This page has not been fully proofread.

ಸಂಗೀತದ ಪಾರಿಭಾಷಿಕ ಕೋಶ
 
(೪) ನಾಗಾರಂಭಾನುಭಾವ -ಆಲಾವ, ಸಲ್ಲಾಪ, ಪ್ರಲಾಪ, ವಿಲಾಸ,
ಅನುಲಾವ, ನಿರ್ದೇಶಕ, ಉಪದೇಶಕ ಮುಂತಾದ ಮಾತುಗಳ ವಿಶೇಷಣಗಳು
ವಾಗಾರಂಭಾನುಭಾವ
 
ಅವನು ಧೈರ್ಯದಿಂದ (ಇದು ಚಿತ್ತ ಜಾನುಭಾವ)
ವೇದಿಕೆಯ ಮೇಲೆ ನಿಂತು ಭಗವಂತನ ಲೀಲಾವಿನೋದಗಳ ಬಗ್ಗೆ (ಇದು ಗಾತ್ರಜಾನು
ಭಾವು ಮಾತನಾಡುತ್ತಾ, ಜನಸಾಮಾನ್ಯರಿಗೂ ಹಿಡಿಸುವಂತೆ ಕತೆಗಳನ್ನು ಹೇಳುತ್ತಾ
ಹರಿನಾಮ
ಮಾಡಿ ಉವದೇಶವನ್ನಿತ್ತನು (ಇದು
ಆ ರೀತಿಯು ಅಮೋಘವಾಗಿತ್ತು (ಇದು ಬುದ್ಧಾ
ರಂಭಾನುಭಾವ). ಈ ಉದಾಹರಣೆಯಲ್ಲಿ ಅನುಭಾವದ ವಿವಿಧ ಭೇದಗಳನ್ನು ಗಮನಿಸ
 
ಸಂಕೀರ್ತನೆಯನ್ನು
 
ನಾಗಾರಂಭಾನುಭಾವ)
 
ಬಹುದು.
 
