This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕ್ರಿಯಾಂಗಾನಿ ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
 
ಒಂದು ರಾಗ.
 
ಕ್ರಿಯಾವತಿ-ಈ ರಾಗವು ೫೪ನೇ ಮೇಳಕರ್ತ ವಿಶ್ವಂಭರಿಯ ಒಂದು
 
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಗ ಸ
 
ಕ್ರಿಯಾಂಗವಿರಾಮ-ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ
ಒಂದು ಜನ್ಯರಾಗ.
 
ಸ ರಿ ಗ ರಿ ಮ ಪ ನಿ ದ ಸ
 
ಸ ನಿ ದ ಪ ಮ ದ ಮ ಗ ರಿ ಸ
 
ಕ್ರಿಯಾಂಗ ಸಂಪೂರ್ಣ ಸಂಗೀತಸಮಯಸಾರವೆಂಬ ಗ್ರಂಥದಲ್ಲಿ ಹೇಳಿರುವ
ಕ್ರಿಯಾಂಗ ರಾಗದ ವರ್ಗಕ್ಕೆ ಸೇರಿದ ಸಂಪೂರ್ಣರಾಗ,
 
ಕ್ರಿಯಾಂಗವಾಡವ-ಅದೇ ಗ್ರಂಥದಲ್ಲಿ ಹೇಳಿರುವ ಕ್ರಿಯಾಂಗ ರಾಗದ
ವರ್ಗಕ್ಕೆ ಸೇರಿದ ಷಾಡವರಾಗ
 
ಕೃತಿ-ಕೃತಿ ಎಂಬುದು ಸಂಗೀತ ರಚನೆಗಳಲ್ಲಿ ಅತ್ಯುತ್ತಮವಾದ ರಚನಾ
ವಿಶೇಷ. ಕಳೆದ ಎರಡು ಶತಮಾನಗಳಿಗಿಂತಲೂ ಹಿಂದಿನಿಂದ ಈ ಬಗೆಯ ರಚನೆ
ಗಳನ್ನು ಪ್ರತಿಯೊಬ್ಬ ಪ್ರಸಿದ್ಧ ವಾಗ್ಗೇಯಕಾರರೂ ರಚಿಸುತ್ತ ಬಂದಿದ್ದಾರೆ. ಇದಕ್ಕೆ
ಅನ್ವಯವಾಗುವ ನಿರ್ಬಂಧಗಳು ಕಡಿಮೆಯಿರುವುದರಿಂದ ವಾಗ್ಗೇಯಕಾರನ ಪ್ರತಿಭೆಗೆ
ಇಲ್ಲಿ ಅಪಾರ ಅವಕಾಶವಿದೆ ಸಂಗೀತರಚನೆಗಳಲ್ಲಿ ಬಹುಭಾಗ ಕೃತಿಗಳೇ ಆಗಿವೆ.
ಈಗಿನ ಸಂಗೀತ ಕಚೇರಿಗಳಲ್ಲಿ ಹೆಚ್ಚಾಗಿ ಕ್ರತಿಗಳನ್ನೇ ಹಾಡುತ್ತಾರೆ ರಾಗ, ತಾಳ,
ಗತಿ, ಶೈಲಿ, ವಿಷಯ ಇವುಗಳಲ್ಲಿ ವಾಗ್ಗೇಯಕಾರನಿಗೆ ಸಂಪೂರ್ಣ ಸ್ವಾತಂತ್ರವಿರು
ವುದರಿಂದ ರಾಗಭಾವದ ವಿವಿಧ ಮುಖಗಳನ್ನು ರೂಪಿಸಲು ಈ ಬಗೆಯ ರಚನೆಗಳನ್ನೇ
ಹೆಚ್ಚಾಗಿ ಗಿ ರಚಿಸಿದ್ದಾರೆ. ಕೃತಿಗಳು ಶುದ್ಧ ಸಂಗೀತದ ಉತ್ತಮ ನಿದರ್ಶನಗಳು,
ತ್ಯಾಗರಾಜರಿಗಿಂತ ಹಿಂದಿನ ತಲೆಮಾರಿನ ಮಾರ್ಗದರ್ಶಿ ಶೇಷಯ್ಯಂಗಾರ್
ಶ್ರೀನಿವಾಸ, ಘನಂಶೀನಯ್ಯ ಮುಂತಾದವರು ಕೃತಿಯ ಪ್ರವರ್ತಕರೆಂದು ಸುಬ್ಬರಾಯ
ದೀಕ್ಷಿತರು ಹೇಳಿದ್ದಾರೆ. ಕರ್ಣಾಟಕದಲ್ಲಿ ಈ ಬಗೆಯ ರಚನೆಯು ಹದಿನೈದನೆ
ಶತಮಾನದಿಂದ ಬಳಕೆಯಲ್ಲಿದೆ ಎನ್ನಬಹುದು. ಮೊದಲು ಈ ಬಗೆಯ ರಚನೆ
ಮಾಡಿದವರು ನರಹರಿತೀರ್ಧ, ಶ್ರೀಪಾದರಾಯರ ಕಾಲದಿಂದ
ಕೃತಿಗಳನ್ನು ರಚಿಸುತ್ತ ಬಂದಿದ್ದಾರೆ.
 
ಹರಿದಾಸರು
 
ಪುರಂದರದಾಸರು ಕೃತಿ ಎಂಬ ಗೇಯ
ರಚನೆಯನ್ನೂ, ಕೀರ್ತನೆ ಎಂಬ ಶಬ್ದವನ್ನೂ ಪ್ರಪ್ರಥಮವಾಗಿ ಬಳಸಿದ್ದಾರೆ.
ಕೃತಿಗಳ ರಚನೆಯು ಪ್ರಾರಂಭವಾದ ಮೇಲೆ ಹಿಂದಿನ ಹಲವು ರಚನಾ ವಿಶೇಷಗಳು
ರೂಢಿಯಲ್ಲಿ ನಿಂತು ಹೋದವು. ಕೃತಿಯ ಮುಖ್ಯ ಗುಣ ಅದರಲ್ಲಿರುವ ಸಂಗೀತ,
 
ಜನ್ಯರಾಗ,