This page has not been fully proofread.

೨೩೦
 
ಸಂಗೀತ ಪಾರಿಭಾಷಿಕ ಕೋಶ
 
ಕಿಂಕಿಣಿಜಾಲ - ನರ್ತನ ಮಾಡುವವರು ನಡುವಿಗೆ ಹಾಕಿಕೊಳ್ಳುವ ಗೆಜ್ಜೆ
 
ಉದ್ಯಾಣ.
 
ಕಿಣ್ಣರಂತಂಬೂರಿಗೆ ಬಳಕೆಗೆ ಬರುವ ಮುನ್ನ ಬಟ್ಟಲುಗಳಂತಿದ್ದ ಈ
ತಾಳಗಳನ್ನು ಬಳಸುತ್ತಿದ್ದರು. ಇದು ಶ್ರುತಿ ಮತ್ತು ಲಯವಾದ್ಯವಾಗಿತ್ತು. ಇದರ
ಶ್ರುತಿಯು ಆಧಾರಶ್ರುತಿಯಾಗಿದ್ದು ಗಾಯಕನಿಗೆ ಸರಿಯಾದ ಶ್ರುತಿಯಲ್ಲಿ ಹಾಡಲು
ಸಹಾಯಕವಾಗಿತ್ತು. ಪವಿತ್ರಗಾನವು ಹೆಚ್ಚಾಗಿ ರೂಢಿಯಲ್ಲಿದ್ದ ಕಾಲದಲ್ಲಿ ಇದು
ಬಳಕೆಯಲ್ಲಿತ್ತು. ತೇವಾರಂಗಳ ಕಾಲದಲ್ಲಿ ಇದನ್ನು ಬಳಸುತ್ತಿದ್ದರು.
ಗೋಪಾಲಕೃಷ್ಣ ಭಾರತಿಯು ( ನಂದಾರ್ ಚರಿತ್ರ 'ದಲ್ಲಿ ಈ ವಾದ್ಯವನ್ನು
ನಂದನಾರ್ ಬಳಸುತ್ತಿದ್ದರೆಂದು ಹೇಳಿದ್ದಾರೆ.
 
ಕೆಂದುಳಿ-ಇದು ಜಯದೇವ ಕವಿಯ ಜನ್ಮಸ್ಥಳವೆಂದು ಹೇಳಲಾದ ಸ್ಥಳ.
ಇದಕ್ಕೆ ಕಿಂದುಬಿಲ್ವ ಮತ್ತು ದಿಂದುಬಿಲ್ವ ಎಂಬ ಹೆಸರುಗಳೂ
ಬಂಗ್ಲಾದೇಶದಲ್ಲಿದೆ.
 
ಇವೆ.
 
ಈಗಿನ
 

 
೭ನೆಯ ಅಷ್ಟಪದಿಯಲ್ಲಿ ಈ ಹೆಸರು ಉಕ್ತವಾಗಿದೆ.
ಗ್ರಾಮವು ಒರಿಸ್ಸಾ ದೇಶದಲ್ಲಿದೆಯೆಂದು ಕೆಲವರ ಅಭಿಪ್ರಾಯ.
 
ಕ್ರಿಯ- ಕಾಲವನ್ನು ಎಣಿಸುವ ವಿಧಾನಕ್ಕೆ ಕ್ರಿಯೆ ಎಂದು ಹೆಸರು.
ಘಾತದಿಂದ ಅಥವಾ ಚಪ್ಪಾಳೆಯಿಂದ ಕಾಲಗಣನೆ ಮಾಡುವುದು ಸಶಬ್ದ ಕ್ರಿಯೆ.
ಸದ್ದಿಲ್ಲದೆ ಲೆಕ್ಕಹಾಕುವುದು ನಿಶ್ಯಬ್ದ ಕ್ರಿಯೆ. ಇವಲ್ಲದೆ ಮಾರ್ಗಕ್ರಿಯೆಗಳೂ, ದೇಶ್ಯ
ಕ್ರಿಯೆಗಳೂ ಇವೆ. ಇವುಗಳಲ್ಲೂ ಸಶಬ್ದ ಮತ್ತು ನಿಶ್ಯಬ್ದ ಕ್ರಿಯೆಗಳಿವೆ.
 
ಕ್ರಿಯಾಂಗ
ಈ ರಾಗಗಳನ್ನು ಶಾರ್ಙ್ಗದೇವನು ರಾಗಾಂಗ, ಉಪಾಂಗ
ಭಾಷಾಂಗ ಮತ್ತು ಕ್ರಿಯಾಂಗ ರಾಗಗಳೆಂದು ವರ್ಗೀಕರಣ ಮಾಡಿದ್ದಾನೆ.
ಪಾರ್ಶ್ವದೇವನ ಸಂಗೀತಸಮಯಸಾರವೆಂಬ ಗ್ರಂಥದಲ್ಲಿ ಕ್ರಿಯಾಂಗ ಸಂಪೂರ್ಣ,
ಕ್ರಿಯಾಂಗ ಷಾಡವ ಮತ್ತು ಕ್ರಿಯಾಂಗ ಔಡವ ರಾಗಗಳೆಂಬ ವರ್ಗಿಕರಣವಿದೆ.
ಕ್ರಿಯಾಂಗ ರಾಗದ ಸ್ವರೂಪದ ವಿಚಾರವಾಗಿ ವಿದ್ವಾಂಸರಲ್ಲಿ ಏಕಾಭಿಪ್ರಾಯವಿರಲಿಲ್ಲ.
ಕ್ರಿಯಾಂಗ ರಾಗಗಳೆಂದರೆ ಶೋತೃಗಳಲ್ಲಿ ಉತ್ಸಾಹವನ್ನು ತುಂಬುವ ರಾಗಗಳೆಂದು
ಸಂಗೀತ ದರ್ಪಣವೆಂಬ ಗ್ರಂಧಕರ್ತನು ಅಭಿಪ್ರಾಯ ಪಟ್ಟಿದ್ದಾನೆ.
 
ಇತರರ
 
ಅಭಿಪ್ರಾಯದಂತೆ ಅವು ವಿಶೇಷ ಸಂಚಾರಗಳಿಂದ ವ್ಯಕ್ತವಾಗುವ ರಾಗಗಳೆಂದೂ,
ಕೆಲವರು ಅವು ವಕ್ರರಾಗಗಳೆಂದೂ, ಕೆಲವರು ಅವು ದೇವಕ್ರಿಯ,
ಸುಕ್ರಿಯ,
ಗಮಕಕ್ರಿಯ ಇತ್ಯಾದಿ ಕೊನೆಯಲ್ಲಿ ಕ್ರಿಯ ಎಂಬ ಪದಬರುವ ಹೆಸರಿನ ರಾಗಗಳೆಂದು
ಹೇಳಿದ್ದಾರೆ. ಜನಕ, ಜನ್ಯರಾಗ ಪದ್ಧತಿಯು ಬಳಕೆಗೆ ಬಂದ ಮೇಲೆ ಕ್ರಿಯಾಂಗರಾಗ
ಎಂಬ ಹೆಸರು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.
 
ಕ್ರಿಯಾಂಗ ಔಡವ
 
ಹೇಳಿರುವ ಕ್ರಿಯಾಂಗ ರಾಗಗಳ ವರ್ಗಕ್ಕೆ ಸೇರಿದ ಒಂದು ಔಡವರಾಗ.
 
ಪಾರ್ಶ್ವದೇವನ ಸಂಗೀತಸಮಯಸಾರವೆಂಬ ಗ್ರಂಥದಲ್ಲಿ