೧೮
 
ಅನುಬಂಧ ೧೮ನೆಯ ಶತಮಾನದಲ್ಲಿ ರಚಿಸಲ್ಪಟ್ಟ ತಾನವರ್ಣಗಳಲ್ಲಿ
ಕೊನೆಯ ಭಾಗವು ಅನುಬಂಧವೆನಿಸಿಕೊಂಡಿದೆ. ಮುಂದಿನ ಶತಮಾನದ ವಾಗ್ಗೇಯ
ಕಾರರು ಈ ಭಾಗವನ್ನು ವರ್ಣಗಳಲ್ಲಿ ಸೇರಿಸುವ ಪದ್ಧತಿಯನ್ನು ಮುಂದುವರಿಸಲಿಲ್ಲ.
ಅನುಬಂಧವು ವರ್ಣಕ್ಕೆ ಸಂಪೂರ್ಣವಾದ ಮುಕ್ತಾಯವನ್ನುಂಟುಮಾಡುತ್ತಿತ್ತು.
ಅನುಬಂಧವಿರುವ ವರ್ಣವನ್ನು ಹಾಡುವಾಗ ಪಲ್ಲವಿ, ಅನುಪಲ್ಲವಿ, ಮುಕ್ತಾಯಸ್ವರ,
ಚರಣ ಮತ್ತು ಎತ್ತು ಗಡೆ ಸ್ವರಗಳನ್ನು ಕ್ರಮವಾಗಿ ಹಾಡಿ ಕೊನೆಯ ಎತ್ತುಗಡೆ
ಸ್ವರದ ನಂತರ ಚರಣವನ್ನು ಹಾಡಿ, ನಂತರ ಅನುಬಂಧವನ್ನು ಹಾಡುತ್ತಿದ್ದರು.
ಇತರ ಭಾಗಗಳ ಸಾಹಿತ್ಯದ ಭಾವನೆಯನ್ನು ಅನುಬಂಧದ ಸಾಹಿತ್ಯವು ಸಂಪೂರ್ಣ
ಗೊಳಿಸುತ್ತಿತ್ತು. ಕೆಲವು ಅನುಬಂಧಗಳಲ್ಲಿ ಸಾಹಿತ್ಯ ಮತ್ತು ಸ್ವರಭಾಗಗಳು ಮತ್ತು
ಕೆಲವುಗಳಲ್ಲಿ ಕೇವಲ ಸಾಹಿತ್ಯ ಭಾಗ ಮಾತ್ರ ಇರುತ್ತಿದ್ದವು. ಭೈರವಿ ರಾಗದ
(ಆದಿತಾಳ) ಪ್ರಸಿದ್ಧವಾದ ವಿಬೋಣಿ ವರ್ಣದಲ್ಲಿ ಅನುಬಂಧವಿದ್ದಿತು. ಇದನ್ನು
ಹಾಡುವ ಸಂಪ್ರದಾಯವನ್ನು ಕಾಲಕ್ರಮದಲ್ಲಿ ಕೈಬಿಟ್ಟರು.
ಅನುಬಂಧವು - ಚಿರು ಚೇಮತಲು' ಎಂದು ಆರಂಭವಾಗುತ್ತದೆ. ಇದನ್ನು ಹಾಡಿದ
ನಂತರ 'ಶ್ರೀರಾಜಗೋಪಾಲ ? ಎಂದು ಆರಂಭವಾಗುವ ಪಲ್ಲವಿಯ ದ್ವಿತೀಯ
ಭಾಗವನ್ನು ಹಾಡುತ್ತಿದ್ದರು. ರಾಮಸ್ವಾಮಿ ದೀಕ್ಷಿತರು ಮತ್ತು ಸೊಂಠಿವೆಂಕಟ
ಸುಬ್ಬಯ್ಯನವರು ರಚಿಸಿದ ತಾನವರ್ಣಗಳಲ್ಲಿ ಅನುಬಂಧಗಳಿದ್ದುವು. ಪಂಚರತ್ನ
ಕೃತಿಯಲ್ಲಿ (ಆರಭಿ) ತ್ಯಾಗರಾಜರು - ಸದ್ಭಕುಲ ' ಎಂಬ ಪದದಿಂದ ಆರಂಭವಾಗುವ
ಅನುಬಂಧದಂತಿರುವ ಭಾಗವನ್ನು ಸೇರಿಸಿದ್ದಾರೆ. ಸಮಯಾನಿಕಿ ತಗು ಮಾಟಲಾಡೆನೆ'
ಎಂಬ ಎತ್ತುಗಡೆಪಲ್ಲವಿಯಿಂದ ಕೂಡಿದ ಭಾಗವು ಎಂಟು ಆವರ್ತಗಳನ್ನು ಹೊಂದಿದೆ.
ಇದರ ಸಾಹಿತ್ಯವನ್ನು ಮಾತ್ರ ಹಾಡುವರು. ಎತ್ತುಗಡೆ ಪಲ್ಲವಿಯ ನಂತರ ಬರುವ
ಸ್ವರಸಾಹಿತ್ಯ ಭಾಗಗಳಂತೆ ಹಾಡುವುದಿಲ್ಲ. ದ್ವಿತೀಯಾಕ್ಷರ ಪ್ರಾಸ ಮತ್ತು ಯತಿ
ಪ್ರಾಸಗಳು ಅನುಬಂಧದ ಸಾಹಿತ್ಯದಲ್ಲಿ ಸೂಕ್ತವಾದೆಡೆಗಳಲ್ಲಿ ಇರುವ ಅನುಬಂಧವು
ಎತ್ತುಗಡೆ ವಲ್ಲನಿಯೊಂದಿಗೆ ನೇರವಾಗಿ ಸಂಬಂಧಿಸಿದೆ ಎಂಬುದಕ್ಕೆ ನಿದರ್ಶನ.
 
ವರ್ಣದ