2023-07-03 07:45:45 by jayusudindra
This page has been fully proofread once and needs a second look.
ಕೀರ್ತನೆಗಳ ವ್ಯತ್ಯಾಸವು ಬೆಳೆದು ಬಂದಿದೆ. ಅದಕ್ಕೆ ಹಿಂದೆ ಇವೆರಡಕ್ಕೂ
ವ್ಯತ್ಯಾಸವಿರಲಿಲ್ಲ. ಜಯದೇವ, ಪುರಂದಾರದಾಸರು ಮತ್ತು ನಾರಾಯಣ ತೀರ್ಥರು
ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳಿರುವ ರಚನೆಗಳನ್ನು ಮಾಡಿದ್ದರೂ ಕೃತಿಯ
ಸಂಪೂರ್ಣ ಸ್ವರೂಪವನ್ನು ವಿಕಾಸಗೊಳಿಸಿ, ಸಂಗತಿಗಳನ್ನು ಅಳವಡಿಸಿ, ನಿರ್ದಿಷ್ಟ
ಸ್ವರೂಪವನ್ನು ಕೊಟ್ಟವರು ತ್ಯಾಗರಾಜರು.
ಸುಸ್ವರಂ ಸರಸಂಚೈವ ಸುರಾಗಂ ಮಧುರಾಕ್ಷರಂ
ಸಾಲಂಕಾರ ಪ್ರಮಾಣಂ ಚ ಷಧಂಗೀತ ಲಕ್ಷಣ
ಎಂದು ಗಾಂಧರ್ವ ವೇದದಲ್ಲಿ ಕೃತಿಯ ಆರು ಲಕ್ಷಣಗಳನ್ನು ಹೇಳಿದೆ. ಇದನ್ನು
ಬಹುಶಃ ತ್ಯಾಗರಾಜರು ಉಪಯೋಗಿಸಿಕೊಂಡು ಈ ಆರು ಲಕ್ಷಣಗಳಿಗೆ ಸಮನಾಗಿರು
ವಂತೆ : ಯತಿ ವಿಶ್ರಮ ಸದ್ಭಕ್ತಿ ವಿರತಿ ಇದರಲ್ಲಿ ಸಾಹಿತ್ಯದ ಮಾಧುರ್ಯ ಮುಖ್ಯ
ವಾದರೆ ಕೃತಿಯಲ್ಲಿ ಸಂಗೀತ ಕವಿತ್ವವು ಮುಖ್ಯ, ಕೃತಿಯಲ್ಲಿ ಗಾನರಸದ ಅನುಭವ
ಕೀರ್ತನೆಯಲ್ಲಿ ಭಕ್ತಿರಸದ ಅನುಭವವಾಗುತ್ತದೆ. ರಾಗಭಾವವನ್ನು
ವಾದರೆ
ಕೀರ್ತನೆಗಳು ೧೪ನೆ ಶತಮಾನದಲ್ಲಿ ಪ್ರಾರಂಭವಾದುವು.
ಕೃತಿಯ ಸಾಹಿತ್ಯದ ವಿಷಯವು ದೇವತಾಸ್ತುತಿ, ನೀತಿ, ತರ್ಕ, ತತ್ವ ಅಥವಾ
ಲೌಕಿಕ ವಿಷಯವಾಗಿರಬಹುದು. ಇದರಲ್ಲಿ ಪದಗಳು ಕಡಿಮೆ. ಹಾಡಲು ಬಹಳ
ಅನುಕೂಲ ಇದರ ಸಂಗೀತವು ವಿವಿಧ ಸೌಂದರ್ಯ ವಿಶೇಷಗಳಿಂದ ಕೂಡಿರುತ್ತದೆ.
ಪಲ್ಲವಿ, ಅನುಪಲ್ಲವಿಯಲ್ಲದೆ ಒಂದು ಅಥವಾ ಹೆಚ್ಚು ಚರಣಗಳಿರಬಹುದು.
ಚರಣಗಳ ಧಾತು ಒಂದೇ ವಿಧವಾಗಿರಬಹುದು ಅಥವಾ ಅದರಲ್ಲಿ ವೈವಿಧ್ಯತೆ
ಇರಬಹುದು. ಅತೀತ, ಅನಾಗತ ಪ್ರಯೋಗಗಳು ಬಹುವಾಗಿ ಕೃತಿಗಳಲ್ಲಿವೆ.
ತಿಳಿದು ಬರುತ್ತವೆ ಹಾಗೂ ಸಂಗೀತ ಶುದ್ಧ ಭಾಷೆಯು ತಿಳಿದುಬರುತ್ತದೆ. ಇವು
ಸಾಮಾನ್ಯವಾಗಿ 1 ಯಿಂದ 2 ಸ್ಥಾಯಿ ವ್ಯಾಪ್ತಿಯಲ್ಲಿವೆ. ಕೀರ್ತನೆಗಳನ್ನು
ಅಲ್ಪಸ್ವಲ್ಪ ಸಂಗೀತ ಜ್ಞಾನವಿರುವವರು ಹಾಡಲು ಸಾಧ್ಯ. ಆದರೆ ಕೃತಿಗಳನ್ನು
ಹಾಡಲು ಪ್ರತಿಭಾವಂತರೂ, ಶಿಕ್ಷಣ ಪಡೆದವರು ಮಾತ್ರ ಹಾಡಲು ಸಾಧ್ಯ.
ಕೀರ್ತನೆಗಳು ಸಮೂಹ ಗಾನಕ್ಕೆ ಯೋಗ್ಯವಾಗಿವೆ. ಕೃತಿಗಳು
ಕೃತಿಗಳು ಹಾಗಲ್ಲ.
ಕೀರ್ತನೆಗಳು ಸಾಮಾನ್ಯವಾಗಿ ಪರಿಚಿತವಾದ ರಾಗಗಳಲ್ಲಿವೆ. ಕೃತಿಗಳಾದರೋ
ಸಾಮಾನ್ಯ ಮತ್ತು ಅಪರೂಪ ರಾಗಗಳಲ್ಲಿವೆ. ಅನೇಕ ರಾಗಗಳು ಉಳಿದಿರುವುದು
ಕೃತಿಗಳಿಂದ ಸಂಗೀತದ ಸೌಂದರ್ಯಾನುಭವಕ್ಕಾಗಿ ಕೃತಿಗಳನ್ನು ರಚಿಸಿದ್ದಾರೆ.
ತರತೀಯಗರಾದಾ (ಗೌಳಿಪಂತು) ಕನುಗೊಂಟಿನಿ (ಬಿಲಹರಿ), ನನುಪಾಲಿಂಪ