2023-06-27 10:45:51 by jayusudindra
This page has been fully proofread once and needs a second look.
6
ಸಂಗಿತಾಂಕುಶ ' ಎಂಬ ಮೂರು ಸಂಗೀತ ಶಾಸ್ತ್ರಗ್ರಂಥಗಳನ್ನು ರಚಿಸಿದನು.
ಆನುದ್ರುತ
ತಾಳದ ಆರು ಅಂಗಗಳಲ್ಲಿ ಒಂದು
==
ಒಂದು ಅಕ್ಷರ ಕಾಲವು ಇದರ ಕಾಲ ಪ್ರಮಾಣ. ಇದನ್ನು ಒಂದು ಘಾತದಿಂದ
ಸೂಚಿಸಲಾಗುವುದು.
ಅನುದ್ರುತಮೇರು
ಚತುರ್ದಶತಾಳ ಪ್ರಸ್ತಾರಗಳಲ್ಲಿ ಒಂದು ಪ್ರಸ್ತಾರ
ವಿಶೇಷದ ಹೆಸರು
೧೭
ಅನುಪ್ರಾಸ
ಕೆಲವು ರಚನೆಗಳ ಮಧ್ಯಭಾಗದಲ್ಲಿ ಕಂಡು ಬರುವ ಪ್ರಾಸ.
ಇದು ಅಂತ್ಯ ಪ್ರಾಸ ಮತ್ತು ದ್ವಿತೀಯಾಕ್ಷರ ಪ್ರಾಸದಿಂದ ಬೇರೆಯಾದುದು ಇದು
ಕೀರ್ತನೆಗೆ ಮೆರುಗು ಕೊಡುತ್ತದೆ.
ಅನುಪಲ್ಲವಿ
ಕರ್ಣಾಟಕ ಸಂಗೀತದ ರಚನಾ ವಿಶೇಷಗಳಾದ ಕೃತಿ,
ವರ್ಣ, ಪದ ಮತ್ತು ಇತರ ವಿಧವಾದ ರಚನೆಗಳಲ್ಲಿರುವ ಪ್ರೀತಿಯ ಭಾಗ, ಇದು
ಪಲ್ಲವಿಯಷ್ಟು ಇರಬಹುದು ಅದರ ಎರಡರಷ್ಟಿರಬಹುದು. ಪಲ್ಲವಿ ಮತ್ತು
ಅನುವಲ್ಲವಿಯ ಪ್ರಾರಂಭದ ಸ್ವರಗಳಿಗೆ ಖಚಿತವಾದ ಸಂಬಂಧವಿರುತ್ತದೆ. ಇವು ಒಂದೇ
ಬಗೆಯ ಸ್ವರಗಳಾಗಿರಬಹುದು ಅಥವಾ ಒಂದು ಸ್ವರಸಪ್ತಕದ ಸ್ವರಗಳಾಗಿರಬಹುದು.
ಅಥವಾ ಪರಸ್ಪರ ಸಂವಾದಿ ಸ್ವರಗಳಾಗಿರಬಹುದು. ಪರಸ್ಪರ ಅನುವಾದಿ ಸ್ವರಗಳಿರುವುದು
ಅನೂಪ ಸಂಗೀತಾಂಕುಶ
ಭಾವಭಟ್ಟ ವಿರಚಿತವಾದ ಒಂದು ಸಂಗೀತ
ಶಾಸ್ತ್ರಗ್ರಂಥ.
ಅನುಭಾವ-
ಅನುಭಾವ
ಸ್ವಹೇತುವಾಗಿ
ಭೂವಿಕ್ಷೇಪಾದಿಗಳಿಂದ ಹೊರಚೆಲ್ಲುವುದೇ ಅನುಭಾವ. ಅಂದರೆ ಮನಸ್ಸಿನ ಭಾವನೆ
ಗಳನ್ನು ಪ್ರಕಟಿಸುವ ರೀತಿಯು ಅನುಭಾವ. ಇದು ನಾಲ್ಕು ವಿಧವಾಗಿದೆ.
(೧) ಚಿತ್ರಜಾನುಭಾವ-ಶೋಭೆ, ಮುಖಕಾಂತಿ, ಮಾಧುರ್ಯ,
ಧೈರ್ಯ, ಔದಾರ್ಯ, ಉದಾಸೀನ, ಅವಹೇಳನ ಮುಂತಾದ ಮನಸ್ಸಿನ ಭಾವನೆ
ಗಳನ್ನು ಪ್ರಕಾಶಗೊಳಿಸುವುದು ಚಿತ್ತ ಜಾನುಭಾವ
(೨) ಗಾತ್ರಜಾನುಭಾವ- ಲೀಲೆ, ವಿಲಾಸ, ಕ್ರೀಡೆ, ವ್ಯಾಯಾಮ,
ಈಜುವುದು, ಗರಡಿ ನರ್ತನ, ನಡೆಯುವುದು ಮುಂತಾದುವುಗಳಲ್ಲಿ ಪ್ರಕಟವಾಗುವ
ದೈಹಿಕ ಶಕ್ತಿ ವಿನಿಮಯವು ಗಾತ್ರಜಾನುಭಾವ.
(೩) ಬುದ್ಧಾ ರಂಭಾನುಭಾವ-ರೀತಿ, ನಡತೆ, ವೃತ್ತಿ, ಪ್ರವೃತ್ತಿಗಳಾದಿ
ಯಾದ ಬುದ್ಧಿಗೆ ಸಂಬಂಧಿಸಿದ ಕ್ರಿಯಾ ವಿಶೇಷಣಾದಿಗಳ ಸಂಯೋಜನೆಯಲ್ಲಿ
ಪ್ರಕಟಿತವಾಗುವುದು ಬುದ್ಧಾರಂಭಾನುಭಾವ.
2