2023-06-25 23:29:49 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಪ್ರತಿಭೆಯ ಪ್ರತೀಕವಾಗಿವೆ. ಇವರು ೪೫೦೦ ಪದಗಳನ್ನು ರಚಿಸಿ ಪುರಂದರದಾಸರ
ನಂತರ ಬಹುಸಂಖ್ಯೆಯಲ್ಲಿ ಸಂಗೀತ ರಚನೆಗಳನ್ನು ಸೃಷ್ಟಿಸಿರುವ ವಾಗ್ಗೇಯಕಾರರು.
ಭಾರತೀಯ ಸಾಹಿತ್ಯದಲ್ಲಿ ಕಂಡುಬರುವ ವಿವಿಧ ನಾಯಕ-ನಾಯಕಿಯರನ್ನು ಚಿತ್ರಿಸು
ವುದರಲ್ಲಿ, ರಾಗ ಮತ್ತು ರಸಗಳ ವಿವಿಧ ಮುಖಗಳನ್ನು ಚಿತ್ರಿಸುವುದರಲ್ಲಿ ಪದಗಳನ್ನು
ಅತ್ಯಂತ ಕುಶಲತೆಯಿಂದ ಬಳಸಿದ್ದಾರೆ. ಇವರು ಪದಗಳ ರಚನೆಯಲ್ಲಿ ಇತರ
ವಾಗ್ಗೇಯಕಾರರಿಗೆ ಮಾರ್ಗದರ್ಶಿ, ಜೀವನದ ಪ್ರತಿ ಒಂದು ಸ್ಥಿತಿ ಮತ್ತು ಸನ್ನಿವೇಶ
ವನ್ನು ನಿರೂಪಿಸುತ್ತವೆ ಕ್ಷೇತ್ರಯ್ಯನವರು ತಾಳಪಾಕ ಅಣ್ಣಮಾಚಾರ್ಯರ
ಶೃಂಗಾರ ಸಂಕೀರ್ತನಲು ಮತ್ತು ಹರಿದಾಸರ ಪದಗಳಿಂದ ಸ್ಫೂರ್ತಿ ಪಡೆದಿರಬಹುದೆಂದು
ಹೇಳಬಹುದು.
೨೪೩
ಸೂಳಾದಿ
ಇವುಗಳ
ನಾಯಕ-ನಾಯಕಿಯರ ಪ್ರಬುದ್ಧ ಶೃಂಗಾರ ಭಾವ ಮತ್ತು ರಕ್ತಿರಾಗಗಳ
ಅಪೂರ್ವ ರಸೋತ್ಪಾದನೆಯು ಇವರ ಪದಗಳಿಂದ ಮೈದೋರುತ್ತದೆ.
ಸಪ್ತತಾಳಗಳಲ್ಲಿ ಮತ್ತು ಹೆಚ್ಚು ವ್ಯಾಪ್ತಿಯಿಲ್ಲದಿರುವ ಮತ್ತು ಅಪೂರ್ವ ರಾಗಗಳಲ್ಲಿ
ಪದಗಳನ್ನು ರಚಿಸಿದ್ದಾರೆ. ಆಹಿರಿ, ಘಂಟಾರವ, ನವರೋಜು, ಮಂಗಳಕೈತಿಕಾ,
ಕರ್ಣಾಟಕ ಕಾಫಿ ಮುಂತಾದ ರಾಗಗಳಲ್ಲಿ ಪದಗಳನ್ನು ರಚಿಸಿದ್ದಾರೆ
ಸಾಹಿತ್ಯ ಮತ್ತು ಲಯವಿನ್ಯಾಸಗಳು ಭಾವರಸ ಪ್ರಧಾನವಾಗಿ ಉತ್ತಮ ಮಟ್ಟದ್ದಾಗಿವೆ.
