This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಹಾಡುತ್ತಿದ್ದರು. ಪ್ರಣೆಯ ಕೊಕೇಕರ್‌ರವರಲ್ಲಿ ಸಂಗೀತ ಕಲಿತು ಕಾಲೇಜಿನ

ಸಂಗೀತ ಸ್ಪರ್ಧೆಯಲ್ಲಿ ಕೊಳಲುವಾದನದಲ್ಲಿ ಪ್ರಥಮ ಬಹುಮಾನ ಪಡೆದರು.

೧೯೩೩ರಲ್ಲಿ ಪಂಡಿತ್ ಪೂಜಾರಿ ಬುವಾರವರಲ್ಲಿ ಶಿಕ್ಷಣ ಮುಂದುವರಿಸಿದ್ದಲ್ಲದೆ

ಅಲ್ಲಾದಿಯಾಖಾನ್, ಮಾಸ್ಟರ್‌ಕೃಷ್ಣ, ಸವಾಯಿ ಗಂಧರ್ವ, ಗಜಾನನರಾವ್

ಜೋಷಿ ಮುಂತಾದವರ ಕಚೇರಿಗಳಿಂದ ಬಹಳ ಉಪಯೋಗ ಪಡೆದು ಬೆಳಗಾವಿಗೆ

೧೯೩೯ರಲ್ಲಿ ಹಿಂತಿರುಗಿ ಪಂಡಿತ್ ತಮಹನ್‌ಕರ್‌ಬುವಾರವರಲ್ಲಿ ಎಂಟು ವರ್ಷಗಳ

ಕಾಲ ಕಲಿತು ಗಾಂಧರ್ವ ಮಹಾವಿದ್ಯಾಲಯದ ವಿಶಾರದ, ಅಲಂಕಾರ ಪರೀಕ್ಷೆಗಳಲ್ಲಿ

ಉತ್ತೀರ್ಣರಾಗಿ ೧೯೬೩ರಲ್ಲಿ ಸಂಗೀತದಲ್ಲಿ ಡಾಕ್ಟರೇಟ್ ಡಿಗ್ರಿ ಪಡೆದರು.

ಯವರ ಹಾಡುಗಾರಿಕೆಯು ಸಂಪ್ರದಾಯಬದ್ಧವಾದ ಉತ್ತಮ ಹಾಡುಗಾರಿಕೆ
 
ಕುಲಕರ್ಣಿ
 
ಯಾಗಿದೆ.
 
