2023-07-03 07:04:25 by jayusudindra
This page has been fully proofread once and needs a second look.
ಸ ಮ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಸ ನಿ ಪ ಮ ಗ ರಿ ಸ
ಉಪಾಂಗರಾಗ ದ್ವಿತೀಯ ಘನರಾಗ ಪಂಚಕಗಳಲ್ಲಿ ಒಂದು ರಾಗ, ಮಧ್ಯಮ
ಮತ್ತು ನಿಷಾದವು ರಾಗಛಾಯಾ ಸ್ವರಗಳು, ಪಂಚಮವು ಅಂಶಸ್ವರ. ರಿಷಭ,
ಗಾಂಧಾರ, ಮಧ್ಯಮವು ನ್ಯಾಸ ಸ್ವರಗಳಲ್ಲಿ, ಪ್ರಾತಃಕಾಲದ ರಾಗ, ಪ್ರಾರ್ಥನೆ ಮತ್ತು
ಶ್ಲೋಕ, ಪದ್ಯಗಳನ್ನು ಹಾಡಲು ಈ ರಾಗವನ್ನು ಹೆಚ್ಚಾಗಿ ಬಳಸುತ್ತಾರೆ. ಹಾಸ್ಯ,
ಶೃಂಗಾರ ಹಾಗೂ ವೀರರಸಗಳಿಗೆ ಸೂಕ್ತವಾದ ರಾಗ, ಈ ರಾಗದ ರಚನೆಗಳು
ಷಡ್ಡ, ಗಾಂಧಾರ, ಪಂಚಮ ಮತ್ತು ನಿಷಾದ ಸ್ವರಗಳಿಂದ ಆರಂಭವಾಗುತ್ತವೆ.
ತ್ರಿಸ್ಥಾಯಿ ರಾಗ, ಕೆಲವು ಪ್ರಸಿದ್ಧ ಕೃತಿಗಳು-
ಆದಿ
ಆನಂದ ನಟನಪ್ರಕಾಶಂ
ಭಜನ ಸೇಯವೇ
ನೀವೇನಾಜೀವಮನಿ
ಮುತ್ತು
ಪಲ್ಲವಿ ಶೇಷಯ್ಯರ್
ಅಯ್ಯರ್
ಕೇದಾರ್
ಇದು ಹಿಂದುಸ್ಥಾನಿ ಸಂಗೀತದ ಒಂದು ರಾಗ. ಯಮನ್
ಥಾಟ್ ಅಂದರೆ ಕರ್ಣಾಟಕ ಸಂಗೀತದ ೬೫ನೆ ಮೇಳಕರ್ತರಾಗ,
ಕೇದಾರಗೌಳ
\ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
೨೧೯
ತ್ಯಾಗರಾಜ
-
ಸ ರಿ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
ಉಪಾಂಗರಾಗ, ರಿಷಭ ಮತ್ತು ನಿಷಾದಗಳು ರಾಗ ಛಾಯಾ ಸ್ವರಗಳು. ರಿಷಭ
ಮತ್ತು ಪಂಚಮವು ನ್ಯಾಸ ಸ್ವರಗಳು, ಪಂಚಮವು ಅಂಶಸ್ವರ, ಸ, ರಿ, ಮ, ಪ
ಸ್ವರಗಳಿಂದ ಈ ರಾಗದ ರಚನೆಗಳು ಆರಂಭವಾಗುತ್ತವೆ. ತ್ರಿನಾಯಿರಾಗ.
ರಾತ್ರಿ ವೇಳೆಯಲ್ಲಿ
ಪಣ್‌ಗಾಂಧಾರ ಪಂಚಮವು ಈ ರಾಗವೆಂದು ಹೇಳುತ್ತಾರೆ. ವಿಪ್ರಲಂಭ, ಶೃಂಗಾರ,
ಕರುಣರಸ, ದೈನ್ಯ, ಶ್ರಮ, ಗ್ಲಾನಿ, ನಿರ್ವೇದ ಇತ್ಯಾದಿ ವ್ಯಭಿಚಾರಿ ಭಾವಗಳು,
ಗರ್ವ, ಅಮರ್ಷ ಇತ್ಯಾದಿ ಭಾವಗಳನ್ನು ವ್ಯಕ್ತಗೊಳಿಸಲು ಸೂಕ್ತವಾದ ರಾಗ.