2023-07-03 07:19:02 by jayusudindra
This page has been fully proofread once and needs a second look.
೨೨೫
ಭರತನಾಟ್ಯಶಾಸ್ತ್ರದಂತೆ ಸುಕುಮಾರ ವಸ್ತ್ರಮಾಲ್ಯಾದಿ
ಗಳಿಂದ ಚಿತ್ರಿತವಾದ ಗೀತ ನೃತ್ಯಾದಿಗಳಧಿಕತೆಯಿಂದ ಕೂಡಿದ ಸ್ತ್ರೀಯರಿಂದ
ಪ್ರಯೋಗಿಸಲ್ಪಡುವ, ಕಾಮೋಪಭೋಗಗಳಿಂದ ಜನಿಸುವ ಭಾವುಕತೆಯ ರೀತಿಯು
ಕೈಶಿಕೀವೃತ್ತಿ. ಇದರಲ್ಲಿ ನರ್ಮ, ನರ್ಮಸ್ಪಂಜ, ನರ್ಮಸ್ಫೋಟ, ನರ್ಮಗರ್ಭ ಎಂಬ
ನಾಲ್ಕು ಬಗೆಗಳಿವೆ.
ಕೊತ್ತವಾಶಲ್
ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಮಾಯಾ
ವರಂ-ತಿರುವಾರೂರು ರೇಲ್ವೆ ಮಾರ್ಗದಲ್ಲಿ ಪೂಂತೋಂ ಎಂಬ ನಿಲ್ದಾಣ
ಣದ ಸಮೀಪ
ದಲ್ಲಿರುವ ಗ್ರಾಮ. ತಾನವರ್ಣಗಳ ಪ್ರಸಿದ್ಧ ವಾಗ್ಗೇಯಕಾರರಾದ ವೆಂಕಟ
ರಾಮಯ್ಯರ್‌ರವರ ಜನ್ಮಸ್ಥಳ. ಇವರು ವೆಂಕಟೇಶ ಎಂಬ ಅಂಕಿತವನ್ನು ಬಳಸಿದ್ದಾರೆ.
ಕೊಡಿ ಮದ್ದಲೆ
ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಗಿರಿಜನರು
ಬಾರಿಸುವ ಮೃದಂಗವನ್ನು ಹೋಲುವ ವಾದ್ಯ. ಇದನ್ನು ಮಾರಿಯಮ್ಮನ
ದೇವಾಲಯಗಳಲ್ಲಿ ಉತ್ಸವಗಳ ಕಾಲದಲ್ಲಿ ಬಾರಿಸುತ್ತಾರೆ. ಕೊಡಿ, ಕೊಡಿ, ಕೊಡಿಂತ
ಎಂದು ಬಾರಿಸುವುದರಿಂದ ಈ ವಾದ್ಯಕ್ಕೆ ಕೊಡಿ ಮದ್ದಲೆ ಎಂಬ ಹೆಸರು ಬಂದಿದೆ.
ಕೋಕಿಲಪದಗಳು
ಇವು ತೆಲುಗು ಯಕ್ಷಗಾನಗಳಲ್ಲಿ ಬರುವ ಪದಗಳು
ಕೋಗಿಲೆಯನ್ನು ಸಂಬೋಧಿಸಿ ರಚಿಸಿರುವ ಪದಗಳು.
ಕೋಗಿಲೆಹಾಡು
ಕೋಗಿಲೆಯನ್ನು ಸಂಬೋಧಿಸಿ ತಮಿಳಿನಲ್ಲಿ ಮಾಣಿಕ್ಯ
ವಾಚಕರ್ ಹಾಡಿರುವ ಹತ್ತು ಹಾಡುಗಳು,
ಕೋಲಿನೃತ್ಯ
ಇದು ಮಹಾರಾಷ್ಟ್ರ ಮತ್ತು ಪಶ್ಚಿಮ ತೀರಪ್ರದೇಶದ
ಕೋಲಿಬೆಸ್ತರ ನೃತ್ಯ.
ಕೋಲ್ಮಣಿ
ಇದೊಂದು ತಾಳವಾದ್ಯ ಮಲಬಾರಿನಲ್ಲಿ ಕಾಳಿಪೂಜೆಯಲ್ಲಿ
ಉಪಯೋಗಿಸುತ್ತಾರೆ. ಐದು ಜನರು ನೃತ್ಯವಾಡುತ್ತಾರೆ. ಹಿಡಿಯಿರುವ ಉದ್ದಕ್ಕೂ
ಸಣ್ಣ ಲೋಹದ ಚೂರುಗಳನ್ನು ಸೇರಿಸಿರುವ ಕೋಲನ್ನು ಹಿಡಿದು ಕುಣಿಯುತ್ತಾರೆ.
ಕೊಳತ್ತೂರು ರಾಮಕೃಷ್ಣ ಶಾಸ್ತ್ರಿ (೧೯೧೬)
ರಾಮಕೃಷ್ಣ ಶಾಸ್ತ್ರಿಗಳು
ಶಾಸ್ತ್ರಿಗಳ ಪುತ್ರರು. ವಿಶ್ವೇಶ್ವರ ಶಾಸ್ತ್ರಿಗಳು ವೇದಪಾಠಶಾಲೆಯ ಪ್ರಾಧ್ಯಾಪಕರಾಗಿ
ದ್ದರು. ರಾಮಕೃಷ್ಣ ಶಾಸ್ತ್ರಿ ತಮ್ಮ ಪ್ರಾರಂಭದ ಶಿಕ್ಷಣವನ್ನು ವೀಣೆನಾರಣಪ್ಪ
ನವರಲ್ಲ, ನಂತರ ಹಲವು ವರ್ಷಗಳ ಕಾಲ ರತ್ನಗಿರಿ ಸುಬ್ಬಾಶಾಸ್ತ್ರಿಯವರಲ್ಲ, ವೀಣೆ
ರಾಜಾರಾಯರಲ್ಲೂ ಹೆಚ್ಚಿನ ಶಿಕ್ಷಣ ಪಡೆದುದಲ್ಲದೆ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾ
ಭ್ಯಾಸ ಮಾಡಿ, ಮೊದಲು ಕೆನರಾ ಬ್ಯಾಂಕಿನ ಕಚೇರಿಯಲ್ಲಿ ಉದ್ಯೋಗಸ್ಥರಾಗಿ,
೧೯೪೩ರಲ್ಲಿ ಬೆಂಗಳೂರಿನ ಕಾರ್ಪೊರೇಷನ್ ಹೈಸ್ಕೂಲಿನಲ್ಲಿ ಅಧ್ಯಾಪಕರಾದರು.
೧೯೬೪ರಲ್ಲಿ ಸಂಗೀತದ ಉಪಾಧ್ಯಾಯರಾಗಿ ಕೆಲಸಮಾಡಿ ೧೯೭೪ರಲ್ಲಿ ನಿವೃತ್ತರಾದರು.