This page has not been fully proofread.

دود
 
ಸ ರಿ ಗ ಮ ದ ಮ ಪ ನಿ ಸ
 
ಸ ನಿ ಪ ಮ
 
ಮ ಗ ಸ
 
ಕೇಸರನಾಟ-ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
 
ಜನ್ಯರಾಗ,
 
ಸಂಗೀತ ಪಾರಿಭಾಷಿಕ ಕೋಶ
 
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
 
ಕೇಸರಾವಳಿ-ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
 
ಜನ್ಯರಾಗ,
 
ಸ ರಿ ಮ ಪ ದ ನಿ ಸ
ಸ ದ ಪ ಗ ರಿ ಸ
 
ಕೇಸರಾವಲೋಕ-ಈ ರಾಗವು ೫೮ನೆ ಮೇಳಕರ್ತ ಹೇಮವತಿಯ ಒಂದು
 
ಜನ್ಯರಾಗ
 
ಸ ರಿ ಮ ಪ ದ ಸ
 
ಸ ನಿ ದ ಪ ಮ ಗ ರಿ ಸ
ಇದು ಪ್ರತಿ ಮಧ್ಯಮವಿರುವ ಸಾಳಗ ಭೈರವ ರಾಗ,
 
ಕೇಶವಪಲ್ಲಿ ಸೇತುರಾಮಯ್ಯ-ಇವರು ಆಂಧ್ರದ ವಾಗ್ಗೇಯಕಾರರು,
ಕಾಮಧೇನು ಎಂಬ ಅಂಕಿತದಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವು ಕಾಮ
ಧನುಗಾನಾಮೃತಂ ಎಂಬ ಎರಡು ಸಂಪುಟಗಳಲ್ಲಿ ಪ್ರಕಟವಾಗಿವೆ.
 
ನಂತರ
 
ಕೇಶವಮೂರ್ತಿ, ಆರ್. ಆರ್. (೧೯೧೬)-ಕರ್ಣಾಟಕದ ಹಾಸನ
ಜಿಲ್ಲೆಯ ರುದ್ರ ಪಟ್ಟಣ ಎಂಬ ಊರು ಸಂಗೀತಗಾರರ ಬೀಡು, ಕೇಶವಮೂರ್ತಿಯವರ
ತಂದೆ ಈ ಊರಿನ ರಾಮಸ್ವಾಮಯ್ಯನವರು. ತಾತ ವೆಂಕಟರಾಮಯ್ಯ ಖ್ಯಾತ
ವಾಗ್ಗೇಯಕಾರರಾಗಿದ್ದರು. ಕೇಶವಮೂರ್ತಿಯವರು ಬಾಲ್ಯದಲ್ಲಿ ಪಿಟೀಲುವಾದನ
ವನ್ನು ಕಲಿತು ಹೆಚ್ಚಿನ ಶಿಕ್ಷಣವನ್ನು ಮೈಸೂರಿನ ಖ್ಯಾತ ವಿದ್ವಾಂಸರಾಗಿದ್ದ ಬಿಡಾರಂ
ಕೃಷ್ಣಪ್ಪನವರಲ್ಲಿ ಕಲಿತು ೧೯೩೦ರ ವೇಳೆಗೆ ಬಿ. ಎಸ್. ರಾಜಯ್ಯಾಂಗಾರರ ಸಂಗಡ
ಸಂಗೀತ ಕಚೇರಿಗಳಲ್ಲಿ ನುಡಿಸಲು ದಕ್ಷಿಣಭಾರತದ ಪ್ರವಾಸ ಮಾಡಿ
ಬೆಂಗಳೂರಿನಲ್ಲಿ ನೆಲೆಸಿದರು. ತಮ್ಮ ಗುರುವಿನ ಹೆಸರಿನಲ್ಲಿ ಶ್ರೀರಾಮಪುರದ ತಮ್ಮ
ಮನೆಯಲ್ಲಿ ಒಂದು ಸಂಗೀತಶಾಲೆಯನ್ನು, ಮಲ್ಲೇಶ್ವರದಲ್ಲಿ ಅದರ ಶಾಖೆಯನ್ನೂ
ಸ್ಥಾಪಿಸಿ ನಡೆಸುತ್ತ ಬಂದಿದ್ದಾರೆ. ಇವರು ಏಳು ತಂತಿಗಳ ಪಿಟೀಲುವಾದಕರು.
ಕರ್ಣಾಟಕ ಸಂಗೀತದ ಪ್ರಸಿದ್ಧ ಗಾಯಕರಿಗೆಲ್ಲಾ ಪಕ್ಕವಾದ್ಯ ನುಡಿಸಿದ್ದಾರೆ. ಅನೇಕ
ತನಿ ಕಚೇರಿಗಳನ್ನು ಮಾಡಿದ್ದಾರೆ.
ಇವರ ವಾದನವು ತುಂಬಿದ ನಾದದಿಂದ ಕೂಡಿದ
ಪರಿಪಕ್ವವಾದ ಆಹ್ಲಾದ
ದಕರವಾದ ಗಂಡುಶೈಲಿ. ಇದಲ್ಲದೆ ಸಂಗೀತದ ವಿಚಾರವಾಗಿ
ಕನ್ನಡದಲ್ಲಿ ೧೮ ಗ್ರಂಥಗಳನ್ನು ಬರೆದು ಪ್ರಕಟಿಸಿದ್ದಾರೆ. ಇವರು ಉತ್ತಮ ಭಾಷಣ