This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ರಾಸಕೇಶಿಯಲ್ಲಿ ಮಗ್ನನಾಗಿದ್ದ ಕೃಷ್ಣನ ಚಿತ್ರ ಎಷ್ಟು ಶೃಂಗಾರಮಯವಾಗಿ

ವರ್ಣಿತವಾಗಿದೆ ಎಂಬುದನ್ನು ಈ ಶ್ಲೋಕದಲ್ಲಿ ಕಾಣಬಹುದು.

ಸಾಯಂಕಾಲೇ ವನಾಂತೇ ಕುಸುಮಿತಸಮಯೇ
 

ಸೈಕತೇಚಂದ್ರಿಕಾಯಾಂ ।

ತ್ರೈಲೋಕ್ಯಾಕರ್ಷಣಾಂಗಂ ಸುರನರಗಣಿಕಾ
 

ಮೋಹನಾಪಾಂಗ ಮೂರ್ತಿಂ ॥
 

ಸೇವ್ಯಂ ಶೃಂಗಾರ ಭಾವೈ: ನವರಸ ಭರಿತೈಃ

ಗೋಪಕನ್ಯಾ ಸಹ ।

ವಂದೇಹಂರಾಸಕೇಳೀ ರತಿಮತಿ ಸುಭಗಂ
 
8
 

ವಶ್ಯಗೋಪಾಲ ಕೃಷ್ಣಂ ॥
 

ಅವನು ಇಟ್ಟ ಒಂದೊಂದು

ಭಾಷೆಯು
 
ಶ್ರೀಕೃಷ್ಣ ಕರ್ಣಾಮೃತವು ಕೃಷ್ಣನನ್ನು ಕುರಿತ ಕಥೆಗಳ ಮಾಲೆ, ಚಿತ್ರಮಾಲೆ, ಕವಿಯು

ಕವನಚತುರ, ಶಬ್ದ ಬ್ರಹ್ಮವು ಅವನ ವಶವಾಗಿದೆ.

ಪದವೂ ರಸಘಟ್ಟ, ವಚೋವಿನ್ಯಾಸ ಅವ್ಯಾಹತವಾಗಿ ಓಡುತ್ತದೆ.

ಸುಂದರವಾಗಿದೆ. ಅವನು ಸರಸ್ವತಿಯನ್ನು ಸಹಜ ಸರಳೇ ಎಂದಿದಾ ನೆ.

ಕಾವ್ಯದಲ್ಲಿ ಪ್ರಾಸ, ಅನುಪ್ರಾಸಗಳ ಸೊಗಸಿದೆ : ಸ್ವರಗಳ ವಿನ್ಯಾಸವಿದೆ : ರಚನ

ಚಮತ್ಕಾರವಿದೆ - ಬಹುವಿಧದ ಛಂದಸ್ಸಿದೆ : ಅರ್ಧದಲ್ಲಿ ಸರಳತೆ, ಚಾತುರ್ಯಗಳಿವೆ ;

ಅಲಂಕಾರವಿದೆ : ವ್ಯಂಗ್ಯವಿದೆ : ಶೃಂಗಾರ, ವೀರ, ಕರುಣ, ಹಾಸ್ಯ, ಅದ್ಭುತರಸಗಳಿವೆ.

ಈ ಎಲ್ಲಾ ವ್ಯಾಪಾರಗಳನ್ನೂ ಕವಿಯು ಅತಿಮಾನುಷ ಸ್ಥಿತಿಗೆ ಏರಿಸಿದ್ದಾ ನೆ.

ಇವರ ಎಲ್ಲ ಶ್ಲೋಕಗಳನ್ನೂ ರಾಗಗಳಿಗೆ ಅಳವಡಿಸಿದ್ದಾರೆ. ಕೇರಳ ಮತ್ತು

ಬಂಗಾಳದಲ್ಲಿ ಹಲವು ಶ್ಲೋಕಗಳನ್ನು ನಾಟ್ಯಕ್ಕೆ ಹೊಂದಿಸಿಕೊಂಡಿದ್ದಾರೆ. ಈ

ಕರ್ಣಾಮೃತವಾದ ಕಾವ್ಯಕ್ಕೆ

ಕಾವ್ಯಕ್ಕೆ ಕರ್ಣಾನಂದ ಪ್ರಕಾಶಿನೀ, ಶೃಂಗಾರರಂಗದಾ,

ಕೃಷ್ಣವಲ್ಲಭಾ, ಸುಬೋಧಿನಿ ಎಂಬ ವ್ಯಾಖ್ಯಾನಗಳಿವೆ.
 

 
ಕೃಷ್ಣನ್, ಟಿ. ಎನ್. (೧೯೨೯)-
ಇವರು ಹಿಂದಿನ ಕೊಚ್ಚಿ ಸಂಸ್ಥಾನದ

ತಿರುಪ್ಪುಣಿತ್ತು ಎಂಬಲ್ಲಿ ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ನಾರಾಯಣ ಅಯ್ಯರ್

ರವರ ಪುತ್ರನಾಗಿ ಜನಿಸಿದರು. ಇವರ ಹೆಸರು ತ್ರಯಂಬಕೇಶ್ವರ. ಇವರ ತಾತ

ಅಪ್ಪಾದೊರೈಭಾಗವತರು ಸಂಗೀತ ವಿದ್ವಾಂಸರಾಗಿದ್ದರು. ತ್ರಯಂಬಕೇಶ್ವರನನ್ನು

ಮುದ್ದಿಗಾಗಿ ಕೃಷ್ಣ ಎಂದು ಕರೆಯುತ್ತಿದ್ದರಿಂದ ಅದೇ ಹೆಸರು ನಿಂತಿತು. ೧೯೩೪ರಿಂದ

೧೯೩೯ರ ವರಗೆ ತಂದೆಯವರಲ್ಲಿ ಸಂಗೀತ ಶಿಕ್ಷಣವನ್ನು ಪಡೆದರು.

ಮೂರು ವರ್ಷಗಳ ಕಾಲ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಇವರಿಗೆ ಉತ್ತಮವಾದ

ಶಿಕ್ಷಣವನ್ನಿತ್ತು ಪ್ರೋತ್ಸಾಹಿಸಿದರು. ತಮ್ಮ ೧೩ನೆಯ ವಯಸ್ಸಿನಲ್ಲಿ ಪುದುವಯಲ್

ಗ್ರಾಮದಲ್ಲಿ ಮೊಟ್ಟ ಮೊದಲು ಅರಿಯಕುಡಿಯವರಿಗೆ ಪಕ್ಕವಾದ್ಯ ನುಡಿಸಿದರು.

೧೯೪೪ರಲ್ಲಿ ಮದ್ರಾಸಿನಲ್ಲಿ ನೆಲೆಸಿ ಟಿ. ಆರ್ ಮಹಾಲಿಂಗ ಮತ್ತು ಕೆಮ್ಮಂಗುಡಿ
 
೧೯೪೦ರಿಂದ