This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದ್ರಾಕ್ಷಾರಸ ನವರಸಯುತ ಕೃತಿ' ಎಂದು ಲಕ್ಷಣಗಳನ್ನು ಹೊಂದಿರುವಂತೆ ಕೃತಿಗಳನ್ನು
 
ರಚಿಸಿದರು.
 
೨೩೩
 

ಕೃತಿಗಳಲ್ಲಿ ವಿಶೇಷವಾದ ಶೈಲಿ, ನೆರವಲ್ ಮತ್ತು ಕಲ್ಪನೆ ಸ್ವರಗಳಿಗೆ ಅವಕಾಶ

ಹೆಚ್ಚು. ಇದರಲ್ಲಿ ಸಾಹಿತ್ಯಕ್ಕಿಂತ ಸಂಗೀತಕ್ಕೆ ಪ್ರಾಧಾನ್ಯ. ಕೀರ್ತನೆಯಲ್ಲಿ

ಸಾಹಿತ್ಯವು ಪ್ರಧಾನ, ಸಾಹಿತ್ಯದ ವಿಷಯವು ಭಕ್ತಿಗೆ

ಭಕ್ತಿಗೆ ಸಂಬಂಧಿಸಿರುತ್ತದೆ.

ಕೆಲವು ಕೃತಿಗಳು ಉನ್ನತ ತತ್ವಗಳನ್ನು ಬೋಧಿಸುತ್ತವೆ.
 

ಕೆಲವು ಕೃತಿಗಳಲ್ಲಿ ಕೆಲವು ಚರಣಗಳ ಧಾತುವು ಅನುಪಲ್ಲವಿಯ

ಧಾತುವಿನಂತೆಯೇ ಇರುತ್ತದೆ. ಮುತ್ತು ಸ್ವಾಮಿದೀಕ್ಷಿತರ ಕೃತಿಗಳಲ್ಲಿ ಅನುಪಲ್ಲವಿಯ

ಧಾತುವು ಚರಣದಲ್ಲಿ ಪುನರಾವರ್ತನೆಯಾಗುವುದಿಲ್ಲ. ಇವರ ಹಲವು ಸರಳವಾದ

ರಚನೆಗಳಲ್ಲಿ ಪಲ್ಲವಿ ಮತ್ತು ಅನುಪಲ್ಲವಿ ಮಾತ್ರ ಇವೆ. ಉದಾ : ಶ್ರೀ ಸರಸ್ವತಿ

ನಮೋಸ್ತುತೇ (ಆರಭಿ). ಇಂತಹ ಕೃತಿಗಳಲ್ಲಿ ಪಲ್ಲವಿಯ ನಂತರ ಇರುವ ಭಾಗಕ್ಕೆ

ಸಮಷ್ಟಿ ಚರಣವೆಂದು ಹೆಸರು. ಅಂದರೆ ಈ ಅಂಗವೇ ಅನುಪಲ್ಲವಿ ಮತ್ತು ಚರಣ

ವಾಗಿರುತ್ತದೆ. ಇವುಗಳನ್ನು ಹಿಂದಿನ ಉಗಾಭೋಗಗಳಿಗೆ ಹೋಲಿಸಬಹುದು.

ಕೃತಿಯ ಚರಣಗಳಲ್ಲಿ ಒಂದು ಮುದ್ರೆ ಇರುವ ಚರಣವಾಗಿರುತ್ತದೆ. ಪಲ್ಲವಿ ಮತ್ತು

ಸಮಷ್ಠಿ ಚರಣಗಳು ಪ್ರಾಸಬದ್ಧವಾಗಿರುತ್ತವೆ. ಕೆಲವು ಕೃತಿಗಳಲ್ಲಿ ಸೌಂದರ್ಯ

ವನ್ನು ಹೆಚ್ಚಿಸುವುದಕ್ಕಾಗಿ ಚಿಟ್ಟೆಸ್ವರಗಳನ್ನು ಸೇರಿಸಿರುತ್ತಾರೆ. ಇವು ಸಮಕಾಲ

ಅಥವಾ ಮಧ್ಯಮ ಕಾಲದ ಚಿಟ್ಟೆ ಸ್ವರಗಳಾಗಿರಬಹುದು. ಕೆಲವಲ್ಲಿ ಸ್ವರಾಲಂಕಾರ

ಚಿಟ್ಟೆ ಸ್ವರಗಳಿವೆ. ಕೆಲವಲ್ಲಿ ವಿಲೋಮ ಮತ್ತು ಅನುಲೋಮ ಚಿಟ್ಟೆ ಸ್ವರಗಳೂ,
 

ಕೆಲವಲ್ಲಿ ಸ್ವರಸಾಹಿತ್ಯವೂ ಇರುವುದುಂಟು.
 

ಓ ಜಗದಂಬ (ಆನಂದ ಭೈರವಿ), ಸಾಕೇತ ನಗರನಾದ (ಹರಿಕಾಂಭೋಜಿ),

ವಾಚಾಮ ಗೋಚರುಂಡನಿ (ಅಠಾಣ) ಮುಂತಾದ ಕೃತಿಗಳು ಸ್ವರಸಾಹಿತ್ಯವುಳ್ಳ

ಕೃತಿಗಳಿಗೆ ನಿದರ್ಶನ.

ಶ್ಯಾಮಾಶಾಸ್ತ್ರಿ ಮತ್ತು ಮೈಸೂರು ಸದಾಶಿವರಾಯರ

ಕೃತಿಗಳಲ್ಲಿ ಸುಂದರವಾದ ಸ್ವರಸಾಹಿತ್ಯವಿದೆ. ಮಧ್ಯಮಕಾಲ ಸಾಹಿತ್ಯ, ಶೋಲ್ಕಟ್ಟು

ಸ್ವರಗಳು, ಸ್ವರಾಕ್ಷರ, ಸಂಗತಿ, ಯಮಕ, ಯತಿ ಮುಂತಾದುವು ಕೃತಿಯ

ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೃತಿಯ ಮುಖ್ಯ ಭಾಗವಾದ ಮಧ್ಯಮಕಾಲ

ಸಾಹಿತ್ಯವು ಅನುಪಲ್ಲವಿ ಅಥವಾ ಚರಣ ಅಧವಾ ಇವೆರಡರ ಕೊನೆಯ ಭಾಗದಲ್ಲಿ

ಇದ್ದು ಕೃತಿಯ ಗಾಂಭೀರ್ಯವನ್ನು ಹೆಚ್ಚಿಸುತ್ತದೆ.
 

 
ಕೃತ್ರಿಮ-
ಇದು ಐದು ವಿಧವಾದ ನಾದದಲ್ಲಿ ಒಂದು ಬಗೆ. ಮಿಕ್ಕ ನಾಲ್ಕು

ಬಗೆಗಳು ಅಪುಷ್ಪ, ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಪುಷ್ಟ.
 

 
ಕೃಷ್ಣ -
ಶ್ರೀಮನ್ನಾರಾಯಣನ ಹತ್ತು ಅವತಾರಗಳಲ್ಲಿ ಎಂಟನೆಯ ಅವತಾರ.

ಚಂದ್ರವಂಶದ ಯದುಕುಲದಲ್ಲಿ ಜನಿಸಿದ ಸಾತ್ವತರಾಜನ ಸಂತತಿಯಲ್ಲಿ ಶೂರರಾಜನ

ಮಗನಾದ ವಸುದೇವನ ಹೆಂಡತಿಯಾದ ದೇವಕಿಯಲ್ಲಿ ಜನಿಸಿದ ಎಂಟು ಮಕ್ಕಳಲ್ಲಿ