This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ವಿದ್ವಾಂಸರು ಕಷ್ಟಕರವಾದ ಪಲ್ಲವಿಗಳನ್ನು ರಚಿಸಿ ವಿದ್ಯಾಮದದಿಂದ ಕೊಬ್ಬಿದ

ಮೃದಂಗ ಮತ್ತು ಇತರ ಪಕ್ಕವಾದ್ಯ ವಿದ್ವಾಂಸರನ್ನು ಅಡಗಿಸಲು ಹಾಡುತ್ತಿದ್ದುದುಂಟು.
 

ಒಂದು ಸಲ ರಾಮನಾಡಿನಲ್ಲಿ ಸಂಗೀತ ವಿದ್ವಾಂಸರ ಸಭೆಯಲ್ಲಿ ಕೃಷ್ಣಯ್ಯರ್

೬೪ ಕಳೆಗಳ ಒಂದು ಪಲ್ಲವಿಯನ್ನು ಹಾಡಿ ಮಹಾವೈದ್ಯನಾಥ ಅಯ್ಯರ್‌ನ್ನು

ಹಾಡುವಂತೆ ಹೇಳಿದರು. ಸಾಹಿತ್ಯದಿಂದ ತುಂಬಿದ ವಲ್ಲವಿಯ ಸಾಹಿತ್ಯವನ್ನು

ಇನ್ನೊಂದು ಸಲ ಹೇಳುವಂತೆ ವೈದ್ಯನಾಥ ಅಯ್ಯರ್ ಕೇಳಿದರು. ಇಂತಹ

ಸರಳವಾದ ಪಲ್ಲವಿಯ ಸಾಹಿತ್ಯವನ್ನು ಇನ್ನೊಂದು ಸಲ ಹೇಳಬೇಕೇ ಎಂದು

ಕೃಷ್ಣಯ್ಯರ್ ಉದ್ಧರಿಸಿದರು. ನಿಮ್ಮ ಪಲ್ಲವಿಯು ರೂಢಿಯಲ್ಲಿರುವ ನಿಯಮಗಳನ್ನು

ಅನುಸರಿಸಿಲ್ಲ ಅದು ಒಂದು ತಮಿಳು ಪದ್ಯದಂತಿದೆ ಎಂದರಂತೆ ವೈದ್ಯನಾಥ ಅಯ್ಯರ್.

ಹೀಗೆ ಕೃಷ್ಣಯ್ಯರಿಗೆ ಪ್ರಸಿದ್ಧ ವಿದ್ವಾಂಸರಿಗೆ ಸವಾಲುಹಾಕಿ ಅವರನ್ನು ಸಂದಿಗ್ಧ

ಪರಿಸ್ಥಿತಿಯಲ್ಲಿ ಸಿಕ್ಕಿಸುವುದು ಒಂದು ಹವ್ಯಾಸವಾಗಿ, ಆದ್ದರಿಂದ ಇವರನ್ನು

ಮುರುಕ್ಕು ಮೀಸೆ ಜಿಗಿ ಬಿಗಿ ಘನನಯ ದೇಶ್ಯ ರಟ್ಟೆ ಪಲ್ಲವಿ ಕೃಷ್ಣಯ್ಯರ್ " ಎಂದು

ಕರೆಯುತ್ತಿದ್ದರು.
 

ರಟ್ಟೆ ಪಲ್ಲವಿ ಎಂದರೆ ಎರಡು ಬೇರೆ ಬೇರೆ ಪಲ್ಲವಿಗಳನ್ನು ಒಂದಾಗಿ

ಇದಕ್ಕೆ ಉದಾಹರಣೆಗಳು ಕಡಿಮೆ.
 
ಹೆಣೆಯುವುದು.
 

ಹಾಡುವವರಂತೂ ತೀರ
 
ಕಡಿಮೆ ರಾಗಮಾಲಿಕೆಯ ಮಾದರಿಯಲ್ಲಿ ಬೇರೆ ಬೇರೆ ರಾಗಗಳಲ್ಲಿರುವ ಪಲ್ಲವಿಗಳನ್ನು

ರಚಿಸಿರುವವರಲ್ಲಿ ಕೃಷ್ಣಯ್ಯರ್ ಮೊದಲಿಗರು ಇಂತಹ ಪಲ್ಲವಿಗೆ ಒಂದು ಪ್ರಸಿದ್ಧ

ಉದಾಹರಣೆ-* ಶಂಕರಾಭರಣನೈ ಅಯ್ಯತೊಡಿವಾಡಿ ಕಲ್ಯಾಣಿ ದರ್ಬಾರ್‌."

ಇದರಲ್ಲಿ ಶಂಕರಾಭರಣ, ತೋಡಿ, ಕಲ್ಯಾಣಿ ಮತ್ತು ದರ್ಬಾರ್ ರಾಗಗಳ ಹೆಸರುಗಳನ್ನು

ಸಾಹಿತ್ಯದಲ್ಲಿ ಅರ್ಥಗರ್ಭಿತವಾಗಿ ಸೇರಿಸಿರುವುದು ಗಮನಾರ್ಹ. ಪಟ್ಟಂ ಸುಬ್ರಹ್ಮಣ್ಯ

ಅಯ್ಯರ್‌ರವರಂತೆ ಕೃಷ್ಣಯ್ಯರಿಗೆ ತುಂಬಿದ ಗಂಡು ಶಾರೀರವಿತ್ತು. ಅವರಂತೆಯೇ

ಸ್ಥಾಯಿಶ್ರುತಿಯಲ್ಲಿ ಹಾಡುತ್ತಿದ್ದರು ಇವರು ಸ್ವನಾಮ ಮುದ್ರಕಾರರು, ಇವರ

ಕೆಲವು ರಚನೆಗಳಲ್ಲಿ ಒಳ್ಳೆಯ ಚಿಟ್ಟೆ ಸ್ವರಗಳೂ, ಕಮಲಾಕ್ಷಿ ಎಂಬವರ್ಣದಲ್ಲಿ ಉತ್ತಮ

ಸ್ವರಾಕ್ಷರಗಳೂ ಇವೆ. ಇವರ ಕೆಲವು ಪ್ರಸಿದ್ಧ ರಚನೆಗಳು

ಕಮಲಾಕ್ಷಿ

ಸಾಮಿಕಿಸರಿ
 
ತಾನವರ್ಣ
 
ರುಂಪ
 
ಪದವರ್ಣ
 
ಪದವರ್ಣಆದಿ
 
ಪದಜಾತಿವರ್ಣ
 

ಕೃತಿ
 

 
-
 
ಎಂಗೋವೈಭವವು
ಶ್ರೀಪಾರ್ವತಿ
ಭಕ್ತಿ ಮಾರ್ಗಮ
 

ನೀವೇನನ್ನು
ಜೀವಿನೆರುಗ
 
ಕಂಬರಾಮಾಯಣತಿಲ್ಲಾನ
 
೨೨೭
 

ಆಟ
 
ಆದಿ
 
ಆದಿ
 
ರೂಪಕ
 
ಕಾಂಭೋಜಿ
 
ಶಂಕರಾಭರಣ
 

ಕೇದಾರ
 
ಶ್ರೀರಾಗ
 
ಸರಸಾಂಗಿ
 

ಕಾಂಭೋಜಿ
 
ಮಂದಾರಿ
 

ತೋಡಿ