೨೧೩
 

 
ಕುಲಕರ್ಣಿ ಶ್ರೀನಿವಾಸ-
ಇವರು ಕರ್ಣಾಟಕ ಜಿಲ್ಲೆಯ ಧಾರವಾಡ

ಜಿಲ್ಲೆಯ ಹಂಸಭಾವಿಯಲ್ಲಿ ೧೯೧೧ರಲ್ಲಿ ಜನಿಸಿದರು. ರಾಮುಣ್ಣಿಮೆನನ್ನರು ಮತ್ತು

ಕುಂಜು ಕುರುಷ್ಯರಲ್ಲಿ ಕಥಕಳಿ ನೃತ್ಯವನ್ನು ಕಲಿತರು. ೧೯೩೫ರ ನಂತರ ಇವರ

ನೃತ್ಯ ತಂಡವು ಕರ್ಣಾಟಕ ಮತ್ತು ನೆರೆಹೊರೆ ರಾಜ್ಯಗಳಲ್ಲಿ ಪ್ರದರ್ಶನಗಳನ್ನು ನೀಡಿ

ಖ್ಯಾತಿ ತಿ ಪಡೆಯಿತು. ನಂತರ ಕೀರ್ತಿ ಹೊರದೇಶಗಳಲ್ಲಿ ಹರಡಿತು. ಸಿಂಹಳ, ಬರ್ಮ,

ದಕ್ಷಿಣ ಆಫ್ರಿಕಾ ದೇಶಗಳಿಂದ ಆಹ್ವಾನಿತರಾಗಿ ಅಲ್ಲೆಲ್ಲಾ ಹಲವು ನೃತ್ಯ ಪ್ರದರ್ಶನ

ಗಳನ್ನು ನೀಡಿದರು. ೧೯೪೮ರಲ್ಲಿ ಧಾರವಾಡದಲ್ಲಿ ನೃತ್ಯ ಕಲಾ ಕೇಂದ್ರವನ್ನು ಸ್ಥಾಪಿಸಿ

ಕಾಲಕ್ರಮದಲ್ಲಿ ಅದನ್ನು ಹಂಸಭಾವಿಗೆ ವರ್ಗಾಯಿಸಿ ಗುರುಕುಲ ಪದ್ಧತಿಯಲ್ಲಿ ನಡೆಸಿ

ಕೊಂಡು ಬರುತ್ತಿದ್ದಾರೆ. ನಾಟ್ಯಾಚಾರ ಕುಲಕರ್ಣಿಯವರಿಗೆ ರಾಜ್ಯದ ಸಂಗೀತ

ನಾಟಕ ಅಕಾಡೆಮಿಯ ಪ್ರಶಸ್ತಿಯು ದೊರಕಿದೆ.
 

 
ಕುಲಟ -
ಅಭಿನಯ ಶಾಸ್ತ್ರದಲ್ಲಿ ಹೇಳಿರುವ ಒಂದು ಬಗೆಯ ಪರಕೀಯ ಸ್ತ್ರೀ.

 
ಕುಲದಹಾಡು-
ಇದು ಒಂದು ಗೊತ್ತಾದ ಕುಲದ ಜಾನಪದ ಗೀತೆ.

ಇದರಲ್ಲಿ ಆ ಕಾಲದ ಮೂಲ, ಚರಿತ್ರೆ, ಕಸಬು, ಕೆಲವು ಪ್ರಮುಖರ ಹೆಸರು ಎಲ್ಲವೂ
 
ವಿಷಯವಾಗಿದೆ.
 

 
ಕುಲವಳಂ-
ಇದು ತಮಿಳು ನಾಡಿನ ಒಂದು ಬಗೆಯ ಜಾನಪದ ನೃತ್ಯ.

ಇದನ್ನು ಕುಲದ ಹಾಡಿನ ಹಿನ್ನೆಲೆಗೆ ಕುಣಿಯುತ್ತಾರೆ.
 

 
ಕುಳುವನಾಟಕ-
ಇದು ತಮಿಳು ನಾಡಿನ ಒಂದು ಬಗೆಯ ನಾಟಕ.

ಕುರವಂಜಿ ನಾಟಕದ ಆನುಂಬಂಧದಂತಿದೆ ಸಿಂಗನ ಸಹಾಯಕ ಕುಳ್ಳವನಿಗೆ

ಸಂಬಧಿಸಿದೆ. ಬೇಟೆ, ಪಕ್ಷಿಗಳನ್ನು ಹಿಡಿಯುವುದು ಇತ್ಯಾದಿ ಈ ನಾಟಕದ ವಿಷಯ.

ಇದರ ಕೊನೆಯಲ್ಲಿ ಸಿಂಗನು ತನ್ನ ಹೆಂಡತಿ ಸಿಂಗಿಯನ್ನು ಹುಡುಕಿಕೊಂಡು

ಹೋಗುತ್ತಾ ಸ್ವಲ್ಪ ಕಾಲಾನಂತರ ಅವಳನ್ನು ಸಂಧಿಸಿ, ನಾಯಕಿಯಿಂದ ಅವಳು

ಪಡೆದಿರುವ ಬೆಲೆಬಾಳುವ ಬಳುವಳಿಗಳನ್ನು ನೋಡಿ ಸಂತೋಷ ಪಡುತ್ತಾನೆ.