This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸರ್ವಾಂಗೇ ಹರಿಚಂದನಂ ಚ ಕಲಯನ್ ಕಂಠೇಚ ಮುಕ್ತಾವಲೀಂ ।

ಗೋಪ ಪರಿವೇಷ್ಟಿತೋ ವಿಜಯತೇ ಗೋಪಾಲ ಚೂಡಾಮಣಿಃ ॥

ಕಾವ್ಯದಲ್ಲಿ ಬರುವ ಕೃಷ್ಣನ ಮೂರ್ತಿಯ ಹಲವು ವಯಸ್ಸಿನವು. ವಿವಿಧ ಸನ್ನಿವೇಶಗಳು

ಮೋಹಕರೂಪ, ಕಾಂತಿ, ಭಂಗಿಗಳ ರಮಣೀಯವಾದ ಚಿತ್ರಗಳು,
 

ಅಂಬೆಗಾಲಿಡುವ
 
ಕೃಷ್ಣ, ಬೆಣ್ಣೆಯನ್ನು ಹಿಡಿದಿರುವ ಕೃಷ್ಣ, ಅಂಗಳದ ಮಣಿಶಿಲೆಯಲ್ಲಿ ನೆರಳಿನಲ್ಲಿ

ಬೆಣ್ಣೆ ಯನ್ನು ಕಂಡು ಅದನ್ನು ತುಡುಕನೋಡಿ ಅದು ದೊರೆಯಲಿಲ್ಲವೆಂದು ಅಳುವ

ಕೃಷ್ಣ, ಹಾಲು ಬೇಡುವ, ಬೆಣ್ಣೆ ಕಳುವಕೃಷ್ಣ, ಸಂಜೆ ಬಂದ ದನಗಳ ಮುಂದೆ ನುಗ್ಗಿ

ತಾಯ ಕೈಗೆ ಸಿಕ್ಕದೆ ಓಡುವ ಕೃಷ್ಣ, ಮಣ್ಣು ತಿಂದದ್ದು ಸುಳ್ಳು ಎಂದು ಸ್ಥಾಪಿಸಲು

ತನ್ನ ಬಾಯಿ ತೆರೆದು ತೋರಿದ ಕೃಷ್ಣ, ದನಕಾಯಲು ಹೋಗುವ ಕೃಷ್ಣ,

ರಾಮಾವತಾರದ ಕತೆ ಕೇಳುತ್ತ ಸೀತಾಪಹರಣದ ಮಾತು ಬಂದಾಗ ಇದು ಬೇರೆ

ಅವತಾರ ಎಂಬುದನ್ನು ಮರೆತು, ಲಕ್ಷಣಾ, ನನ್ನ ಧನುಸ್ಸೆಲ್ಸಿ

ಎಂದ ಕೃಷ್ಣ,

ಗೋವರ್ಧನೋದ್ದಾರಿ ಕೃಷ್ಣ, ಕಂಸಸಂಹಾರಿ ಕೃಷ್ಣ, ಹೀಗೆ ಕಾವ್ಯದ ಮುನ್ನೂರು

ಶ್ಲೋಕಗಳಲ್ಲಿ ಕೃಷ್ಣನ ಚಿತ್ರಗಳು ದೊರೆಯುತ್ತವೆ. ಕವಿಗೆ ಕೃಷ್ಣನ ಎಳೆತನದಲ್ಲಿಯೇ

ಒಲವು ಹೆಚ್ಚು. ಕೃಷ್ಣನ ಮುಗ್ಧವೇಷದ ವರ್ಣನೆ ಹೃದಯಂಗಮವಾಗಿದೆ. ಒಡವೆ

ಗಳಿಂದ ಅಲಂಕೃತವಾಗಿ ಅಂಗಳದಲ್ಲಿ ಓಡಾಡುವ ಮಗುವನ್ನು ನೋಡಿ

ಕಿಂಕಿಣಿ ಕಿಣಿಕಿಣಿ ರಭಸೈರಂಗಣ ।

ಭುವಿರಿಂಗಹೈ: ಸದಾ ಟೆಂಕಂ ॥
 

ಕುಂಕುಣು ತುಣು ಪದಯುಗಳಂ ।

ಕಂಕಣ ಕರಭೂಷಣಂ ಹರಿಂ ವಂದೇ ॥
 

ಆಲದ ಎಲೆಯ ಮೇಲೆ ಕಾಲು ಬೆರಳುಗಳನ್ನು ಬಾಯಲಿಟ್ಟು ಮಲಗಿರುವ ಮಗು

ಕೃಷ್ಣನ ಚಿತ್ರ ಬಹುಸುಂದರ
 
{
 

ಕರಾರವಿಂದೇನ ಪದಾರವಿಂದಂ ।

ಮುಖಾರವಿಂದೇ ವಿನಿವೇಶಯಂತಂ ॥

ವಟಸ್ಯ ಪತ್ರಸ್ಯ ಪುಟೇಶಯಾನಂ ।

ಬಾಲಂ ಮುಕುಂದಂ ಮನಸಾಸ್ಮರಾಮಿ ॥
 

ತಾಯಿ ಕೃಷ್ಣನನ್ನು ಕರೆದು ಮಣ್ಣು ತಿಂದೆಯಾ ಎಂದು ಕೇಳಿದಾಗ ಅದು ಬರಿ ಸುಳ್ಳು

ಎಂದು ಬಾಯಿ ತೆರೆದು ತೋರಿಸಿದಾಗ ತಾಯಿ ಮಗುವಿನ ಬಾಯಿಯಲ್ಲಿ ವಿಶ್ವವನ್ನೇ

ಕಾಣುವ ಸನ್ನಿವೇಶವನ್ನು ನೋಡಿ
 
"}
 

ಕೃಷ್ಣನಾಂಬ ! ಗತೇನ ರಂತುಮಧುನಾ ಮೃದ್ಭಕ್ಷಿತಂ ಸ್ವಚ್ಛಯಾ

ತಥ್ಯಂಕೃಷ್ಣ ಕಏವಮೂಹ ಮುಸಲೀ ? ಮಿಥ್ಯಾಂಬ ಪಶ್ಚಾನನಂ ।

ವ್ಯಾದೇಹೀ 'ತಿ ವಿ ದಾರಿತೇ ಶಿಶುಮುಖೇ ದೃಷ್ಟಾ ಸಮಸ್ತಂಜಗತ್ ।

ಮಾತಾಯಸ್ಯ ಜಗಾಮ ವಿಸ್ಮಯಪದಂ ಪಾಯಾತೃನಃಕೇಶವಃ ॥
 
(6
 
೨೩೫