2023-07-03 07:40:39 by jayusudindra
This page has been fully proofread once and needs a second look.
ನಾಗರತ್ನಮ್ಮನ ತಾಯಿ ನಂಜುಂಡಾಸಾನಿ
ಆ ಕಾಲದಲ್ಲಿ ಖ್ಯಾತಳಾಗಿದ್ದ ಸಂಗೀತ ವಿದುಷಿ, ಭರತನಾಟ್ಯದಲ್ಲೂ ಪ್ರವೀಣೆಯಾಗಿದ್ದು
ಅನೇಕ ಸಭೆಗಳಲ್ಲಿ ಜಯಪತ್ರಗಳಿಸಿದ್ದರು. ನಾಗರತ್ನಮ್ಮ ಪ್ರಸಿದ್ಧಳಾದ ಗಾಯಕಿ
ಯಾಗಿದ್ದರು. ಇವರ ಸಹೋದರ ಪುಟ್ಟಸ್ವಾಮಯ್ಯ ಪೀಟಿಲು ವಾದನಕ್ಕೆ ಹೆಸರು
ವಾಸಿಯಾಗಿದ್ದರು. ಇವರು ಈ ಶತಮಾನದ ಆದಿಯಲ್ಲಿದ್ದರು.
೨೨೮
ಕಂಡದೇವಿ, ಎಸ್. ಅಳಗರ್ ಸ್ವಾಮಿ (೧೯೨೫)
ಇವರು ತಮಿಳುನಾಡಿನ
ರಾಮನಾಥಪುರಂ ಜಿಲ್ಲೆಯ ಕಂಡದೇವಿ ಗ್ರಾಮದಲ್ಲಿ ಸುಂದರರಾಜ ಅಯ್ಯಂಗಾರ್
ಎಂಬುವರ ಪುತ್ರರಾಗಿ ಜನ್ಮತಾಳಿದರು. ೧೯೩೯ರಲ್ಲಿ ಚಿಕಪ್ಪ ಚೆಲ್ಲಂ ಅಯ್ಯಂಗಾರರಲ್ಲಿ
ಪಿಟೀಲುವಾದನದಲ್ಲಿ ಪ್ರಥಮ ಶಿಕ್ಷಣವನ್ನು ಪಡೆದು ಪ್ರೌಢಶಿಕ್ಷಣಕ್ಕಾಗಿ ೧೯೪೦ರಲ್ಲಿ
ಸಂಗೀತ ಕಲಾನಿಧಿ ಮೈಸೂರು ಟಿ ಚೌಡಯ್ಯನವರನ್ನು
ಅವರಂತೆಯೇ ಏಳು
ತಂತಿ ಪಿಟೀಲನ್ನು ನುಡಿಸುತ್ತಿದ್ದರು.
ಖಚಿತವಾಗಿ ನುಡಿಸಲು ಸಾಧ್ಯವಾಗದೆ ೧೯೪೫ರಲ್ಲಿ ನಾಲ್ಕು ತಂತಿ ಪಿಟೀಲಿನ ಮರೆ
ಹೊಕ್ಕು ಪ್ರಾವೀಣ್ಯವನ್ನು ಪಡೆದರು. ಮೈಸೂರಿನ ಬಿಡಾರಂ ಕೃಷ್ಣಪ್ಪನವರ ಪ್ರಸನ್ನ
ಸೀತಾರಾಮ ಮಂದಿರದಲ್ಲಿ ಮೊದಲ ಬಾರಿಗೆ ಚೌಡಯ್ಯನವರೊಂದಿಗೆ ನುಡಿಸಿದರು,
ಅಲ್ಲಿಂದ ಎಲ್ಲ ಖ್ಯಾತ ವಿದ್ವಾಂಸರೊಂದಿಗೆ ಕಲೆತು ನುಡಿಸುತ್ತ ಬಂದಿದ್ದಾರೆ.
ಎಂ. ಎಸ್. ಸುಬ್ಬಲಕ್ಷ್ಮಿ ಯವರೊಡನೆ ೧೯೭೪ರಲ್ಲಿ ಮನಿಲಾ, ಟೋಕಿಯೋ,
ಒಸಾಕಾ, ಹಾಂಕಾಂಗ್, ಬ್ಯಾಂಕಾಕ್ ಮುಂತಾದ ಸ್ಥಳಗಳಿಗೆ ಹೋಗಿ ಬಂದರು.
ಕಂಚಿ ಕಾಮಕೋಟಿ ಜಗದ್ಗುರುಗಳು
ಇವರಿಗೆ ತಂತ್ರನಾದ
ಇಂಪು, ಸೌಮ್ಯ, ಸಂಪ್ರದಾಯಬದ್ಧತೆ
ಇವರು ಈಗಿನ ಒಬ್ಬ ಉತ್ತಮ ಕಲಾವಿದರು.
ಕಂದ
ಸಂಸ್ಕೃತದ ಆರ್ಯಾಗೀತಿ ಅಥವಾ ಗಾಥಾವೃತ್ತವು ಪ್ರಾಕೃತದಲ್ಲಿ
ಸ್ಕಂಧಕವೆಂದಾಗಿ, ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ ವಿಶೇಷವಾಗಿ ಕಂದ ಎಂದಾಗಿದೆ.
ಕಂದಪದವು ಮಾತ್ರಾಗಣಗಳಿಂದ ಕೂಡಿರುವ ಒಂದು ಪದ್ಯಜಾತಿ, ಇದರಲ್ಲಿ ನಾಲ್ಕು
ಸಾಲುಗಳಿರುತ್ತವೆ. ಒಂದು ಮತ್ತು ಮೂರನೆಯ ಸಾಲುಗಳು ಸಮನಾಗಿಯೂ,
ಎರಡು ಮತ್ತು ನಾಲ್ಕು ಸಾಲುಗಳು ಮತ್ತೊಂದು ಸಮನಾಗಿಯೂ ಇರುತ್ತವೆ.
ಒಂದು ಮತ್ತು ಮೂರನೆಯ ಚರಣಗಳಲ್ಲಿ ನಾಲ್ಕು ಮಾತ್ರೆಯ ಮೂರು ಗಣಗಳೂ,
ಎರಡು ಮತ್ತು ನಾಲ್ಕನೆಯ ಚರಣಗಳಲ್ಲಿ ನಾಲ್ಕು ಮಾತ್ರೆಯ ಐದು ಗಣಗಳೂ
ಬರುತ್ತವೆ.
ಆಶ್ರಯಿಸಿದರು
ಕೃತಿ ಭೂಷಣ ಭೂಷಿತಾಂಗಿ ಭಾಸತಿ ಭುವನ
ಸ್ತುತ ಕಾಂತಿ ಗುಣಮಿಳಿತಮ