This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಯವರಿಗೆ ಪಕ್ಕವಾದ್ಯ ನುಡಿಸಿದರು. ಇವರ ಭವಿಷ್ಯವನ್ನು ರೂಪಿಸುವುದರಲ್ಲಿ

ಅಲೆಪ್ಪಿಯ ವಕೀಲ ಪಾರ್ಥಸಾರಧಿ ಅಯ್ಯಂಗಾರರ ಪಾತ್ರ ಬಹಳ ಮುಖ್ಯವಾದುದು.

ಕೃಷ್ಣನ್ ಮದ್ರಾಸಿನ ಕರ್ನಾಟಕ ಸಂಗೀತದ ಕಾಲೇಜಿನಲ್ಲಿ ಪಿಟೀಲು

ಅಧ್ಯಾಪಕರಾಗಿದ್ದಾರೆ. ಪಾಶ್ಚಾತ್ಯ ದೇಶಗಳಿಗೆ ಹೋಗಿ ಕಚೇರಿಗಳಲ್ಲಿ ನುಡಿಸಿ

ಕೀರ್ತಿಶಾಲಿಯಾಗಿದ್ದಾರೆ. ದಕ್ಷಿಣ ಭಾರತದ ಹಿರಿಯಗಾಯಕರಿಗೆ ಹಲವಾರು

ಸಲ ಪಕ್ಕವಾದ್ಯ ನುಡಿಸುತ್ತ ಬಂದಿದ್ದಾರೆ. ತನಿಕಚೇರಿಗಳಲ್ಲಿ ನುಡಿಸುವುದರಲ್ಲಿ

ಅಗ್ರಗಣ್ಯರು. ಇವರ ತಂಗಿ ಎನ್. ರಾಜಂ ಹಿಂದೂಸ್ಥಾನಿ ಸಂಗೀತದ ವಿದುಷಿಯಾಗಿ

ವಾರಾಣಸಿಯ ಹಿಂದೂ ವಿಶ್ವವಿದ್ಯಾಲಯದಲ್ಲಿ ಹಿಂದೂಸ್ಥಾನಿ ಸಂಗೀತದ ಪಿಟೀಲು

ರೀಡರ್ ಆಗಿದ್ದಾರೆ.

ಕೃಷ್ಣನ್‌ರವರ ವಾದನದಲ್ಲಿ ಶ್ರುತಿಶುದ್ಧತೆ, ಸಂಪ್ರದಾಯ,

ಮಾಧುರ್ಯ, ಲಾಲಿತ್ಯ, ಅಚ್ಚು ಕಟ್ಟು, ಖಚಿತವಾದ ಲಯ ಎಲ್ಲವೂ ಇವೆ. ಇವರಿಗೆ

ಪದ್ಮಶ್ರೀ ಪ್ರಶಸ್ತಿಲಭಿಸಿದೆ. ಇವರು ಈಗಿನ ಒಬ್ಬ ಪ್ರಸಿದ್ಧ ಪ್ರತಿಭಾವಂತ ಪೀಟೀಲು
 
ವಿದ್ವಾಂಸರು.
 
೨೩೭
 

 
ಕೃಷ್ಣಮೂರ್ತಿ, ಎ.ಆರ್.(೧೯೧೮)-
ಕೃಷ್ಣಮೂರ್ತಿಯವರು ಕರ್ಣಾಟಕದ

ಮೈಸೂರು ಜಿಲ್ಲೆಯ ಕೊಳ್ಳೇಗಾಲದಲ್ಲಿ ಜನಿಸಿದರು. ಮೈಸೂರು ಸರ್ಕಾರದ

ವಿದ್ಯುತ್‌ಶಕ್ತಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಇವರ ತಂದೆ ಎ. ಪಿ. ರಾಮಮೂರ್ತಿ

ಯವರಿಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಭೈರವಿ ಕೆಂಪೇಗೌಡರ ಪ್ರೀತಿಯು

ಲಭಿಸಿ ಅವರಲ್ಲಿ ಸಂಗೀತ ಕಲಿತರು. ಕೃಷ್ಣಮೂರ್ತಿಯವರು ಮೊದಲು ತಮ್ಮ

ತಂದೆಯವರಲ್ಲ, ನಂತರ ಕೊಳ್ಳೆಗಾಲದ ಪಿಟೀಲು ವಿದ್ವಾನ್ ನಾರಾಯಣಸ್ವಾಮಪ್ಪ

ನವರಲ್ಲೂ ಸಂಗೀತಾಭ್ಯಾಸಮಾಡಿ, ಬಳಿಕ ಸಂಗೀತರತ್ನ ಟಿ ಚೌಡಯ್ಯನವರಲ್ಲಿ

ಪ್ರೌಢಶಿಕ್ಷಣ ಪಡೆದರು.

ಉತ್ತಮಗಾಯಕರಾಗಿ ಮದ್ರಾಸ್, ತಿರುಚಿ, ಬೆಂಗಳೂರು

ಆಕಾಶವಾಣಿ ಕೇಂದ್ರಗಳಿಂದ ಹಾಡುತ್ತಿದ್ದರು. ಕಲ್ಲಿಕೋಟೆ ಮತ್ತು ದಕ್ಷಿಣ

ಭಾರತದ ಇತರ ನಗರಗಳ ಸಭೆಗಳಲ್ಲಿ ಕಚೇರಿಗಳನ್ನು ಮಾಡಿ ವಿಖ್ಯಾತರಾದರು.

ಶಾರೀರದ ತೊಂದರೆಯುಂಟಾದುರರ ಪರಿಣಾಮವಾಗಿ ಈಗ ಸಂಗೀತ ಶಿಕ್ಷಣ ನೀಡುವ

ತುಂಬು
 
ವೃತ್ತಿಯನ್ನು ಮಾತ್ರ ಅವಲಂಬಿಸಿದ್ದಾರೆ. ಕೃಷ್ಣಮೂರ್ತಿಯವರು

ಶಾರೀರವುಳ್ಳ ಗಾಯಕರಾಗಿ ಸಂಪ್ರದಾಯಬದ್ಧವಾಗಿ ಚೆನ್ನಾಗಿ ಹಾಡುತ್ತಿದ್ದರು.

ಹಲವು ಕಲಾಶಾಲೆಗಳಲ್ಲಿ ಪ್ರಧಾನಾಚಾರ್ಯರಾಗಿ ಆ ಸಂಸ್ಥೆಗಳನ್ನು ಬೆಳೆಸಿದ್ದಾರೆ.

ಇವರ ಕೆಲವು ಪ್ರಮುಖ ಶಿಷ್ಯರು ಯಾರೆಂದರೆ ಹೆಚ್. ಆರ್. ಸೀತಾರಾಮಶಾಸ್ತ್ರಿ,

ವಿಶ್ವನಾಥ,

ರಾಜಮ್ಮ, ಸಿ. ಆರ್‌. ಗೌಡ, ರಾಜಲಕ್ಷ್ಮಿರಾಮರಾವ್,

ಕೆ. ಎಂ. ಗೋಪಾಲಕೃಷ್ಣ ಮತ್ತು ಶ್ರೀಮತಿ ಗೋಪಾಲಕೃಷ್ಣ, ಪಾಲ್ಫಾಟ್
 
ಶಂಕರನ್ ಮುಂತಾದವರು.
 

 
ಕೃಷ್ಣಮೂರ್ತಿ, ಹೆಚ್. ವಿ. (೧೯೨೮)-
ಇವರು ಕರ್ಣಾಟಕದ ಚಿಕ್ಕ
ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಹೆಚ್. ವೆಂಕಟರಾಮಯ್ಯನವರು