2023-07-03 07:53:45 by jayusudindra
This page has been fully proofread once and needs a second look.
ಪ್ರತಿಯೊಂದು ಘಟನೆಯನ್ನು ಕುರಿತು ಕೆಲವು ಶ್ಲೋಕಗಳಲ್ಲಿ ಹೇಳಿ ಅವುಗಳನ್ನು
ಸುಂದರವಾದ ಹಾಡುಗಳಿಂದ ಕವಿ ವಿವರಿಸಿದ್ದಾನೆ. ಬ್ರಹ್ಮನ ಘಟನೆಗೆ ಸಂಬಂಧಿಸಿದ
ಬಾಲಗೋಪಾಲ ಕೃಷ್ಣ ಪಾಹಿ ಪಾಹಿ ಮತ್ತು ಬಾಲ ಗೋಪಾಲ ಮಮಉದ್ಧರ
ಕೃಷ್ಣ ಎಂಬುವು ಇದಕ್ಕೆ ನಿದರ್ಶನ, ಗೋಪೀ ವಸ್ತ್ರಾಪಹಾರದ ಘಟನೆಗೆ ಒಂದು
ನೂತನ ಸಾಹಿತ್ಯ ಸೌಂದರ್ಯ ಮತ್ತು ತಾತ್ವಿಕ ಅರ್ಥವನ್ನೂ ಕೊಡಲಾಗಿದೆ.
ರಾಸಕ್ರೀಡೆ ಮತ್ತು ರಾಧಾಕೃಷ್ಣರಿಗೆ ಸಂಬಂಧಿಸಿದಂತೆ ಅದ್ಭುತವಾದ ನಾಟ್ಯದ
ಕೊಲ್ಕಟ್ಟುಗಳಿವೆ. ಸುಂದರವಾದ ಕವಿತೆ, ಅಂತ್ಯ ಪ್ರಾಸ ಲಲಿತವಾದ ಸ್ವರತರಂಗ
ಮುಂತಾದ ಸಾಹಿತ್ಯದ ಎಲ್ಲಾ ಸೌಂದಯ್ಯಾಂಶಗಳನ್ನೂ ಮೇಲೈಸಿ ಉನ್ನತ ಭಾವ,
ಸಂಗೀತಗಳನ್ನು ಸೃಷ್ಟಿಸಿರುವುದು ಈ ಕೃತಿಯ ಒಂದು ವೈಶಿಷ್ಟ್ಯ.
ಬಳಿಕ ಹಾಡುಗಳಿವೆ
ಸಂದರ್ಭೋಚಿತವಾಗಿ ಇದರ ಹಾಡುಗಳನ್ನು ಸಂಗೀತಕ್ಕೆ ಅಳವಡಿಸಲಾಗಿದೆ.
ಹಾಡುಗಳು ಕೀರ್ತನೆ ರೂಪದಲ್ಲಿವೆ. ಮೊದಲು ಶ್ಲೋಕ, ತರುವಾಯ ವಾಕ್ಯ,
ಶ್ಲೋಕಗಳು, ಚೂರ್ಣಿಕೆಗಳು, ಸಂಗೀತಮಯವಾದ ಚಿಕ್ಕ
ಸಂವಾದಗಳು, ದರುಗಳು, ದ್ವಿಪದಿ ಮತ್ತು ಚತುಷ್ಪದಿಗಳು, ಮಧ್ಯೆ ಮಧ್ಯೆ ಜತಿಗಳಿಂದ
ಕೂಡಿದ ಹಾಡುಗಳು ಈ ಗ್ರಂಥಕ್ಕೆ ವಿಶೇಷ ಮೆರುಗನ್ನು ಕೊಟ್ಟಿವೆ ಹಾಡುಗಳಲ್ಲಿ
ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳೆಂಬ ವಿಭಾಗಗಳಿವೆ. ದ್ವಿತೀಯಾಕ್ಷರ
ವಾಸವನ್ನು ಬಳಸಿದ ಸಂಸ್ಕೃತ ಕವಿಗಳಲ್ಲಿ ನಾರಾಯಣ ತೀರ್ಥ ಒಬ್ಬ ಮೊದಲಿಗರು.
ಈ ಗೇಯನಾಟಕದಲ್ಲಿ ವಿಷ್ಣು, ಬ್ರಹ್ಮ, ಭೂಮಾದೇವಿ, ಸನಕಾದಿ ಮುನಿಗಳು,
ದೇವಕಿ, ವಸುದೇವ, ಯಶೋದಾ, ಗೋಪಿಯರು, ಕೃಷ್ಣ, ರುಕ್ಷ್ಮಿಣಿ ಮತ್ತು
ರುಕ್ಷ್ಮಿಣಿಯ ಪತ್ರವನ್ನು ಕೃಷ್ಣನಿಗೆ ತಲಪಿಸುವ ಬ್ರಾಹ್ಮಣ ಮುಖ್ಯ ಪಾತ್ರಗಳು.
ಈ ಗ್ರಂಥದಲ್ಲಿ ಮೂವತ್ತಾರು ರಾಗಗಳನ್ನು ಬಳಸಲಾಗಿದೆ. ಇವುಗಳಲ್ಲಿ ಮಂಗಳ
ಕಾಫಿ ಎಂಬುದು ಅಪರೂಪವಾದ ರಾಗ, ಆಹಿರಿ, ಮಂಜರಿ, ದ್ವಿಜಾವಂತಿ,
ಕರ್ಣಾಟಕ ಸಾರಂಗ ಮತ್ತು ಗೌರೀರಾಗಗಳಲ್ಲಿರುವ ಹಾಡುಗಳು ವಿಶೇಷವಾದುವು
ನಂದ ನಂದನ ಗೋಪಾಲ, ಕ್ಷೇಮಕುರು ಗೋಪಾಲ ಮುಂತಾದ ಕೆಲವು ಹಾಡುಗಳು
ಅತ್ಯಂತ ಜನಪ್ರಿಯವಾಗಿವೆ. ಜಯದೇವನ ಅಷ್ಟಪದಿಗಳಂತೆಯೇ ನಾರಾಯಣ
ತೀರ್ಧರ ತರಂಗವು ಪವಿತ್ರ ಸಂಗೀತಕ್ಕೆ ಸೇರಿದ ಕೃತಿ. ಇವನ್ನು ದಕ್ಷಿಣ ಭಾರತ
ದಲ್ಲೆಲ್ಲಾ ಹಾಡುವ ಪದ್ಧತಿಯಿದೆ.
ಕೃಷ್ಣಲೀಲಾ ತರಂಗಿಣಿಯಲ್ಲಿ ಕೆಲವು ಕಡೆ ಕೊರತೆಗಳಿರುವುದು ಕಂಡು
ಬರುವುದು. ಇದಕ್ಕೆ ಕಾರಣವನ್ನು ಸ್ಥಳದ ಕಥೆಯಿಂದ
ವರಹೂರಿನಲ್ಲಿ ನಾರಾಯಣ ತೀರ್ಥರಿದ್ದಾಗ ಈ ತರಂಗಗಳನ್ನು ಗರ್ಭಗುಡಿಯಲ್ಲಿ
೨೪೦