This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೫೦ ವರ್ಷಗಳಿಗೂ ಮಾರಿ ಸೇವೆ ಸಲ್ಲಿಸಿದ್ದಾರೆ. ಈಗ್ಗೆ ಸುಮಾರು ೪೫ ವರ್ಷಗಳ

ಹಿಂದೆಯೇ ಹರಿಕಧಾ ವಿಶಾರದ ಕೀರ್ತನ ಭೂಷಣ ಮುಂತಾದ ಬಿರುದನ್ನು ಪಡೆದರು.

ಮೈಸೂರಿನಲ್ಲಿ ಶ್ರೀಕೃಷ್ಣಗಾಯನ ಸಭೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿದರು.

ವೈಣಿಕ ಶಿಖಾಮಣಿ ವೀಣೆ ಶೇಷಣ್ಣನವರು ನಡೆಸುತ್ತಿದ್ದ ಕೃಷ್ಣತ್ಸವವನ್ನು ೩೫

ವರ್ಷಗಳಿಗಿಂತಲೂ ಹೆಚ್ಚು ಕಾಲ ನಡೆಸಿಕೊಂಡು ಬಂದರು. ಶಿಕ್ಷಣ ಇಲಾಖೆಯಲ್ಲಿ
 
೨೩೯
 
ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗ ವಿಶ್ರಾಂತರಾಗಿ ಬೆಂಗಳೂರಿನಲ್ಲಿದ್ದಾರೆ.

ದೀಕ್ಷಿತರ ನವಗ್ರಹ ಮತ್ತು ನವಾವರಣ ಕೃತಿಗಳು, ಲಕ್ಷಣ ಗೀತೆಗಳು, ತ್ಯಾಗರಾಜ

ಹೃದಯ ಎಂಬ ಗ್ರಂಥಗಳನ್ನು ಬರೆದು ಪ್ರಕಟಿಸಿದ್ದಾರೆ.
 

 
ಕೃಷ್ಣಯ್ಯರ್
, Bharata Natya
 
ಕೃಷ್ಣಯ್ಯರ್,
ಇ.
ಇವರು ತಮಿಳುನಾಡಿನವರು. ಇವರು ೧೮೯೭ರಲ್ಲಿ

ಜನ್ಮತಾಳಿದರು. ೧೯೨೨ರಲ್ಲಿ ವಕೀಲರಾದರು. ತಮ್ಮ ವಿರಾಮಕಾಲವನ್ನು

ಭರತನಾಟ್ಯ ಶಾಸ್ತ್ರದ ಅಧ್ಯಯನಕ್ಕಾಗಿ ವಿನಿಯೋಗಿಸಿದರು. ತಮಿಳುನಾಡುರಾಜ್ಯವ

ಸಂಗೀತ ನಾಟಕ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. Persona-

lities in the Present day music

and other dances of Tamil Nad ಎಂಬ ಗ್ರಂಥಗಳನ್ನು ಬರೆದಿದ್ದಾರೆ.

 
ಕೃಷ್ಣ ಲೀಲಾತರಂಗಿಣಿ -
ಇದು ಸ್ವಾಮಿನಾರಾಯಣ ತೀರ್ಥರು ರಚಿಸಿರುವ

ಸಂಸ್ಕೃತದ ಒಂದು ಶ್ರೇಷ್ಠ ಮತ್ತು ದೀರ್ಘವಾದ ಗೇಯನಾಟಕ. ಜಯದೇವಕವಿಯ

ಅಮರಕೃತಿಯಾದ ಗೀತಗೋವಿಂದದಲ್ಲಿ ೧೨ ಸರ್ಗಗಳಿರುವಂತೆ ಇದರಲ್ಲೂ ೧೨

ತರಂಗಗಳಿವೆ. ಇವರ ವಿಷಯವು ಕೃಷ್ಣಾವತಾರದಿಂದ ಆರಂಭವಾಗಿ ಕೃಷ್ಣ-ರುಕ್ಷ್ಮಿಣೀ

ಕಲ್ಯಾಣದೊಂದಿಗೆ ಮುಕ್ತಾಯವಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ಕೃತಿಯು

ಅದರ ಸಂಗೀತ, ಸುಂದರವಾದ ಕವಿತೆ ಮತ್ತು ಉನ್ನತ ಭಾವನೆಗಳಿಗೆ ಪ್ರಸಿದ್ಧವಾಗಿದೆ.

ಕೃಷ್ಣ ಲೀಲಾತರಂಗಿಣಿಯನ್ನು ವರಹೂರಿನಲ್ಲಿ ಕೃಷ್ಣ ಜನ್ಮಾಷ್ಟಮಿಯ ದಿನ

ವರಹರು ಪಂಜು ಭಾಗವತರೂ ಮತ್ತು ವರಹೂರು ಗೋಪಾಲ ಭಾಗವತರೂ ಹಾಡಿ

ಪ್ರದರ್ಶಿಸುತ್ತಿದ್ದರು. ಈ ಕೃತಿಯು ಒಂದು ಭಜನಗ್ರಂಥ ಮಾತ್ರವಲ್ಲದೆ ಉತ್ತಮವಾದ

ಸಂಗೀತ ಕಾವ್ಯವಾಗಿದೆ. ನೃತ್ಯದ ತೊಲ್ಕಟ್ಟುಗಳನ್ನು ಒಳಗೊಂಡಿದೆ. ದಕ್ಷಿಣ ಭಾರತದ

ಸಂಗೀತದ ತ್ರಿರತ್ನದಲ್ಲಿ ಒಬ್ಬರಾದ ತ್ಯಾಗರಾಜರು ಸದಾಶಿವ ಬ್ರಹ್ಮಂದ್ರ ಮತ್ತು

ನಾರಾಯಣ ತೀರ್ಥರ ಪ್ರಭಾವಕ್ಕೆ ಒಳಗಾಗಿದ್ದರು. ತಮ್ಮ ನಾಟ್ಯರೂಪಕವಾದ

ಪ್ರಹ್ಲಾದ ಭಕ್ತವಿಜಯದಲ್ಲಿ ನಾರಾಯಣ ತೀರ್ಥರಿಗೆ ಗೌರವ ಸಲ್ಲಿಸಿದ್ದಾರೆ.
 

ಕೃಷ್ಣ ಲೀಲಾ ತರಂಗಿಣಿಯು ಸಾಹಿತ್ಯದ ದೃಷ್ಟಿಯಿಂದ ಮಧುರವಾದ, ಬಹು

ಲಲಿತವಾದ ಶ್ರೇಷ್ಠ ಗ್ರಂಥ, ಸಂಸ್ಕೃತ ಭಾಷೆಯಲ್ಲಿ ಗೇಯನಾಟಕದ ಪರಾಕಾಷ್ಠತೆ

ಯನ್ನು ಇದರಲ್ಲಿ ಕಾಣಬಹುದು. ಕೃಷ್ಣನ ಲೀಲೆಗಳನ್ನು ಮನಮುಟ್ಟುವ ಹಾಗೆ

ರಂಜಕವಾದ ಸಂಗೀತದ ಭೂಷಣದಲ್ಲಿ ಹೃದಯಂಗಮವಾದ ಭಾಷೆಯಲ್ಲಿ ವಿವರಿಸ

ಲಾಗಿದೆ. ಭಾಗವತದಲ್ಲಿರುವ ಕೃಷ್ಣನಿಗೆ ಸಂಬಂಧಿಸಿದ ಮುಖ್ಯ ಘಟನೆಗಳನ್ನು ಆರಿಸಿ