2023-07-03 07:16:42 by jayusudindra
This page has been fully proofread once and needs a second look.
ಈ ರಾಗವು ೫೮ನೆ ಮೇಳಕರ್ತ ಹೇಮವತಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ಕೈವಾರ ಪ್ರಬಂಧ
ಇದು ಮಧ್ಯಯುಗದಲ್ಲಿ ಪ್ರಚಲಿತವಾಗಿದ್ದ ಒಂದು
ಸಂಗೀತರಚನಾ ವಿಶೇಷ. ಇದರ ಮಾತುಗಳಲ್ಲಿ ಜತಿಗಳಿರುತ್ತವೆ.
ಕೈವೇಣಿ
ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
ಜನ್ಯರಾಗ,
೨೨೪
ಸ ರಿ ಮ ಪ ದ ಸ
ಅ
ಸ ದ ನಿ ದ ಮ ಪ ದ ಪ ಮ ಗ ರಿ ಸ
ಕೈಶಿಕ
(೧) ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಸ ಗ ಮ ದ ನಿ ಸ
ಸ ನಿ ದ ಮ ಗ ಮ ರಿ ಸ
ಅ
(೨) ರಾಮಾಯಣದಲ್ಲಿ ಉಕ್ತವಾಗಿರುವ ರಾಗ
(೩) ಕುಡುಮಿಯಾ ಮಲೈ ಸಂಗೀತ ಶಾಸನದಲ್ಲಿ ಉಕ್ತವಾಗಿರುವ ಏಳನೆಯ
ಕೈತಿಕಕಕುಭ
ಇದು ಸಂಗೀತರತ್ನಾ ಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ರಾಗ
ಕೈಶಿಕಿ
ಇದು ಪುರಾತನ ಸಂಗೀತ ಪದ್ಧತಿಯ ೧೮ ಶುದ್ಧ ಜಾತಿ ಅಥವಾ
ರಾಗಗಳಲ್ಲಿ ಒಂದು ರಾಗ
ಸಂಗೀತರತ್ನಾಕರ, ಬೃಹದ್ದೇಶಿ, ಸಂಗೀತಮಕರಂದ ಮತ್ತು
ಸಂಗೀತಸಮಯಸಾರವೆಂಬ ಗ್ರಂಥಗಳಲ್ಲಿ ಉಕ್ತವಾಗಿದೆ.
ಕೈಶಿಕಿಪಂಚಮ
ಇದು ಮಧ್ಯಮಗ್ರಾಮದ ಸ್ವರವಾಗಿತ್ತು. ಒಂದು
ಕೂದಲೆಳೆಯಷ್ಟು ಕಡಿಮೆಯಿರುವ ಪಂಚಮ ಸ್ವರ. ಇದಕ್ಕೆ ಮೃದು ಪಂಚಮ
ಮತ್ತು ತ್ರಿಶ್ರತಿಪಂಚಮವೆಂದು ಹೆಸರಿದೆ.
ಕೃ
ಕೈಶಿಲಂಬು-ಕೈಗೆಜ್ಜೆ
ಇದು ಟೊಳ್ಳಾಗಿರುವ ಅಂಡಾಕೃತಿಯ ಹಿತ್ತಾಳೆ
ಒಳಗಡೆ ಲೋಹದ ಚೂರುಗಳಿರುತ್ತವೆ. ಎರಡು ಕೈಬೆರಳುಗಳಿಗೆ ಇಂತಹ
ಬಳೆಗಳನ್ನು ಸಿಕ್ಕಿಸಿಕೊಂಡು ಮೇಲಕ್ಕೂ ಕೆಳಕ್ಕೂ ಮಾಡಿದಾಗ ಗೆಜ್ಜೆ ಯಂತೆ ಶಬ್ದ
ವಾಗುತ್ತದೆ. ಸರ್ವಲಘು ತಾಳವಾಗುತ್ತದೆ. ಇದು ಸಾಮಾನ್ಯವಾಗಿ ಗ್ರಾಮದೇವತೆ
ಗಳ ದೇವಾಲಯಗಳಲ್ಲಿದೆ. ಕರಗದ ಮೆರವಣಿಗೆಯಲ್ಲಿ ಇಂತಹ ಗೆಜ್ಜೆ ತಾಳ ಹಾಕು
ವವನು ಮುಂಭಾಗದಲ್ಲಿರುತ್ತಾನೆ ಇದಕ್ಕೆ ಪೂಜಾರಿ ಕೈಗೆಜ್ಜೆ ಎಂದು ಹೆಸರು.
ಕೈಲಾಸವೀಣಾ
ಪಂಡಿತಾರಾಧ್ಯ ಚರಿತ್ರೆಯಲ್ಲಿ ಪಾಲ್ಕುರಿಕೆಸೋಮನಾಥನು
ಹೇಳಿರುವ ಒಂದು ಬಗೆಯ ವೀಣೆ.
ತೆಗ