದರು. ವಿದ್ವಾಂಸರ
ಸ್ಥಿತಿಯಿಂದ ಮರುಕಗೊಂಡು ತಕ್ಷಣವೇ ಈ ರೀತಿ ಉತ್ತರ ಹೇಳಿದರು :
« ರಾಮರಾಮ ! ಈಮೆನಿತೊನಿಕವಾನಿ
ನೋಮು ಜೂಡವನಾ ?
ಮೊದಟ ಪೋಂದಚಾಲು "
೨೪೪