ಅರ್ಥಪಷ್ಟಿ, ಲಲಿತಪದ ಬಂಧ ಇವರ ಸಾಹಿತ್ಯದ ಮುಖ್ಯ ಲಕ್ಷಣಗಳಾಗಿರುವುದಲ್ಲದೆ
ಇವು ಕೈಶಿಕಿ ರೀತಿಯವು ಮತ್ತು ಕವಿತಾ ಪ್ರತಿಭೆಯ ಪ್ರತೀಕಗಳು. ಹಾಡುಗಳ
ರಸಕ್ಕೆ ತಕ್ಕ ರಾಗಗಳನ್ನು ಆರಿಸಿಕೊಂಡಿದ್ದಾರೆ. ರಾಗಭಾವವು ಪ್ರತಿಪದದಲ್ಲಿ ಕೆನೆ
ಯಂತೆ ಎದ್ದು ಕಾಣುತ್ತದೆ. ಇವರ ಪದಗಳನ್ನು ಕೇಳುವವರಿಗೆ ರಾಗಗಳು
ಸ್ವಾಭಾವಿಕವಾಗಿ ಎದ್ದು ಮೆರೆಯುವುದು ಅನುಭವಕ್ಕೆ ಬರುತ್ತದೆ.
ಕ್ಷೇತ್ರಯ್ಯನವರ ಪದಗಳನ್ನು ಸರಿಯಾಗಿ ಹಾಡಲು ಒಳ್ಳೆಯ ಶಿಕ್ಷಣ ಪಡೆದಿರುವ
ಮತ್ತು ರಸಾನುಭವವಿರುವವರಿಗೆ ಮಾತ್ರ ಸಾಧ್ಯ. ಸೂಕ್ಷ್ಮವಾದ ಶ್ರುತಿಗಳು,
ಗಮಕಗಳು, ಜಾರು, ತಿರುವುಗಳನ್ನು ತಪ್ಪಿಲ್ಲದೆ ಕಲಾತ್ಮಕವಾಗಿ ಹಾಡುವುದು
ಗಾಯಕನ ವಿದ್ವತ್ತು ಮತ್ತು ಯೋಗ್ಯತೆಯ ಪರೀಕ್ಷೆಯಾಗುತ್ತದೆ. ಪದವು
ಮುಖ್ಯವಾಗಿ ನಾಟ್ಯದಲ್ಲಿ ಅಭಿನಯಕ್ಕಾಗಿ ರಚಿಸಲ್ಪಟ್ಟಿದ್ದರೂ, ಇದರಲ್ಲಿ ಅಡಕ
ವಾಗಿರುವ ಉತ್ತಮ ಸಂಗೀತಕ್ಕಾಗಿ ಕಚೇರಿಗಳಲ್ಲಿ ಹಾಡುತ್ತಾರೆ. ಹಿರಿಯ
ಗಾಯಕರೆಲ್ಲರೂ ಪಲ್ಲವಿಯ ನಂತರ ಒಂದೆರಡು ಪದಗಳನ್ನು ಹಾಡಿ ಅವುಗಳಿಂದ
ಉಂಟಾಗುವ
ಪ್ರವಾಹದಿಂದ ಶೋತೃಗಳನ್ನು ಆನಂದದಲ್ಲಿ
ಇವರ ಅನೇಕ ಪದಗಳು ಬಹಿ : ಶೃಂಗಾರ ಮತ್ತು ಅಂತರಂಗ
ಸಂಗೀತದ
ಮುಳುಗಿಸುತ್ತಿದ್ದರು
ಭಕ್ತಿಯನ್ನೂ, ಇತರ ಪದಗಳು ಗೌರವ ಶೃಂಗಾರವನ್ನೂ ಒಳಗೊಂಡಿವೆ.
ನಾಟ್ಯಕ್ಕೆ
ಇವು ಅಮೂಲ್ಯ ರಚನೆಗಳಾಗಿವೆ. ಆದ್ದರಿಂದ ಕ್ಷೇತ್ರಯ್ಯನಿಗೆ ಪದರಚನಾ ಚಕ್ರವರ್ತಿ
ಎಂಬ ಕೀರ್ತಿ ಸಂದಿದೆ.