This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಅನುಬಂಧವು ಪ್ರತ್ಯೇಕ ಭಾಗವಾಗಿರುವುದರಿಂದ ವಾಗ್ಗೇಯಕಾರರ ಮುದ್ರೆಯನ್ನು

ಇಲ್ಲಿ ಸೇರಿಸಲಾಗಿದೆ.
 

 
ಅನುಘಂಟ-
ಈ ರಾಗವು ೪೭ನೆಯ ಮೇಳಕರ್ತ ಸುವರ್ಣಾಂಗಿಯ ಒಂದು
 

ಜನ್ಯರಾಗ
 

ಆ :
ಸ ರಿ ಮ ಗ ರಿ ದ ನಿ ಸ

ಅ :
ಸ ನಿ ದ ಪ ಮ ಗ ರಿ ಸ
 

 
ಅನುದಾತ್ತ
 

ವೇದಪಾರಾಯಣದಲ್ಲಿ ಬಳಸಲಾಗುವ ಮೂರು ಸ್ವರಗಳಲ್ಲಿ

ಅತ್ಯಂತ ತಗ್ಗಿನಸ್ವರ, ಉದಾತ್ತ ಮತ್ತು ಸ್ವರಿತಗಳೆಂಬುವು ಮಿಕ್ಕ ಇನ್ನೆರಡು

ಸ್ವರಗಳು.
 

 
ನುಮಕಟಕ-
ಇದೊಂದು
 
ನಾಟ್ಯ ಶಾಸ್ತ್ರಗ್ರಂಧ. ತಮಿಳುಭಾಷೆ
ಯಲ್ಲಿರುವ 1

ಯಲ್ಲಿರುವ '
ಭರತ ಸೇನಾಪತೀಯಂ ' ಎಂಬ ಗ್ರಂಥದಲ್ಲಿ ಉಕ್ತವಾಗಿದೆ.
 

 
ಅನುಮಕುಂಬತಾಳ-ಇದು
 

ಇದು
ತಾಳ ಸಮುತ್ತಿರಂ ಎಂಬ ತಮಿಳು
 
ನಾಲ್ಕನೆಯ
 
ತಂತಿಯ ಹೆಸರು. ಇದನ್ನು
 

ಗ್ರಂಥದಲ್ಲಿ ಉಕ್ತವಾಗಿರುವ ಒಂದು ತಾಳ ವಿಶೇಷ.

 
ಅನುಮಂದ್ರ -
ವೀಣೆಯ
ತಂತಿಯ ನಾಲ್ಕನೆಯ ಹೆಸರು. ಇದನ್ನು
ಅನುಮಂದ್ರ ಸ್ಥಾಯಿ ಪಂಚಮಕ್ಕೆ ಶ್ರುತಿ ಮಾಡಲಾಗುವುದು.

 
ಅನುಮಂದ್ರ ಸ್ಥಾಯಿ-
ಮಂದ್ರಸ್ಥಾ ಯಿಯ ತಗ್ಗಿನ ಸ್ಥಾಯಿ.

 
ಅನ್ಯಮುಕುಂದ-
ಪುರಾತನ ಪದ್ಧತಿಯ ೧೦೮ ತಾಳಗಳಲ್ಲಿ ಒಂದು ತಾಳ

ಇದು ಹಲವು ಸಂಗೀತ ಶಾಸ್ತ್ರಗ್ರಂಥಗಳಲ್ಲಿ ಉಕ್ತವಾಗಿದೆ.

 
ಅನ್ಯರಾಗಕಾಕು-
ರಾಗಕಾಕು ಎಂದರೆ ರಾಗದಲ್ಲಿ ಅಡಗಿರುವ ಪ್ರಮುಖ

ಛಾಯೆ. ಒಂದು ರಾಗವನ್ನು ಹಾಡುವಾಗ ಇನ್ನೊಂದು ರಾಗದ ಛಾಯೆಯು

ಕಂಡುಬರುವುದೇ ಅನ್ಯರಾಗ ಕಾಕು. ಒಂದು ರಾಗದ ಆಲಾಪನೆ ಮಾಡುವಾಗ

ಇನ್ನೊಂದು ರಾಗದ ಛಾಯೆಯು ಗ್ರಹಭೇದದ ಪರಿಣಾಮದಿಂದ ಸ್ವಲ್ಪ ಕಂಡು

ಬರುತ್ತದೆ.
 
ವಿಶೇಷ.
 
ಸಲ
 

 
ಅನುಲಾಪ
ಭರತನಾಟ್ಯದಲ್ಲಿ ಒಂದೇ
ಮಾತನ್ನು ಅನೇಕ
ಸಲ
ಹೇಳುವುದು ಅನುಲಾಪ. ವಾಚಕಾಭಿನಯದ ಹನ್ನೆರಡು ವಿಧಗಳಲ್ಲಿ ಇದೊಂದು

ವಿಧ.
 
-
 

 
ಅನುಲೋಮ
ತಾಳದ ಗತಿಯನ್ನು ಒಂದೇ ಸಮನಾಗಿರುವಂತೆ ಇಟ್ಟು

ಕೊಂಡು ಮೂರು ಕಾಲಗಳಲ್ಲಿ ಹಾಡುವುದು ಅನುಲೋಮ.

ತಾಳವು ಮಾತ್ರ

ಹಾಡುವಾಗ ಒಂದನೇ ಕಾಲದಲ್ಲಿರುತ್ತದೆ. ಮೊದಲಹಂತದಲ್ಲಿ ಒಂದು ಸಲ,

ಎರಡನೆಯ ಕಾಲದಲ್ಲಿ ಎರಡು ಸಲ ಮತ್ತು ಮೂರನೆಯ ಕಾಲದಲ್ಲಿ ನಾಲ್ಕು ಸಲ

ಹಾಡಿನ ವಿಷಯವನ್ನು ಕೇಳಬಹುದು. ಪಲ್ಲವಿಗಳನ್ನು ಹಾಡುವಾಗ ಮನೋಧರ್ಮ

ಸಂಗೀತದ ಪ್ರೌಢಭಾಗವಾದ ಅನುಲೋಮವನ್ನು ಮಾಡುತ್ತಾರೆ. ಇದಕ್ಕೆ