2023-07-03 07:47:50 by jayusudindra
This page has been fully proofread once and needs a second look.
ಕೃಷ್ಣನಿಗೂ, ಕೊಳಲಿಗೂ ಇರುವ ಸಂಬಂಧ ಸೂಚಿತವಾಗಿದೆ ಹಾಗೂ ಸಂಗೀತವು
ದೈವಿಕವಾದುದೆಂಬುದರ ಚಿಹ್ನೆಯಾಗಿದೆ. ಕೃಷ್ಣನನ್ನು ಊದುತ್ತಿದ್ದ ಶಂಖಕ್ಕೆ
ಪಾಂಚಜನ್ಯವೆಂದು ಹೆಸರು. ಕೃಷ್ಣನ ಬಾಲಲೀಲೆಗಳು, ಜೀವನಚರಿತ್ರೆ, ಸಾಧನೆ,
ಬೋಧನೆ ಮುಂತಾದುವು ಅನೇಕ ಕವಿಗಳಿಗೂ, ವಾಗ್ಗೇಯಕಾರರಿಗೂ ಸ್ಫೂರ್ತಿ ನೀಡಿದೆ.
ಜಯದೇವನ ಗೀತಗೋವಿಂದ, ಕುಲಶೇಖರಾಳ್ವಾರರ ಮುಕುಂದ ಮಾಲಾಸ್ತೋತ್ರ,
ನಾರಾಯಣತೀರ್ಥರ ಕೃಷ್ಣ ಲೀಲಾ ತರಂಗಿಣಿ, ಚಿಕ್ಕದೇವರಾಜ ಒಡೆಯರ ಗೀತೆ
ಗೋಪಾಲ ಎಂಬುವು ಕೃಷ್ಣ ಭಕ್ತಿಯಿಂದ ತುಂಬಿದ ಮುಖ್ಯ ರಚನೆಗಳಾಗಿವೆ.
ಕೃಷ್ಣ ಮತ್ತು ಗೋಪಿಯರ ಪ್ರೇಮದಲ್ಲಿ ಮಧುರಭಾವ ಮತ್ತು ಭಕ್ತಿ ತುಂಬಿವೆ.
ಕ್ಷೇತ್ರಜ್ಞ ಮತ್ತು ಸಾರಂಗಪಾಣಿ ಮುಂತಾದವರ ಪದಗಳಲ್ಲಿ ಕೃಷ್ಣನು ನಾಯಕ,
ಕೃಷ್ಣ ಕರ್ಣಾಮೃತಂ
ಶ್ರೀಕೃಷ್ಣ ಕರ್ಣಾಮೃತಂ ಪ್ರಖ್ಯಾತವಾದ ನಾಲ್ಕು
ವೈಷ್ಣವ ಭಕ್ತಿ ಕಾವ್ಯಗಳಲ್ಲಿ ಒಂದಾಗಿದೆ. ಕುಲಶೇಖರಾಳ್ವಾರರ ಮುಕುಂದಮಾಲಾ,
ಜಯದೇವನ ಗೀತಗೋವಿಂದ, ನಾರಾಯಣತೀರ್ಥರ ಕೃಷ್ಣಲೀಲಾ ತರಂಗಿಣಿ ಇತರ
ಮೂರು ಕಾವ್ಯಗಳು. ಇವುಗಳನ್ನು ಓದುವುದರಿಂದ ಭಕ್ತಿ ಮಾತ್ರವಲ್ಲ, ಕಾವ್ಯದಿಂದ
ಉದಿಸುವ ಉನ್ನತ ರಸಾನುಭವವನ್ನು ಪಡೆಯುತ್ತೇವೆ. ಈ ಗ್ರಂಥಗಳ ದಾರಿ ಬೇರೆ
ಬೇರೆ. ಕೃಷ್ಣ ಕರ್ಣಾಮೃತಂ ತೀರ ಬರಿಯ ಗಾಂಭೀರದ ಕಾವ್ಯವೂ ಅಲ್ಲ,
ಶೃಂಗಾರಕಾವ್ಯವೂ ಅಲ್ಲ, ಇಂದೊಂದು ಸಂಗೀತ ರೂಪಕ ಕವಿಯು ದೈವವಾದ
ಕೃಷ್ಣನನ್ನು ಮಗುವಾಗಿ, ಎಳೆಯನಾಗಿ, ತರುಣನಾಗಿ, ಪ್ರೌಢನಾಗಿ ಭಾವಿಸಿ ಇಲ್ಲಿ
ಶೃಂಗಾರ, ಇಲ್ಲಿ ಹಾಸ್ಯ, ಇಲ್ಲಿ ಗಂಭೀರ ಭಕ್ತಿ ಹೀಗೆ ಬಹು ರೀತಿಯ ಭಾವವನ್ನು
ಪ್ರಕಟಿಸುವ ಖಂಡ ಶ್ಲೋಕಗಳ ಸಮುದಾಯ. ಅನೇಕ ಭಾವಗಳನ್ನು ಗುರುತಿಸಲು
ತೊಡಗಿರುವ ಈ ಕಾವ್ಯವು ದೀರ್ಘವಾದ ಕಾವ್ಯವಾಗಿದೆ.
ಕವಿಲೀಲಾಶುಕ ಅಧವಾ ಬಿಲ್ವಮಂಗಳ ರಚಿಸಿರುವ ಕೃಷ್ಣಕರ್ಣಾಮೃತದ
೨೩೪
ಎನ್ನು ವುದಿಲ್ಲ.
ಸ್ವಸಂಪೂರ್ಣ, ಸ್ವತಂತ್ರ. ಒಂದೊಂದೂ
ತಿಳಿಯಲು ಹಿಂದಿನ ಮುಂದಿನ ಶ್ಲೋಕಗಳ ಸಂಗತಿ ತಿಳಿಯಬೇಕು
ಇಡೀ ಕಾವ್ಯಕ್ಕೆ ಕೃಷ್ಣನೇ ಏಕಮಾತ್ರ ವಸ್ತು ಸಾಮಾನ್ಯವಾಗಿ
ಶ್ಲೋಕದಲ್ಲೂ ಕೃಷ್ಣನ ಸೌಂದರ್ಯ ವರ್ಣನೆಯಿದೆ. ಇವುಗಳಲ್ಲಿ ಕವಿಯು ಶ್ರೀ
ಕೃಷ್ಣನು ಪುನಃ ಪುನಃ ಮನಸ್ಸಿಗೆ ತಂದುಕೊಳ್ಳುತ್ತಾನೆ. ಆದ್ದರಿಂದ ಪುನರುಕ್ತಿ
ಅನಿವಾರ್ಯ. ಜನಪ್ರಿಯವಾಗಿರುವ ಈ ಶ್ಲೋಕದಲ್ಲಿ ಕೃಷ್ಣನ ಮೂರ್ತಿ ಕಣ್ಮುಂದೆ
ಕಸ್ತೂರೀತಿಲಕಂ ಲಲಾಟಫಲಕೇ ವಕ್ಷಸ್ತಲೇ ಕೌಸ್ತು ಭಂ ।
ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೆಕಂಕಣಂ ॥