2023-07-03 07:42:18 by jayusudindra
This page has been fully proofread once and needs a second look.
ಇದೊಂದು ಬಗೆಯ ಗಮಕ,
ಕಂಪವಿಹೀನರಾಗ
ಸ್ವರಗಳ ಕಂಪನವಿಲ್ಲದೆ ಪ್ರತಿರೂಪವು ವ್ಯಕ್ತ
ಅವಕಾಶವುಂದ ಕೆಲವು
ರಾಗಗಳಲ್ಲಿ ಸೂಕ್ತವಾದ ಗಮಕಗಳನ್ನು ಬಳಸಿ ಹಾಡಲು
ಸ್ವರಗಳಿಗೆ ಮಾತ್ರ ಗಮಕಗಳನ್ನು ಬಳಸಿ ಹಾಡಬಹುದಾದ ರಾಗಗಳು ಅರ್ಧಕಂಪಿತ
ರಾಗಗಳು. ಎಲ್ಲಾ ಸ್ವರಗಳನ್ನೂ ಗಮಕ ಯುಕ್ತವಾಗಿ ಹಾಡಬಹುದಾದ ರಾಗಗಳು
ಮುಕ್ತಾಂಗ ಕಂಪಿತ ಅಥವಾ ಸಂಪೂರ್ಣ ಕಂಪಿತರಾಗಗಳು. ಈ ವರ್ಗೀಕರಣವು
ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ಉಕ್ತವಾಗಿವೆ.
ಕಂಪಿತ
ಇದು ಹೆಚ್ಚಾಗಿ ಬಳಸಲ್ಪಡುವ ಗಮಕ,
ಒಂದು ಸ್ವರವನ್ನು
ಒಂದಕ್ಷರಕಾಲ ಕಂಪಿಸಿ ಅದರ ಮೇಲಿನ ಸ್ವರದ ಛಾಯೆಯು ಬರುವಂತೆ ಮಾಡುವುದು
ಕಂಪಿತ. ಇದು ದೀರ್ಘ ಅಥವಾ ಪ್ರಸ್ವ, ಘನ ಅಥವಾ ನಯ ಆಗಿರಬಹುದು.
ಶ್ರೀರಾಗದಲ್ಲಿ ಗಾಂಧಾರದ ಕಂಪನವು ಪ್ರಸ್ವವಾಗಿದೆ. ಆನಂದಭೈರವಿ ಮತ್ತು
ಧನ್ಯಾಸಿ ರಾಗಗಳಲ್ಲಿ ಅದರ ಕಂಪನವು ದೀರ್ಘವಾಗಿರುತ್ತದೆ.
ಕಂಪಿತಸ್ವರ
ಕಂಪಿಸಿ ಹಾಡಲಾಗುವ ಸ್ವರ
ಆನಂದಭೈರವಿ ರಾಗ ನಿಷಾದವು ಇದಕ್ಕೆ ಉದಾಹರಣೆ.
ಅಠಾಣ ರಾಗದ ಗಾಂಧಾರ,
ಕಂಸವಧ
ಇದು ಕಿಳಿಮಾನೂರು ಕೋಯಿಲ್ ತಂಪುರಾನ್ ರಚಿಸಿರುವ
ಒಂದು ಕಥಕಳಿ ನೃತ್ಯರೂಪಕ.
ಕಂಸಾರಿ
ಈ ರಾಗವು ೮ನೆ ಮೇಳಕರ್ತ ಹನುಮ ತೋಡಿಯ ಒಂದು
ಜನ್ಯರಾಗ,
ಕಿಂಜಿನ್
ಇದು ಬೊಂಬೆ
ಕಲಾವಿದನು ತೆರೆಯ ಹಿಂದೆ ತಾನೇ ನಾಟ್ಯವಾಡುತ್ತಾನೆ. ಮತ್ತು ಕಾಣದಂತೆ
ಬೊಂಬೆಗೆ ಕಟ್ಟಿರುವ ಸೂತ್ರಗಳನ್ನು ಆಡಿಸುವುದರ ಮೂಲಕ ಪರದೆಯ ಮುಂದೆ
ತಾನಾಡುವ ನಾಟ್ಯವನ್ನು ಆಡಿಸುತ್ತಾನೆ. ಬೊಂಬೆಯನ್ನು ಚೆನ್ನಾಗಿ
ಅಲಂಕರಿಸಿರುತ್ತಾರೆ. ಅದು ಕಣ್ಣಿನ ಗುಡ್ಡೆಗಳನ್ನೂ ಸಹ ಆಡಿಸುತ್ತದೆ.
ಹರಿಶ್ಚಂದ್ರನ ಕಥೆಯನ್ನು ಆಡಿಸುವ ಮೊದಲು ಈ ಬೊಂಬೆಯನ್ನು ೧೫ ನಿಮಿಷ
ಆಡಿಸಿ ಜಾವಳಿಗಳು ಮತ್ತು ಪ್ರೇಮಪದ್ಯಗಳನ್ನು ಹಾಡಲಾಗುವುದು. ಆಗ
ಬೊಂಬೆಯು ಚಂದ್ರಮತಿಯಂತೆ ಕಾಣುತ್ತದೆ. ತಮಿಳು ನಾಡಿನ ಕಿಂಜಿನ್
ರಾಧಾಕೃಷ್ಣ ಅಯ್ಯರ್, ಶ್ರೀವಾಂಜಿಯಂ ಅಯ್ಯ ಎಂಬುವರು ಈ ಕಲೆಯಲ್ಲಿ
ನಿಷ್ಣಾತರಾಗಿದ್ದರು.
ಕಿಂಜಿನ್ ನಟನಂ
ಕಥಕ್ ನೃತ್ಯವನ್ನು ತಮಿಳು ನಾಡಿನಲ್ಲಿ ಈ
ಕರೆಯುತ್ತಾರೆ. ತಂಜಾವೂರಿನ ದೊರೆ ಸರ್ಫೋಜಿ ಭರತನಾಟ್ಯ, ಮೋಡಿನಾಟ್ಯ,
ಕಿಂಜಿನ್‌ನಾಟ್ಯ ಇತ್ಯಾದಿ ವಿವಿಧ ನಾಟ್ಯಕಲೆಯ ಪೋಷಕರಾಗಿದ್ದರು.
4