This page has been fully proofread once and needs a second look.

೨೪೨
 
ಕ್ಷಣಿಕ
ಈ ರಾಗವು ೮ನೆ ಮೇಳಕರ್ತ
 
ಹನುಮತೋಡಿಯ ಒಂದು
ಜನ್ಯರಾಗ,
 
ಸಂಗೀತ ಪಾರಿಭಾಷಿಕ ಕೋಶ
 
ಹನುಮತೋಡಿಯ ಒಂದು
 
ಸ ಗ ಮ ಪ ದ ಸ
 
ಸ ದ ಪ ಮ ಗ ಸ
 

ಸ ಗ ಮ ಪ ದ ಸ
ಸ ದ ಪ ಮ ಗ ಸ
 
ಕ್ಷಪಾ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

ಜನ್ಯರಾಗ,
 

ಸ ರಿ ಗ ಮ ಪ ನಿ ಸ

ಸ ನಿ ಮ ಗ ರಿ ಸ
 
ಕಾಂತಿ -

 
ಕ್ಷಾಂತಿ
ನಾರದನ ಸಂಗೀತಮಕರಂದವೆಂಬ ಗ್ರಂಥದಲ್ಲಿ ಉಕ್ತವಾಗಿರುವ

ಶ್ರುತಿ ಪದ್ಧತಿಯಲ್ಲಿ ಮಧ್ಯಮದ ಮೂರನೆಯ ಶ್ರುತಿಯ ಹೆಸರು.
 

 
ಕ್ಷಿತಿ-
ಭರತನು ಹೇಳಿರುವ ದ್ವಾವಿಂಶತಿ ಶ್ರುತಿಗಳಲ್ಲಿ ಇದು ಪಂಚಮದ

ಪ್ರಥಮ ಶ್ರುತಿಯ ಹೆಸರು.
 

 
ಕ್ಷೀರಾಬ್ಧಿ ಶಾಸ್ತ್ರಿ-
ಇವರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯವರು.

ಶಿವರಾಮಯೋಗಿ ಎಂಬುವರ ಶಿಷ್ಯರು. ಸಂಗೀತ ವಿದ್ವಾಂಸರೂ ವಾಗ್ಗೇಯಕಾರರೂ

ಆಗಿದ್ದಲ್ಲದ್ದೆ ತಿರುವಾಂಕೂರಿನ ಸ್ವಾತಿತಿರುನಾಳ್ ಮಹಾರಾಜರ ಆಸ್ಥಾನ ವಿದ್ವಾಂಸ

ರಾಗಿದ್ದರು. ಇವರು ತಮ್ಮ ಗುರುವಿನ ಹೆಸರಿನಲ್ಲಿ ಶಿವರಾಮ ಎಂಬ ಅಂಕಿತದಲ್ಲಿ ಕೃತಿ

ಗಳನ್ನು ರಚಿಸಿರುವರು.
 

 
ಕ್ಷೇತ್ರ-ಯ್ಯ
ಕ್ಷೇತ್ರಯ್ಯನವರು ಆಂಧ್ರದ ಕೃಷ್ಣಾ ಜಿಲ್ಲೆಯ ಘಂಟಸಾಲದ

ಸಮಾಸದಲ್ಲಿರುವ ಮೂವ್ವ ಪುರಿ ಎಂಬ ಗ್ರಾಮದಲ್ಲಿ ಜನಿಸಿದರು. ಚಿತ್ತೂರು ಜಿಲ್ಲೆಯ

ಚಂದ್ರಗಿರಿ ತಾಲ್ಲೂಕಿನ ಮುವ್ವ ಎಂಬ ಗ್ರಾಮದಲ್ಲಿ ಜನಿಸಿದರು ಎಂದು ಮತ್ತೊಂದು

ಅಭಿಪ್ರಾಯವಿದೆ.

ಇವರು ಆಂಧ್ರದ ತ್ರಿಲಿಂಗ ಬ್ರಾಹ್ಮಣ ಮನೆತನದವರು. ಚಿಕ್ಕಂದಿ

ನಲ್ಲಿ ಸಂಗೀತ ಮತ್ತು ಸಾಹಿತ್ಯದಲ್ಲಿ ಪಾಂಡಿತ್ಯವನ್ನು ಪಡೆದರು. ಬಾಲ್ಯದಲ್ಲಿ ಒಬ್ಬ

ಯೋಗಿಯು ಇವರಿಗೆ ಗೋಪಾಲ ಮಂತ್ರವನ್ನು ಉಪದೇಶಿಸಿ ಅನುಗ್ರಹಿಸಿದರು.

ಮೂವ್ವಪುರಿಯ ಗೋಪಾಲಸ್ವಾಮಿಯು ಇವರ ಆರಾಧ್ಯದೈವ. ತನ್ನ ಇಷ್ಟ ದೈವ

ವನ್ನು ಭಕ್ತಿಯಿಂದ ಭಜಿಸಿ ದರ್ಶನ ಪಡೆದು ಅನುಗ್ರಹೀತರಾಗಿ ಪದಗಳನ್ನು ರಚಿಸುವ

ಕಲೆಯಲ್ಲಿ ಅಸಾಧಾರಣ ಪ್ರತಿಭೆಯನ್ನು ಪಡೆದು ಮೂವಗೋಪಾಲ ಎಂಬ ಅಂಕಿತದಲ್ಲಿ

ಪದಗಳನ್ನು ರಚಿಸಿದರು. ಶ್ರೀಪತಿ ಸುತ್ತು ಬಾರಿಕೆ ಎಂಬ ಆದಿತಾಳದಲ್ಲಿರುವ ಆನಂದ

ಭೈರವಿ ರಾಗದ ಪದವು ಇವರ ಪ್ರಥಮ ರಚನೆ. ಇದರ ಪಲ್ಲವಿ, ಅನುಪಲ್ಲವಿ ಮತ್ತು

ಮೂರು ಚರಣಗಳ ಧಾತುವು ಒಂದೇ ವಿಧವಾಗಿದೆ.
 

ಪ್ರಸಿದ್ಧ ವಾಗ್ಗೇಯಕಾರರಾದ ಕ್ಷೇತ್ರಜ್ಞ ೧೭ನೆ ಶತಮಾನದಲ್ಲಿದ್ದರು. ಇವರು

ವೆಂಕಟಮಖಿಯ ಸಮಕಾಲೀನರು ಪದಗಳ ರಚನೆಯಲ್ಲಿ ಅದ್ವಿತೀಯರು. ಇವರು

ಅಪೂರ್ವರಾಗಗಳನ್ನು ಬಳಸಿರುವ ರೀತಿ, ಸಾಹಿತ್ಯ ರಚನೆಯ ಕವಿತಾ ಶಕ್ತಿ ಇವರ